For Quick Alerts
ALLOW NOTIFICATIONS  
For Daily Alerts

ಚುಮುಚುಮು ಮಳೆಗೆ ಬಾಯಿಚಪ್ಪರಿಸೋ ಬಾಳೆಕಾಯಿ ಹಪ್ಪಳ

Posted By:
|

ಮಳೆಗಾಲ ಇನ್ನೇನು ಸಮೀಪಿಸುತ್ತಿದೆ. ಬೇಸಿಗೆ ಕಾಲ ಮುಗಿಯುತ್ತಾ ಬರುತ್ತಿದೆ. ಮಳೆಗಾಲಕ್ಕೆ ಇರುವೆಗಳು ಆಹಾರ ಸಂಗ್ರಹಿಸುವಂತೆ ಮನುಷ್ಯರು ಕೂಡ ಮುಂದಿನ ದಿನಗಳಿಗೆ ಆಹಾರ ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂಬ ಪರಿಜ್ಞಾನವನ್ನು ಈಗಿನ ಸದ್ಯದ ಕರೋನ ಪರಿಸ್ಥಿತಿ ಎಲ್ಲರಿಗೂ ಮನದಟ್ಟು ಮಾಡಿಕೊಡುತ್ತಿದೆ.

ಕರುಂಕುರುಂ ತಿಂಡಿ ಅಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಜಿಟಿಜಿಟಿ ಮಳೆ ಸುರಿಯುವಾಗ ಹಪ್ಪಳ ಕರಿದು ತಿನ್ನೋಣ ಅನ್ನಿಸುವುದು ಸರ್ವೇಸಾಮಾನ್ಯ. ಹಿಂದೆಲ್ಲಾ ಮನೆಮಂದಿಯೆಲ್ಲಾ ಸೇರಿ ಬೇಸಿಗೆಯಲ್ಲಿ ವಿಧವಿಧವಾದ ಹಪ್ಪಳ ತಯಾರಿಸುತ್ತಿದ್ದರು.

Raw Banana Pappad Recipe

ಮನೆಯಲ್ಲಿರೋ ಜನರ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಇಂತಹ ಕೆಲಸವನ್ನು ಫ್ಯಾಕ್ಟರಿಗಳು ಗುತ್ತಿಗೆ ತೆಗೆದುಕೊಂಡು ಬಿಟ್ಟವು ಅಂದರೆ ಅತಿಶಯೋಕ್ತಿ ಆಗಲಾರದು. ಅಲ್ಲದೆ ಫ್ಯಾಕ್ಟರಿ ಮೇಡ್ ಹಪ್ಪಳಕ್ಕೆ ಜನ ಮೊರೆಹೋದರು. ಆದರೆ ಇದೀಗ ಪುನಃ ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ.ಮನೆಯಲ್ಲೇ ಆಹಾರ ತಯಾರಿಕೆ ಮಾಡಿಕೊಳ್ಳುವುದು ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು ಎಂಬುದು ಮನದಟ್ಟಾಗುತ್ತಿದೆ.

ಹಾಗಾಗಿ ಸುಲಭವಾಗಿ ತಯಾರಿಸಬಹುದಾದ ಹಪ್ಪಳದ ರೆಸಿಪಿಯೊಂದನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಅದುವೇ ಬಾಳೆಕಾಯಿ ಹಪ್ಪಳ.

Raw Banana Pappad Recipe/ ಬಾಳೆಕಾಯಿ ಹಪ್ಪಳ
Raw Banana Pappad Recipe/ ಬಾಳೆಕಾಯಿ ಹಪ್ಪಳ
Prep Time
1 Hours40 Mins
Cook Time
8M
Total Time
1 Hours48 Mins

Recipe By: Sushma

Recipe Type: Veg

Serves: 8

Ingredients
  • ಬೇಕಾಗುವ ಸಾಮಗ್ರಿಗಳು -

    ಬಾಳೆಕಾಯಿ - 5

    ಉಪ್ಪು- ರುಚಿಗೆ ತಕ್ಕಷ್ಟು

    ಹಸಿಮೆಣಸು- 5 ರಿಂದ 6

    ಜೀರಿಗೆ - ಎರಡು ಚಮಚ

    ಇಂಗು - ಒಂದು ಹುಣಸೆ ಬೀಜದ ಗಾತ್ರದಷ್ಟು

    ಹುಳಿ(optional)- ಚಿಟಿಕೆ

Red Rice Kanda Poha
How to Prepare
  • ಮಾಡುವ ವಿಧಾನ -

    . ಬಾಳೆಕಾಯಿಯನ್ನು ಸಿಪ್ಪೆ ಸಹಿತ ಅರ್ಧ ಹೆಚ್ಚಿಕೊಂಡು ಹಬೆಯಲ್ಲಿ ಬೇಯಿಸಿಕೊಳ್ಳಿ.

    ಇದಕ್ಕಾಗಿ ನೀವು ಕುಕ್ಕರ್ ನ್ನು ಬಳಸಬಹುದು ಇಲ್ಲವೇ ಇಡ್ಲಿ ಅಟ್ಟದಲ್ಲಿ ಇಟ್ಟು ಕೂಡ ಬೇಯಿಸಬಹುದು.

    . ಬೇಯಿಸಿದ ಬಾಳೆಕಾಯಿಯನ್ನು ತಣಿಯಲು ಬಿಡಿ ಮತ್ತು ಅದರ ಸಿಪ್ಪೆಯನ್ನು ತೆಗೆಯಿರಿ.

    ಬೇಯಿಸಿದ ನಂತರ ಇದು ಸುಲಭವಾಗಿ ಸಿಪ್ಪೆ ಬಿಟ್ಟುಕೊಳ್ಳುತ್ತದೆ.

    . ನಂತರ ಬಾಳೆಕಾಯಿ, ಉಪ್ಪು, ಜೀರಿಗೆ, ಇಂಗು, ಹಸಿಮೆಣಸು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.

    . ಉದ್ದದ ಬಾಳೆಕಾಯಿ ಹಾಕಿದರೆ ಮಿಕ್ಸಿ ಮಾಡುವುದಕ್ಕೆ ಕಷ್ಟವಾಗುತ್ತದೆ. ಹಾಗಾಗಿ ಬಾಳೆಕಾಯಿಯನ್ನು ಸ್ವಲ್ಪ ಜಜ್ಜಿಕೊಂಡು ಸಣ್ಣಸಣ್ಣ ಹೋಳುಗಳಾಗಿ ಮಾಡಿಕೊಂಡರೆ ಮಿಕ್ಸಿಗೆ ತೊಂದರೆಯಾಗುವುದಿಲ್ಲ.

    . ಮಿಕ್ಸಿ ಮಾಡುವಾಗ ಸ್ವಲ್ಪ ನೀರನ್ನೂ ಸೇರಿಸಿಕೊಳ್ಳಿ.ರುಬ್ಬಿದ ಮಿಶ್ರಣವು ಗಟ್ಟಿಯಾದ ಇಡ್ಲಿ ಹಿಟ್ಟಿನ ಹದದಂತಾಗಲಿ.

    .ಬೇಕಿದ್ದರೆ ಹುಣಸೆಹುಳಿ, ಬಿಂಬಲು ಹುಳಿ ಯಾವುದನ್ನಾದರೂ ರುಬ್ಬುವಾಗ ಸೇರಿಸಿಕೊಳ್ಳಬಹುದು.

    ಆದರೆ ಬಾಳೆಕಾಯಿಯಲ್ಲೇ ಸ್ವಲ್ಪ ಹುಳಿಯ ಅಂಶ ಇರುವುದರಿಂದಾಗಿ ಹೆಚ್ಚುವರಿ ಹುಳಿಯನ್ನು ಸೇರಿಸುವ ಅಗತ್ಯವಿಲ್ಲ.

    . ರುಬ್ಬಿದ ಮಿಶ್ರಣವನ್ನು ಸಣ್ಣಸಣ್ಣ ಹಪ್ಪಳದ ಶೇಪಿನಲ್ಲಿ ದೋಸೆ ಹಚ್ಚುವಂತೆ ಒಂದು ಪ್ಲಾಸ್ಟಿಕ್ ಕವರ್ ಮೇಲೆ ಹಚ್ಚಿ ಎರಡರಿಂದ ಮೂರು ದಿನ ಬಿಸಿಲಿನಲ್ಲಿ ಒಣಗಿಸಿ.

    ಒಂದು ಹಪ್ಪಳಕ್ಕೆ ಒಂದು ಸಟಕದಷ್ಟು ಹಿಟ್ಟು ಬೇಕಾಗುತ್ತದೆ. ತೀರಾ ತೆಳುವಾಗಿ ಹಚ್ಚುವ ಅಗತ್ಯವಿಲ್ಲ. ಬಾಳೆಕಾಯಿಯ ಹಚ್ಚುವ ಇಂತಹ ಹಪ್ಪಳವು ಸ್ವಲ್ಪ ದಪ್ಪವೇ ಇರುತ್ತದೆ.

    . ಒತ್ತುವ ಹಪ್ಪಳಕ್ಕಿಂತ ಹಚ್ಚುವ ಹಪ್ಪಳವು ತಯಾರಿಕೆಗೆ ನಿಮಗೆ ಹೆಚ್ಚು ಸಮಯ ಹಿಡಿಯುವುದಿಲ್ಲ ಮತ್ತು ಒಬ್ಬರೇ ತಯಾರಿಸುವುದಕ್ಕೆ ಸಾಧ್ಯವಿದೆ.

    . ಮೂರು ದಿನ ಬಿಸಿಲಿನಲ್ಲಿ ಒಣಗಿದ ಹಪ್ಪಳವನ್ನು ನೀವು ಎರಡು ತಿಂಗಳು ಸಂಗ್ರಹಿಸಿ ಇಡಬಹುದು.

    . ಈ ಹಪ್ಪಳವನ್ನು ಬಿಸಿಬಿಸಿ ಎಣ್ಣೆಯಲ್ಲಿ ಕರಿದರೆ ಊಟದ ಜೊತೆಗೆ ಅಧ್ಬುತವಾಗಿರುತ್ತದೆ.

    .ಸಂಜೆಯ ಸ್ನ್ಯಾಕ್ಸ್ ಗಾಗಿ ಕೂಡ ಕರಿಯಬಹುದು.

    . 5 ಬಾಳೆಕಾಯಿಯಲ್ಲಿ ಅಂದಾಜು 25 ಹಪ್ಪಳವನ್ನು ತಯಾರಿಸಬಹುದು.

    . ಹಪ್ಪಳ ಕರಿದ ನಂತರ ಕಾಯಿತುರಿಯ ಜೊತೆಗೆ ಅಥವಾ ಮಸಾಲಾ ಪಾಪಡ್ ಮಾಡಿಕೊಂಡು ಕೂಡ ಸೇವಿಸಬಹುದು.

Instructions
  • ಪ್ರಯೋಜನಗಳು – ಇದರಲ್ಲಿ ಕಡಿಮೆ ಫ್ಯಾಟ್ ಮತ್ತು ಹೆಚ್ಚು ಪ್ರೊಟೀನ್ ಇರುತ್ತದೆ. 105ರಷ್ಟು ಕ್ಯಾಲೋರಿ ಸಿಗುತ್ತದೆ . ಬಾಳೆಕಾಯಿಯಲ್ಲಿ ಪೊಟಾಷಿಯಂ,ವಿಟಮಿನ್ ಬಿ6, ಮತ್ತು ವಿಟಮಿನ್ ಸಿ ಇರುತ್ತದೆ. .ಒಂದು ಸಾಮಾನ್ಯ ಗಾತ್ರದ ಬಾಳೆಕಾಯಿಯಲ್ಲಿ 25 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಇರುತ್ತದೆ.
Nutritional Information
[ 3.5 of 5 - 73 Users]
X
Desktop Bottom Promotion