For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಟೊಮೆಟೊ ರಸಂ ರೆಸಿಪಿ

|

ದಕ್ಷಿಣ ಭಾರತ ವಿಧವಿಧವಾದ ಅಡುಗೆಗೆ ಹೆಸರುವಾಸಿ. ಅದರಲ್ಲೂ ಅನೇಕ ತರಹದ ರಸಂ, ಸಾರುಗಳು ಇಲ್ಲಿನ ಅಡುಗೆಯ ವಿಶೇಷ. ರಸಂನಲ್ಲಿ ಹೆಚ್ಚು ರುಚಿಕರವೆಂದರೆ ಟೊಮೆಟೊ ರಸಂ.

ವಿಟಮಿನ್, ಮಿನರಲ್, ನಾರಿನಂಶ ಹೇರಳವಾಗಿರುವ ಈ ಟೊಮೆಟೊ ತ್ವಚೆಗೂ ಕಾಂತಿ ನೀಡುತ್ತೆ. ಟೊಮೆಟೊ ಬಳಸಿಕೊಂಡು ರುಚಿಕರವಾದ ಸಾರು ಅಥವಾ ರಸಂ ಅನ್ನು ಹೇಗೆ ತಯಾರಿಸುವುದು ಎಂದು ಈಗ ತಿಳಿಯೋಣ.

Tasty tomato rasam Recipe

ಬೇಕಾಗುವ ಸಾಮಾಗ್ರಿ:
*ಟೊಮೇಟೊ - 1 (ದೊಡ್ಡದು)
*ತೆಂಗಿನತುರಿ (ಬೇಕಿದ್ದರೆ) - 1 ಟೀ ಸ್ಪೂನ್
*ಹೆಸರುಬೇಳೆ - 1 / 4 ಲೋಟ
*ರಸಂ ಪುಡಿ ಅಥವಾ ಸಾರಿನ ಪುಡಿ - ಒಂದೂವರೆ ಚಮಚ (ಖಾರಕ್ಕೆ ತಕ್ಕಂತೆ)
*ಹೆಚ್ಚಿದ ಕೊತ್ತಂಬರಿ ಸೊಪ್ಪು - 1 ಟೀ ಸ್ಪೂನ್
*ಕರಿಬೇವಿನ ಎಲೆಗಳು - ಸ್ವಲ್ಪ
*ಹುಣಸೆ ಹಣ್ಣಿನ ರಸ - ಸ್ವಲ್ಪ
*ಸಕ್ಕರೆ ಅಥವಾ ಬೆಲ್ಲ - 1 / 4 ಟೀ ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು
*ಒಗ್ಗರಣೆಗೆ: ಒಣಮೆಣಸು - 1 , ಎಣ್ಣೆ - 1 ಟೀ ಸ್ಪೂನ್, ಜೀರಿಗೆ - 1 / 2 ಟೀ ಸ್ಪೂನ್, ಸಾಸಿವೆ - 1 / 2 ಟೀ ಸ್ಪೂನ್, ಅರಿಶಿನ - ಚಿಟಿಕೆ, ಇಂಗು - ಸ್ವಲ್ಪ

ಮಾಡುವ ವಿಧಾನ
* 1 ಟೀ ಸ್ಪೂನ್ ನಷ್ಟು ಟೊಮೇಟೊವನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಉಳಿದ ಟೊಮೇಟೊವನ್ನು ದೊಡ್ಡದಾಗಿ ಹೆಚ್ಚಿಕೊಂಡು, ಹೆಸರುಬೇಳೆಯೊಡನೆ ನೀರು, ಚಿಟಿಕೆ ಅರಿಶಿನ, ಒಂದೆರಡು ಹನಿ ಎಣ್ಣೆ ಹಾಕಿ ಕುಕ್ಕರ್ ನಲ್ಲಿ ಒಂದು ವಿಷಲ್ ಆಗುವವರೆಗೆ ಬೇಯಿಸಿಕೊಳ್ಳಿ. ಇದು ತಣ್ಣಗಾದನಂತರ ಮಿಕ್ಸಿಯಲ್ಲಿ ಒಂದು ಸುತ್ತು ತಿರುವಿ, ನುಣ್ಣಗೆ ಮಾಡಿಕೊಳ್ಳಿ.
* ಬಾಣಲಿಯಲ್ಲಿ ಒಗ್ಗರಣೆಗಿಟ್ಟು, ಎಣ್ಣೆ ಕಾದನಂತರ ಒಣಮೆಣಸು, ಸಾಸಿವೆ, ಜೀರಿಗೆ, ಇಂಗು, ಅರಿಶಿನ ಎಲ್ಲವನ್ನೂ ಹಾಕಿ, ಚಟಗುಟ್ಟಿದ ನಂತರ ಟೊಮೇಟೊ ಹೋಳುಗಳನ್ನು ಸೇರಿಸಿ ಸ್ವಲ್ಪ ಬೇಯಿಸಿಕೊಳ್ಳಿ.
* ಇದಕ್ಕೆ ಸಾಂಬಾರ್ ಪುಡಿ ಅಥವಾ ರಸಂ ಪುಡಿ ಸೇರಿಸಿ 1 ನಿಮಿಷ ಕೈಯಾಡಿಸಿ, ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ. ಇದಕ್ಕೆ ಹುಣಸೆ ರಸ, ಉಪ್ಪು, ಸಕ್ಕರೆ ಹಾಕಿ, ಮಿಶ್ರಣ ತೆಳ್ಳಗಾಗುವಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ.
* ಟೊಮೇಟೊ ಹಣ್ಣು ಹುಳಿಯಾಗಿರುವುದರಿಂದ, ಹುಣಸೆರಸ ಸೇರಿಸುವಾಗ ನೋಡಿಕೊಂಡು ಹಾಕಿ. ಮಿಶ್ರಣ ಚೆನ್ನಾಗಿ ಕುದಿಯತೊಡಗಿದಾಗ ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆಗಳನ್ನು ಸೇರಿಸಿ, 5 ನಿಮಿಷ ಕುದಿಸಿ ಇಳಿಸಿ. ಕುದಿಸುವಾಗ ಸ್ವಲ್ಪ ಪುಡಿ ಇಂಗನ್ನು ಸೇರಿಸಿದರೆ ಇನ್ನೂ ಚೆನ್ನಾಗಿರುತ್ತದೆ.

English summary

Tasty tomato rasam Recipe

Tomatoes are very low in calories and fat. They are a rich source of dietary fiber, minerals and vitamins, so take a look to know how to go about with the spicy tomato rasam or sambar recipe.
X
Desktop Bottom Promotion