For Quick Alerts
ALLOW NOTIFICATIONS  
For Daily Alerts

ನಾಲಿಗೆಯ ರುಚಿ ತಣಿಸುವ ಮಂಗಳೂರು ಶೈಲಿಯ ಅವಿಲ್ ಪದಾರ್ಥ!

|

ಮಧ್ಯಾಹ್ನದ ಊಟ ಬೊಂಬಾಟ್ ಆಗಿರಬೇಕೆಂದು ನಾವು ಭಾರತೀಯರು ಬಯಸುತ್ತೇವೆ. ಊಟ ತಿಂಡಿಗೆ ನಾವು ಕೊಡುವ ಪ್ರಾಶಸ್ತ್ಯ ಗೌರವ ವಿದೇಶದವರನ್ನೂ ಆಕರ್ಷಿಸುತ್ತದೆ. ಅವರು ಕೂಡ ನಮ್ಮ ಆಹಾರ ಕ್ರಮಗಳನ್ನು ಪಾಲಿಸುವುದು ಇದೇ ಕಾರಣಕ್ಕಾಗಿಯಾಗಿದೆ.

ನಾವು ಹೊರಗಿನ ಫಾಸ್ಟ್ ಫುಡ್ ಆಹಾರಗಳನ್ನು ಎಷ್ಟು ತಿಂದರೂ ಮನೆಯೂಟ ಕೊಡುವ ರುಚಿಯನ್ನು ಅದು ಎಂದಿಗೂ ನೀಡಲಾರದು. ಅಮ್ಮನ ಕೈಯಡುಗೆಯ ಸ್ವಾದ ಯಾವ ಐದು ಅಂತಸ್ತಿನ ಹೋಟೆಲ್ ಊಟಕ್ಕೂ ಸಮನಾಗದು. ಅಂದಿನ ಕಾಲದಲ್ಲಿ ಬಿಸಿ ಬಿಸಿ ಗಂಜಿ ಚಟ್ನಿಯನ್ನು ಉಂಡ ಜನರೂ ಕೂಡ ಇಂದಿನ ಪ್ಯಾಟೆ ಹೈದರಿಗಿಂತ ಸದೃಢರಾಗಿದ್ದರು. ಬರ್ಗರ್, ಪಿಜ್ಜಾ, ಫ್ರೆಂಚ್ ಫ್ರೈಗಳ ಸುಗಂಧಗಳ ಅವರಿಗೆ ಅರಿವಿಲ್ಲದಿದ್ದರೂ ಗಟ್ಟಿ ಮುಟ್ಟಾಗಿ ಆರೋಗ್ಯವಂತರಾಗಿ ಬಾಳಿದ್ದಾರೆ.

ಆದ್ದರಿಂದಲೇ ಹಳ್ಳಿಯ ಮನೆಗಳಲ್ಲಿ ತಯಾರಾಗುವ ಒಂದು ಕರಿ ಪಾಕ ವಿಧಾನದೊಂದಿಗೆ ಇಂದಿನ ಲೇಖನದಲ್ಲಿ ನಾವು ಬಂದಿದ್ದೇವೆ. ಇದೂ ಕೂಡ ಆರೋಗ್ಯಯುತ ತರಕಾರಿಗಳು ಮತ್ತು ನಿಮ್ಮ ದೇಹದಲ್ಲಿ ಪೌಷ್ಟಿಕಾಂಶವನ್ನು ಉಂಟುಮಾಡುವ ಕೆಲವೊಂದು ಸಾಮಾಗ್ರಿಗಳಿಂದ ತಯಾರಾಗಿರುವಂಥದ್ದಾಗಿದೆ. ಅನ್ನ, ತಿಂಡಿ ಹೀಗೆ ಯಾವುದೇ ಖಾದ್ಯಗಳಿದ್ದರೂ ಅವಿಲ್ ನಿಮಗೆ ಚೇತೋಹಾರಿ ಮತ್ತು ಸೂಕ್ತ ಕಾಂಬಿನೇಶನ್ ಆಗಿದೆ. ಹಾಗಿದ್ದರೆ ಅವಿಲ್ ತಯಾರಿ ವಿಧಾನವನ್ನು ಇಲ್ಲಿ ನೀಡಿದ್ದು ನೀವೂ ಪ್ರಯತ್ನಸಿ.

ಅಕ್ಕಿ ಹುಡಿಯಿಂದ ಮಾಡಿದ ರುಚಿ ರುಚಿಯಾದ ರೊಟ್ಟಿ ರೆಸಿಪಿ

Tasty Mangalore style Avil recipe

ಪ್ರಮಾಣ: 4 ಜನರಿಗೆ ಸಾಕಾಗುವಷ್ಟು

ಸಿದ್ಧತಾ ಸಮಯ: 15 ನಿಮಿಷಗಳು

ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು

*ಬಟಾಣಿ - 1 ಕಪ್

*ಆಲೂಗಡ್ಡೆ - 2 ಮಧ್ಯಮ ಗಾತ್ರದ್ದು

*ಕ್ಯಾರೇಟ್ - 2

*ಬೀಟ್‌ರೂಟ್ - 1 ದೊಡ್ಡದು

*ಬೀನ್ಸ್ - 1/2 ಕೆಜಿ

*ತೊಂಡೆಕಾಯಿ - 1/2 ಕೆಜಿ

*ಬಾಳೆಕಾಯಿ - 1

*ಸೌತೆಕಾಯಿ - 1

*ತೆಂಗಿನ ಕಾಯಿ - 2 ಕಪ್

*ಅರಶಿನ - ಸ್ವಲ್ಪ

*ಜೀರಿಗೆ - 1/2 ಚಮಚ

*ಉಪ್ಪು ರುಚಿಗೆ ತಕ್ಕಷ್ಟು

*ತೆಂಗಿನ ಎಣ್ಣೆ - 2 ಚಮಚ

*ಮಜ್ಜಿಗೆ - 1 ಕಪ್

ಮಾಡುವ ವಿಧಾನ

* ಮೊದಲಿಗೆ ತರಕಾರಿಗಳನ್ನು ಉದ್ದಕ್ಕೆ ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಳ್ಳಿ. ಪಾತ್ರೆಯಲ್ಲಿ ಸ್ವಲ್ಪ ನೀರನ್ನಿಟ್ಟು ಅದಕ್ಕೆ ತರಕಾರಿಗಳನ್ನು ಹಾಕಿ ಇದಕ್ಕೆ ಉಪ್ಪು, ಅರಶಿನ ಸೇರಿಸಿ ಬೇಯಲು ಬಿಡಿ.

*ಇದೇ ಸಮಯದಲ್ಲಿ ತೆಂಗಿನ ಕಾಯಿಯನ್ನು ತುರಿದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಸ್ವಲ್ಪ ಜೀರಿಗೆ ಹಾಕಿ ಮಜ್ಜಿಗೆಯೊಂದಿಗೆ ಕಡೆದುಕೊಳ್ಳಿ ನೀರು ಹಾಕದಿರಿ.

*ಬೆಂದ ತರಕಾರಿಗೆ ಈ ಕಾಯಿಯ ಮಿಶ್ರಣವನ್ನು ಸೇರಿಸಿ ದಪ್ಪನೆ ಇದ್ದಲ್ಲಿ ಇದಕ್ಕೆ ಮಜ್ಜಿಗೆಯನ್ನು ಹಾಕಿ. ಈ ಮಿಶ್ರಣ ಬೇಯುತ್ತಿದ್ದಂತೆ ಕೊನೆಗೆ ತೆಂಗಿನೆಣ್ಣೆಯ ಒಗ್ಗರಣೆಯನ್ನು ಸೇರಿಸಿ. 10 ನಿಮಿಷಗಳ ತರುವಾಯ ಗ್ಯಾಸ್ ಆಫ್ ಮಾಡಿ.

*ತರಕಾರಿ ಅವಿಲ್ ರೆಸಿಪಿ ಸವಿಯಲು ಸಿದ್ಧವಾಗಿದೆ. ರೊಟ್ಡಿ, ದೋಸೆ, ಅನ್ನಕ್ಕೆ ಸೂಕ್ತವಾಗಿರುವ ಇದು ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುವುದು ಖಂಡಿತ.

English summary

Tasty Mangalore style Avil recipe

In Indian sizuwine each and every dish so tempting and tasteful. Foreigners also liked our dishes and following our food culture. In today's article we have given one delightful curry named as avil filled with rich proteins and healthy vegetables.
Story first published: Wednesday, July 30, 2014, 15:11 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more