For Quick Alerts
ALLOW NOTIFICATIONS  
For Daily Alerts

ರುಚಿ ರುಚಿಯಾದ ಮಾವಿನಕಾಯಿ ರಸಂ

|

ಮಾವಿನಕಾಯಿ ಬಳಸಿ ಮಾಡುವ ಅನೇಕ ಬಗೆಯ ನಳಪಾಕವನ್ನು ಈ ಸಮಯದಲ್ಲಿ ಮಾಡುವುದೇ ಸೂಕ್ತ. ಇಲ್ಲದಿದ್ದರೆ ಮಾವಿನಕಾಯಿಗಾಗಿ ಮುಂದಿನ ವರ್ಷದ ತನಕ ಕಾಯಬೇಕಾಗುತ್ತದೆ.

ಮಾವಿನ ಕಾಯಿ ಬಳಸಿ ನೂರಕ್ಕೂ ಹೆಚ್ಚು ಅಡುಗೆಗಳನ್ನು ತಯಾರಿಸಬಹುದು. ಇಲ್ಲಿ ನಾವು ರಾತ್ರಿ ಅನ್ನದ ಜೊತೆ ತಿನ್ನಲು ಮಾವಿನ ಕಾಯಿ ಸಾರುಮಾಡುವ ರೆಸಿಪಿ ನೀಡಿದ್ದೇವೆ ನೋಡಿ:

Mango Rasam In Simple Steps
 

ಬೇಕಾಗುವ ಸಾಮಾಗ್ರಿಗಳು

* ಹಸಿ ಮಾವಿನಕಾಯಿ1 (ಕತ್ತರಿಸಿ ಬೇಯಿಸಿದ್ದು)

* 1 ತುಂಡು ಬೆಲ್ಲ

* ಅರ್ಧ ಚಮಚ ಕರಿ ಮೆಣಸಿನ ಪುಡಿ

* 1 ಚಮಚ ಜೀರಿಗೆ

* ಸ್ವಲ್ಪ ಕರಿ ಬೇವಿನ ಎಲೆ

* 2-3 ಹಸಿ ಮೆಣಸಿನ ಕಾಯಿ

* 1 ಕಪ್ ತುರಿದ ತೆಂಗಿನಕಾಯಿ

* 1 ಒಣ ಮೆಣಸು

* ನೀರು

* ರುಚಿಗೆ ತಕ್ಕ ಉಪ್ಪು

* ಸ್ವಲ್ಪ ಕರಿ ಬೇವಿನ ಎಲೆ

ತಯಾರಿಸುವ ವಿಧಾನ:

* ಮಾವಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಸ್ವಲ್ಪ ನೀರು ಹಾಕಿ ಬೇಯಲು ಇಡಿ. ಹೀಗೆ ಇಡುವಾಗ ಹಸಿ ಮೆಣಸನ್ನೂ ಕತ್ತರಿಸಿ ಹಾಕಿ. ಮಾವಿನ ಕಾಯಿ ಬೆಂದ ನಂತರ ಅದರ ರಸದಿಂದ ತಿರುಳನ್ನು ಬೇರ್ಪಡಿಸಿ.

* ತುರಿದ ತೆಂಗಿನ ಕಾಯಿಲೆಗೆ ಸ್ವಲ್ಪ ಎಣ್ಣೆ ಹಾಕಿ, ಉರಿ ಮೇಲೆ ಇಟ್ಟು, ಒಣ ಮೆಣಸನ್ನು ಜೊತೆಯಲ್ಲಿಯೇ ಹಾಕಿ ಕಂದು ಬಣ್ಣವವರೆಗೆ ಹುರಿಯಿರಿ. ನಂತರ ಇದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ.

* ಬೇಯಿಸಿದ ಮಾವಿನಕಾಯಿಯಿಂದ ರಸವನ್ನು ಹಿಂಡಿ, ಆ ರಸವನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ.

* ಜೀರಿಗೆಯನ್ನು ಕುಟ್ಟಿ ಪುಡಿ ಮಾಡಿ.

* ಈಗ ಕುದಿಯುತ್ತಿರುವ ಮಾವಿನ ರಸಕ್ಕೆ ಜೀರಿಗೆ, ಕರಿ ಮೆಣಸಿನ ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ನಂತರ ಬೆಲ್ಲವನ್ನು ಹಾಕಿ ಕುದಿಸಿ.

* ಈಗ ಒಗ್ಗರಣೆ ಮಾತ್ರೆಗೆ ಎಣ್ಣೆ ಹಾಕಿ ಅದರಲ್ಲಿ ಸಾಸಿವೆ ಹಾಕಿ, ನಂತರ ಕರಿ ಬೇವಿನ ಎಲೆ ಹಾಕಿ ಮಾವಿನ ರಸಂಗೆ ಒಗ್ಗರಣೆ ಕೊಟ್ಟರೆ ಮಾವಿನಕಾಯಿ ರಸಂರೆಡಿ.

English summary

Mango Rasam In Simple Steps | Variety Of Mango Recipe | ಸರಳವಾದ ಮಾವಿನಕಾಯಿ ರಸಂ | ಅನೇಕ ಬಗೆಯ ಸಾರಿನ ರೆಸಿಪಿ

Here is a spicy mango rasam recipe that can be prepared for your evening supper and tastes best with rice and ghee.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more