For Quick Alerts
ALLOW NOTIFICATIONS  
For Daily Alerts

ಆಹಾ, ಹುಳಿಸಿಹಿ ಮಿಶ್ರಿತ ಮಾವಿನ ಹಣ್ಣಿನ ಸಾರು!

|

ಮಳೆಗಾಲ ಹಿಡಿಯುತ್ತಾ ಬಂದಂತೆ ಮಾವಿನ ಕಾಲ ಮುಗಿಯುತ್ತಾ ಬರುತ್ತದೆ. ಆದರೆ ಕರಾವಳಿಯ, ಹಾಗೂ ಮಲೆನಾಡಿನ ಮನೆಗಳಲ್ಲಿ ಮಳೆಗಾಲದುದ್ದಕ್ಕೂ ಚಪ್ಪರಿಸುವ ಕೆಲವು ವಿಶಿಷ್ಟ ಖಾದ್ಯಗಳಿವೆ. ಲಿಂಬೆಯಉಪ್ಪಿನಕಾಯಿ, ಅಪ್ಪೆಮಿಡಿ ಮಾವಿನಕಾಯಿ, ಸಂಡಿಗೆ ಮೊದಲಾದವು ಮಳೆಗಾಲ ಕಳೆಯುವವರೆಗೂ ಊಟದ ರುಚಿಯನ್ನು ಹೆಚ್ಚಿಸುತ್ತವೆ. ಇದಕ್ಕೆ ಇನ್ನೊಂದು ಸೇರ್ಪಡೆಯೆಂದರೆ ಅಪ್ಪೆಸಾರು ಎಂದು ಮಲೆನಾಡಿನ ಜನತೆ ಕರೆಯುವ ಹುಳಿಸಿಹಿ ಮಿಶ್ರಿತ ಸಾರು.

ಸಾಮಾನ್ಯವಾಗಿ ಹೆಚ್ಚಿನವರು ಇಷ್ಟಪಡದ ಕಾಡುಮಾವು ಉಪಯೋಗಿಸಿ ಮಾಡುವ ಈ ಸಾರು ಹಳ್ಳಿಗಳಲ್ಲಿ ಹೆಚ್ಚು ಜನಪ್ರಿಯ. ಅಲ್ಲದೇ ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಸಾರನ್ನು ಅನ್ನದೊಂದಿಗೆ ಕಲಸಿಕೊಂಡು ತಿನ್ನುವವರಿಗಿಂತ ಹಾಗೇ ಬಿಸಿಬಿಸಿ ಟೀ ಕಾಫಿಯ ತರಹ ಹೀರುವವರೇ ಹೆಚ್ಚು.

Tasty Tangy Mango Recipe

ಇದು ಕೊಂಚ ಸಿಹಿ, ಕೊಂಚ ಹುಳಿ, ಕೊಂಚ ಖಾರ, ಕೊಂಚ ಉಪ್ಪು ಹೀಗೆ ಎಲ್ಲಾ ರುಚಿಗಳ ಮಿಶ್ರಣವಾದುದರಿಂದ ವಿಶಿಷ್ಟ ಅನುಭವ ನೀಡುತ್ತದೆ. ಬನ್ನಿ ಈ ರುಚಿಕರ, ಸಾಂಪ್ರಾದಾಯಿಕ, ಅಪ್ಪಟ ಕರ್ನಾಟಕದ ರುಚಿಯನ್ನು ತಯಾರಿಸುವ ಬಗೆಯನ್ನು ಕಲಿಯೋಣ:

ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹತ್ತುನಿಮಿಷಗಳು.
ತಯಾರಿಕಾ ಸಮಯ: ಹತ್ತು ನಿಮಿಷಗಳು ಮನೆಯಲ್ಲೇ ತಯಾರಿಸಿ ರುಚಿಕರವಾದ ಮಾವಿನ ಹಣ್ಣಿನ ಜ್ಯೂಸ್!

ಅಗತ್ಯವಿರುವ ಸಾಮಾಗ್ರಿಗಳು:
*ಹುಳಿಯಾಗಿರುವ ಮಾವಿನ ಕಾಯಿ: ಒಂದು (ದೊಡ್ಡ ಗಾತ್ರದ್ದು)
*ಹಸಿಮೆಣಸು - 2 ರಿಂದ 3
*ಬೇವಿನ ಎಲೆ - ಸುಮಾರು ಹತ್ತು
*ಸಾಸಿವೆ - ಒಂದು ಚಿಕ್ಕ ಚಮಚ
*ಬೆಲ್ಲ - ಒಂದು ಚಿಕ್ಕ ಚಮಚ
*ಜೀರಿಗೆ -ಒಂದು ದೊಡ್ಡ ಚಮಚ
*ಕಾಯಿ ತುರಿ-ಒಂದು ಕಪ್
*ಹಿಂಗು - ಒಂದು ಚಿಟಿಕೆ
*ಎಣ್ಣೆ - ಒಂದು ದೊಡ್ಡ ಚಮಚ
*ಉಪ್ಪು - ರುಚಿಗನುಸಾರ ದಿಢೀರ್ ರುಚಿಗೆ ಸಾಥ್ ನೀಡುವ ಮಾವಿನ ಹಣ್ಣಿನ ಚಿತ್ರಾನ್ನ

ವಿಧಾನ:
*) ಮಾವಿನ ಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ಸುಲಿಯದೇ ಪ್ರೆಶರ್ ಕುಕ್ಕರಿನಲ್ಲಿ ಎರಡು ಸೀಟಿ ಬರುವವರೆಗೆ ಬೇಯಿಸಿ.
*) ಕುಕ್ಕರ್ ತಣಿಯುವವರೆಗೆ ಮಿಕ್ಸಿಯಲ್ಲಿ ಜೀರಿಗೆ, ಹಸಿಮೆಣಸು, ಕಾಯಿತುರಿ, ಹಿಂಗು, ಬೆಲ್ಲ ಮತ್ತು ಕೊಂಚ ನೀರು ಹಾಕಿ ನುಣ್ಣಗೆ ಅರೆದು ಒಂದು ಪಾತ್ರೆಯಲ್ಲಿ ಹಾಕಿಡಿ.
*) ಈಗ ತಣಿದ ಕುಕ್ಕರಿನಿಂದ ಮಾವಿನಕಾಯಿಯನ್ನು ಹೊರತೆಗೆದು ಸಿಪ್ಪೆ ಸುಲಿಯಿರಿ. ನಂತರ ಗೊರಟನ್ನು ಕಿವುಚಿ ರಸವನ್ನು ಹಿಂಡಿ ತೆಗೆಯಿರಿ. ಸಿಪ್ಪೆಯ ಅಡಿಯ ರಸವನ್ನೂ ಚಮಚದಿಂದ ಕೆರೆದು ತೆಗೆಯಿರಿ.
*) ಕೊಂಚ ನೀರು ಸೇರಿಸಿ ಈ ರಸವನ್ನು ಮಿಕ್ಸಿಯಲ್ಲಿ ನುಣ್ಣಗಾಗುವಂತೆ ಅರೆಯಿರಿ. ಏಕೆಂದರೆ ಮಾವಿನ ರಸದಲ್ಲಿ ಸಾಕಷ್ಟು ನಾರು ಇರುತ್ತದೆ, ಈ ನಾರು ಪುಡಿಪುಡಿಯಾಗಲು ಮಿಕ್ಸಿಯಲ್ಲಿ ಅರೆಯುವುದು ಅಗತ್ಯ. ಬಳಿಕ ಟೀ ಸೋಸುವ ಶೋಧಕ ಅಥವಾ ನೂಲು ಕೊಂಚ ದೂರ ದೂರ ಇರುವ ಬಟ್ಟೆಯೊಂದನ್ನು ಬಳಸಿ ಸೋಸಿ ಪುಡಿಯಾಗಿದ್ದ ನಾರನ್ನು ಹೊರತೆಗೆಯಿರಿ.
*) ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ ಸಿಡಿಸಿ ಬೇವಿನ ಎಲೆ ಹಾಕಿ ತಿರುವಿ.
*) ಈಗ ಮೊದಲು ಅರೆದಿದ್ದ ಮಸಾಲೆಯನ್ನು ಹಾಕಿ ಕೊಂಚ ತಿರುವಿ.
*) ಬಳಿಕ ಶೋಧಿಸಿರುವ ಮಾವಿನ ರಸವನ್ನು ಹಾಕಿ ತಿರುವುದನ್ನು ಮುಂದುವರೆಸಿ.
*) ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ, ಉಪ್ಪು ಹಾಕಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿಯನ್ನು ಅತಿ ಚಿಕ್ಕದಾಗಿಸಿ ಎರಡು ನಿಮಿಷ ಮುಚ್ಚಳ ಮುಚ್ಚಿ ಕುದಿಸಿ.
*) ಎರಡು ನಿಮಿಷವಾಗುತ್ತಿದ್ದಂತೆಯೇ ಒಲೆ ಆರಿಸಿ ಮುಚ್ಚಳ ತೆರೆದು ಆರಲು ಬಿಡಿ. (ಹೆಚ್ಚು ಕುದಿಸಿದರೆ ಅಥವಾ ಮುಚ್ಚಿಯೇ ಇದ್ದರೆ ಕಹಿಯಾಗುತ್ತದೆ)
*) ನೀರು ಕಡಿಮೆಯಿದ್ದರೆ ಸಾರಿನಂತೆ ಅನ್ನ, ಚಪಾತಿ, ರೊಟ್ಟಿಗಳೊಂದಿಗೂ, ನೀರು ಹೆಚ್ಚಿದ್ದರೆ ರಸಂ, ಟೀಯಂತೆ ಹೀರುತ್ತಲೂ ಕುಡಿಯಬಹುದು, ಆಯ್ಕೆ ನಿಮ್ಮದು.

ಮಾವಿನ ಹಣ್ಣಿನ ಆಯ್ಕೆ:
*ಹಣ್ಣಾದ ಬಳಿಕ ಅತ್ಯಂತ ಸಿಹಿಯಾಗುವ ಮಾವಿನ ತಳಿಯ ಕಾಯಿ ಅತ್ಯುತ್ತಮ ಆಯ್ಕೆಯಾಗಿದೆ. ಉದಾಹರಣೆಗೆ ಮಲಗೋಬಾ, ಅಲ್ಫೋನ್ಸೋ, ಸಿಂಧೂರ ಮೊದಲಾದವು. ಇವುಗಳ ತಿರುಳಿನಲ್ಲಿ ನಾರು ಅತ್ಯಲ್ಪವಾಗಿರುವುದರಿಂದ ಶೋಧಿಸುವ ಅಗತ್ಯವೇ ಇರುವುದಿಲ್ಲ.
*ಒಂದು ವೇಳೆ ಕಾಡು ಮಾವಿನ ಹಣ್ಣನ್ನು ಆಯ್ಕೆ ಮಾಡಿದರೆ ಒಂದು ಸಾಕಾಗುವುದಿಲ್ಲ. ಸುಮಾರು ಹತ್ತಾದರೂ ಬೇಕಾಗುತ್ತದೆ. ಆದರೆ ಇದರಲ್ಲಿ ನಾರು ಹೆಚ್ಚಿರುವುದರಿಂದ ಸೋಸಲು ಹೆಚ್ಚು ಸಮಯ ಬೇಕಾಗುತ್ತದೆ. ಇದನ್ನು ಸುಲಭಗೊಳಿಸಲು ಬಟ್ಟೆಯೊಳಗೆ ಹಾಕಿ ಹಿಂಡುವುದು ಒಂದು ಉಪಾಯವಾಗಿದೆ.

ಕಿವಿಮಾತು:
*) ಬೇಯಿಸುವ ಮೊದಲು ಮಾವಿನ ಹಣ್ಣಿನ ತೊಟ್ಟಿನ ಭಾಗವನ್ನು ಕತ್ತರಿಸಿ ತೆಗೆಯಲು ಮರೆಯದಿರಿ. ಏಕೆಂದರೆ ಇದರಲ್ಲಿ ಒಂದೆರಡು ಹನಿ ಅತ್ಯಂತ ಕಹಿಯಾದ ರಸವಿರುತ್ತದೆ. ಇದು ಖಾದ್ಯವನ್ನು ಕಹಿಗೊಳಿಸುತ್ತದೆ.
*) ಒಂದು ವೇಳೆ ಮಾವಿನ ಸಿಪ್ಪೆ ಅತ್ಯಂತ ತೆಳುವಾಗಿದ್ದರೆ (ಉದಾಹರಣೆಗೆ ರಸಪೂರಿ) ಈ ಸಿಪ್ಪೆಗಳನ್ನೂ ಸಾರಿಗೆ ಹಾಕಿ ಬೇಯಿಸಿ. ಅನ್ನದೊಂದಿಗೆ ಸೇವಿಸಲು ಚೆನ್ನಾಗಿರುತ್ತದೆ.

English summary

Tasty Tangy Mango Recipe

Though the mango season has come to an end, here is one last recipe that you ought to try. The mango rasam or the 'appe saru' as it is typically known in Karnataka, is one of the best recipes to try this monsoon. This recipe is famous in the north Karnataka. It is basically a drink, which is served during the lunch. But, some also mix it with the rice.
Story first published: Friday, August 7, 2015, 12:18 [IST]
X
Desktop Bottom Promotion