ಘಮ್ಮೆನ್ನುವ ಸಾಂಬರ್- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

By: manu
Subscribe to Boldsky

ಭಾರತೀಯರು ಭೋಜನಪ್ರಿಯರು ಎಂಬುದು ನಮ್ಮಲ್ಲಿ ತಯಾರಿಸುವ ವಿವಿಧ ಬಗೆಯ ಭಕ್ಷ್ಯ ಭೋಜನಗಳು ಖಾತ್ರಿಪಡಿಸಿವೆ. ವಿದೇಶಿ ನೆಲದಲ್ಲೂ ನಮ್ಮ ಭಕ್ಷ್ಯ ಭೋಜನಗಳು ಇದೀಗ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದು ಅಲ್ಲೂ ಭಾರತದ ಖಾದ್ಯ ಪರಿಮಳ ಪಸರಿಸಿದೆ. ಅದರಲ್ಲೂ ಉತ್ತರ ಭಾರತೀಯರಿಗೆ ಪರೋಟ ಮತ್ತು ಆಲೂ ಸಬ್ಜಿ (ಆಲೂಗಡ್ಡೆ ಪಲ್ಯ) ಹೇಗೆ ಪ್ರಿಯವೋ ಅಂತೆಯೇ ದಕ್ಷಿಣ ಭಾರತೀಯರಿಗೆ ಸಾಂಬಾರ್ ಜೀವನಾಡಿಯಿದ್ದಂತೆ. ಊಟಕ್ಕೆ ಉಪ್ಪಿನಕಾಯಿ ಎಂಬಂತೆ ಪ್ರಮುಖ ಸಮಾರಂಭಗಳಲ್ಲಿ ಅವರು ಹೆಚ್ಚು ಬಳಸುವುದು ಸಾಂಬಾರ್ ಆಗಿದೆ. ಅತಿಥಿಗಳು ಮನೆಗೆ ಬಂದಾಗ ದಿಢೀರ್ ತಯಾರಾಗುವ ಮಹಿಳೆಯರ ಸ್ನೇಹಿತ ಸಾಂಬಾರ್ ಎಂಬುದನ್ನು ನಾವಿಲ್ಲಿ ಪುನರುಚ್ಛರಿಸಲೇಬೇಕು.

ನಿತ್ಯವೂ ಸಿದ್ಧಪಡಿಸಿದ ತಿಳಿಸಾರು ಇತರ ಪದರ್ಥಗಳು ಬೇಜಾರು ಹಿಡಿಸಿದವು ಎಂದಾದಲ್ಲಿ ಸಾಂಬಾರ್ ಮತ್ತು ಹಪ್ಪಳವನ್ನು ಕರಿದರೆ ಆಯಿತು. ಒಂದಿಷ್ಟು ಹೆಚ್ಚಾಗಿಯೇ ಮಧ್ಯಾಹ್ನದೂಟ ಹೊಟ್ಟೆಯನ್ನು ಸೇರುತ್ತದೆ. ಅಂತೂ ಊಟದ ಸ್ವಾದ ಇರುವುದೇ ಸಾಂಬಾರ್‌ನ ರುಚಿಯಲ್ಲಿ ಎಂಬುದಂತೂ ಸತ್ಯ. ಬನ್ನಿ ಇಂದು ಬೋಲ್ಡ್ ಸ್ಕೈ ನಿಮಗಾಗಿ ಸರಳವಾಗಿ ತಯಾರಿಸಬಹುದಾದ ವಿಭಿನ್ನ ಶೈಲಿಯ ಸಾಂಬರ್ ರೆಸಿಪಿಯನ್ನು ಪರಿಚಯಿಸುತ್ತಿದ್ದು, ಅವು ಯಾವುದು ಎಂಬುದನ್ನು ಸ್ಲೈಡ್ ಶೋ ಮೂಲಕ ಓದಿ...

ಬದನೆಕಾಯಿ ಸಾಂಬರ್

ಬದನೆಕಾಯಿ ಸಾಂಬರ್

ಬದನೆಕಾಯಿ ಎಂದಾಕ್ಷಣ ಹೆಚ್ಚಿನವರು ಮುಖ ಸಿಂಡರಿಸುವುದೇ ಹೆಚ್ಚು, ಆದರೆ ಇದರಲ್ಲಿರುವ ಸಮೃದ್ಧವಾದ ಕಬ್ಬಿಣಾಂಶ, ನಾರಿನಂಶ ಮತ್ತು ಕರಗುವಂತಹ ಕಾರ್ಬೊಹೈಡ್ರೆಟ್‌ಗಳು, ದೇಹದ ಕ್ಯಾಲೋರಿಯನ್ನು ದಹಿಸುವುದರ ಜೊತೆಗೆ, ಮಧುಮೇಹ ಮುಂತಾದ ರೋಗಗಳನ್ನು ಹೊಡೆದೊಡಿಸುವಂತಹ ಅಂಶಗಳನ್ನು ಅಗಾಧ ಪ್ರಮಾಣದಲ್ಲಿ ಒಳಗೊಂಡಿದೆ. ಅಷ್ಟೇ ಅಲ್ಲದೆ ಹೃದಯಕ್ಕೆ ಆರೋಗ್ಯವನ್ನು ಒದಗಿಸುವುದರ ಜೊತೆಗೆ, ನಿಮಗೆ ಇತರ ಕಾಯಿಲೆಗಳು ಕೂಡ ಬರದಂತೆ ತಡೆಯುತ್ತವೆ. (ಸೂಚನೆ- ದೇಹದಲ್ಲಿ ಗಾಯ, ಕಜ್ಜಿ ಮುಂತಾದ ಸಮಸ್ಯೆಗಳಿದ್ದರೆ ಬದನೆಕಾಯಿ ಸೇವಿಸದಿರುವುದು ಉತ್ತಮ) ಬನ್ನಿ ಬದನೆಕಾಯಿ ಸಾಂಬರ್ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಗುಳ್ಳ-ಬದನೆಕಾಯಿ ಸಾಂಬಾರ್‌

ಅದ್ವಿತೀಯ ಸ್ವಾದ- ಉಡುಪಿ ಸಾಂಬರ್

ಅದ್ವಿತೀಯ ಸ್ವಾದ- ಉಡುಪಿ ಸಾಂಬರ್

ಉಡುಪಿ ಶೈಲಿಯ ಸಾ೦ಬಾರ್ ಅನ್ನು ತಯಾರಿಸುವ ವಿಧಾನವೇನೋ ಸಾಮಾನ್ಯವಾಗಿ ಎಲ್ಲಾ ತೆರನಾದ ಸಾ೦ಬಾರ್ ಅನ್ನು ತಯಾರಿಸುವ೦ತೆಯೇ ಇದ್ದರೂ ಕೂಡ, ಇದರ ಅದ್ವಿತೀಯ ಸ್ವಾದವು ಇದನ್ನು ಇತರ ಸ್ಥಳಗಳ ಸಾ೦ಬಾರ್ ಗಳಿಗಿ೦ತ ವಿಭಿನ್ನವನ್ನಾಗಿಸುತ್ತದೆ. ಉಡುಪಿ ಸಾ೦ಬಾರ್‌ನ ತಯಾರಿಕೆಯಲ್ಲಿ ಬಳಸಲಾಗುವ ಒ೦ದು ವಿಶೇಷವಾದ ಮಸಾಲೆಯು ಈ ಸಾ೦ಬಾರ್‌ನ ಸ್ವಾದವನ್ನು ಇತರ ಎಲ್ಲಾ ಸಾ೦ಬಾರ್‌ಗಳ ತಯಾರಿಕಾ ವಿಧಾನ ಹಾಗೂ ಸ್ವಾದಗಳಿಗಿ೦ತಲೂ ಪ್ರತ್ಯೇಕವಾಗಿಸುತ್ತದೆ. ಆಹಾ ಉಡುಪಿ ಶೈಲಿಯ ರುಚಿಕರ ಸಾಂಬಾರ್ ರೆಸಿಪಿ!

ಮೂಲಂಗಿ ಸಾಂಬಾರ್

ಮೂಲಂಗಿ ಸಾಂಬಾರ್

ಮೂಲಂಗಿಯಲ್ಲಿ ಅಡಗಿರುವ ಪೊಟ್ಯಾಶಿಯಂ, ಫೋಲಿಕ್ ಆಮ್ಲ, ವಿಟಮಿನ್ ಬಿ6 ಸಹಿತ ವಿವಿಧ ವಿಟಮಿನ್‌ಗಳು, ಕ್ಯಾಲ್ಸಿಯಂ ಮೊದಲಾದ ಪೋಷಕಾಂಶಗಳು ಇದನ್ನೊಂದು ಆರೋಗ್ಯಕರ ಆಹಾರವಾಗಿಸಿದೆ. ಅದರಲ್ಲೂ ಮಸಾಲೆ ದೋಸೆ. ಇಡ್ಲಿ ಮತ್ತಿತರ ತಿಂಡಿಗಳೊಂದಿಗೆ ಮೂಲಂಗಿ ಸಾಂಬಾರ್ ಸೇರಿಸಿ ತಿಂದರೆ ಆ ರುಚಿಗೆ ಮನಸೋಲದವರೇ ಇಲ್ಲ...! ಬನ್ನಿ ಮೂಲಂಗಿ ಸಾಂಬರ್ ತಯಾರಿಸುವ ವಿಧಾನ ನೋಡೋಣ... ಸರಳ ತಯಾರಿಕೆಯ ಹರಿಕಾರ ಮೂಲಂಗಿ ಸಾಂಬಾರ್

ನುಗ್ಗೆಕಾಯಿ ಸಾಂಬಾರ್

ನುಗ್ಗೆಕಾಯಿ ಸಾಂಬಾರ್

ಸಾಮಾನ್ಯವಾಗಿ ವರ್ಷವಿಡೀ ಸಾಂಬಾರಿನಲ್ಲಿ ಕಂಡುಬರುವ ತರಕಾರಿಗಳೆಂದರೆ ಮೂಲಂಗಿ, ನುಗ್ಗೇಕಾಯಿ ಮತ್ತು ಬದನೇಕಾಯಿ. ಆದರೆ ಹೆಚ್ಚಿನವರಿಗೆ ನುಗ್ಗೇಕಾಯಿ ಎಂದರೆ ಏನೋ ತಾತ್ಸಾರ. ಸಾಂಬರ್ ನಲ್ಲಿ ಹಾಕಿರುವ ನುಗ್ಗೆಕಾಯಿಯನ್ನು ತಿನ್ನದೇ ಹಾಗೇ ಬಿಟ್ಟುಬಿಡುತ್ತಾರೆ. ಆದರೆ ನುಗ್ಗೆಕಾಯಿಯಲ್ಲಿ ಉತ್ತಮ ಪೋಷಕಾಂಶ ಗಳಿರುವುದರಿಂದ ತಿನ್ನದಿರುವುದು ಸಲ್ಲದು. ಬನ್ನಿ ನುಗ್ಗೆ ಕಾಯಿ ಸಾಂಬರ್ ಮಾಡುವ ವಿಧಾನವನ್ನು ನೋಡೋಣ... ಆರೋಗ್ಯಕರ ರುಚಿಕರ ನುಗ್ಗೆಕಾಯಿ ಸಾಂಬಾರ್

ಕೊಂಕಣಿ ಶೈಲಿಯಲ್ಲಿ ಮಾಡುವ ಸಾಂಬಾರ್

ಕೊಂಕಣಿ ಶೈಲಿಯಲ್ಲಿ ಮಾಡುವ ಸಾಂಬಾರ್

ಅರೆ, ಕೊಂಕಣಿ ಶೈಲಿಯ ಸಾಂಬರ್ ಎಂದಾಕ್ಷಣ, ಕೊಂಕಣಿಯವರು ಮಾತ್ರ ಮಾಡುವ ಸಾಂಬರ್ ಎಂದು ತಿಳಿದುಕೊಳ್ಳಬೇಡಿ. ಎಲ್ಲಾ ಬಗೆಯ ಸಾಂಬರ್‌ಕ್ಕಿಂತಲೂ ಇದರ ರುಚಿ ಸ್ವಲ್ಪ ಭಿನ್ನವಾಗಿರುವುದೇ ಇದರ ವೈಶಿಷ್ಟ್ಯ ಬನ್ನಿ ಕೊಂಕಣಿ ಶೈಲಿಯ ಸಾಂಬರ್ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಇತರ ಸಾಂಬಾರ್ ಗಿಂತ ಭಿನ್ನ, ಕೊಂಕಣಿ ಸಾಂಬಾರ್

  

 

English summary

Mouthwatering variety styles of Sambar recipe

Sambar is prepared on a regular basis, but there are so many variety of sambar. Here are here some of the different sambar recipe that you can try it at home.
Subscribe Newsletter