For Quick Alerts
ALLOW NOTIFICATIONS  
For Daily Alerts

ಫಾದರ್ಸ್ ಡೇ ಸ್ಪೆಶಲ್ ಡಿಶ್ ಮಾ ಕೀ ದಾಲ್ ರೆಸಿಪಿ

|

ಮಾ ಕೀ ದಾಲ್ ರೆಸಿಪಿ ಒಂದು ಟೇಸ್ಟೀ ಮತ್ತು ಆರೋಗ್ಯಕರವಾಗಿರುವ ದಾಲ್ ರೆಸಿಪಿಯಾಗಿದ್ದು ಈ ಬಾರಿಯ ಫಾದರ್ಸ್ ಡೇ ಗೆ ನೀವಿದನ್ನು ತಯಾರಿಸಬಹುದು. ಈ ರೆಸಿಪಿ ರಿಚ್ ಮತ್ತು ಕ್ರೀಮಿ ಆಗಿದ್ದು ನಿಮ್ಮ ನಾಲಗೆಯ ಸ್ವಾದವನ್ನು ಈ ಟೇಸ್ಟೀ ದಾಲ್‌ನೊಂದಿಗೆ ತಣಿಸಬಹುದು.

ಕಾಲಿ ದಾಲ್ ಅಥವಾ ದಾಲ್ ಮಕನಿ ಎಂದೇ ಪ್ರಸಿದ್ಧವಾಗಿರುವ, ಮಾ ಕಿ ದಾಲ್ ಪಂಜಾಬಿನ ರೆಸಿಪಿಯಾಗಿದ್ದು ಭಾರತೀಯ ಪಾಕ ವಿಧಾನಕ್ಕೆ ಹೆಮ್ಮೆಯ ಗರಿಯಾಗಿದೆ. ಬೇಳೆಯನ್ನು ಚೆನ್ನಾಗಿ ಬೇಯಿಸಿ ತಯಾರು ಮಾಡುವ ಈ ದಾಲ್ ರೆಸಿಪಿ ಪ್ರದೇಶದಿಂದ ಪ್ರದೇಶಕ್ಕೆ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದರೂ ರುಚಿ ಮಾತ್ರ ಒಂದೇ ಆಗಿದೆ.

Maa Ki Dal Recipe For Father's Day

ಹಾಗಿದ್ದರೆ ಈ ಬಾರಿಯ ಫಾದರ್ಸ್ ಡೇ ಗೆ ನೀವು ತಯಾರು ಮಾಡಲೇಬೇಕಾದ ಈ ದಾಲ್ ರೆಸಿಪಿ ನಿಮ್ಮ ತಂದೆಗೆ ಖಂಡಿತ ಇಷ್ಟವಾಗುತ್ತದೆ ಮತ್ತು ಅವರಿಗೆ ನಿಮ್ಮ ಬಗ್ಗೆ ಹೆಮ್ಮೆ ಕೂಡ ಅನಿಸುತ್ತದೆ. ಹಾಗಿದ್ದರೆ ಈ ದಾಲ್ ರೆಸಿಪಿಯ ತಯಾರಿ ವಿಧಾನದತ್ತ ಕಣ್ಣು ಹಾಯಿಸಿ ಮತ್ತು ರೆಸಿಪಿಯನ್ನು ಟ್ರೈ ಮಾಡಿ.

ರುಚಿಕರವಾದ ಸ್ಪೈಸಿ ಟೊಮೇಟೊ ದಾಲ್ ರೆಸಿಪಿ

ಪ್ರಮಾಣ: 4
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು
*ಕಪ್ಪು ಉದ್ದಿನ ಬೇಳೆ/ಬ್ಲಾಕ್ ಮಸ್ಸೂರ್ ದಾಲ್ - 1 ಕಪ್
*ಚನ್ನಾ ದಾಲ್ - 1/4 ಕಪ್
*ಜೀರಿಗೆ - 1 ಸ್ಪೂನ್
*ಹಸಿಮೆಣಸು - 2 (ಸಪೂರಕ್ಕೆ ಹೆಚ್ಚಿರುವಂಥದ್ದು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್
*ಅರಶಿನ ಹುಡಿ - 1 ಸ್ಪೂನ್
*ಜೀರಿಗೆ ಹುಡಿ - 1 ಸ್ಪೂನ್
*ಕೊತ್ತಂಬರಿ ಹುಡಿ - 1 ಸ್ಪೂನ್
*ಈರುಳ್ಳಿ - 1 (ಕತ್ತರಿಸಿದ್ದು)
*ಕಸೂರಿ ಮೇಥಿ - 1 ಸ್ಪೂನ್ (ಜಜ್ಜಿದ್ದು)
*ಏಲಕ್ಕಿ - 3
*ದಾಲ್ಚಿನ್ನಿ ಕೋಲುಗಳು - 2
*ಬೇ ಲೀಫ್ - 1
*ಬೆಣ್ಣೆ - 2 ಸ್ಪೂನ್
*ಮೊಸರು - 1/2 ಕಪ್
*ಟೊಮೇಟೊ ಪುರಿ - 1/2 ಕಪ್
*ಉಪ್ಪು - ರುಚಿಗೆ ತಕ್ಕಷ್ಟು
*ಕ್ರೀಮ್ - 2 ಸ್ಪೂನ್
*ಕೊತ್ತಂಬರಿ ಎಲೆಗಳು - 2 ಸ್ಪೂನ್ (ಕತ್ತರಿಸಿದ್ದು)

ಮಾಡುವ ವಿಧಾನ
1.ಉದ್ದಿನ ಬೇಳೆ ಮತ್ತು ಚನ್ನಾ ದಾಲ್ ಅನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಿ. 2 ಕಪ್ ನೀರಿನೊಂದಿಗೆ ಪ್ರಶ್ಶರ್ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ ಇದಕ್ಕೆ ಉಪ್ಪು ಅರಶಿನ ಪುಡಿ ಹಾಕಿ. 4 ವಿಶಲ್ ಬರುವವರೆಗೆ ಕಾಯಿರಿ.

2.ಬೇಳೆ ಚೆನ್ನಾಗಿ ಬೆಂದ ನಂತರ ಆವಿ ಹೊರಗೆ ಬರುವವರೆಗೆ ಕಾಯಿರಿ. ನಂತರ ಮುಚ್ಚಳವನ್ನು ತೆರೆಯಿರಿ ಮತ್ತು ಇನ್ನೊಂದು ಪಾತ್ರೆಗೆ ಬೇಳೆಯನ್ನು ವರ್ಗಾಯಿಸಿಕೊಳ್ಳಿ.

3.ದಾಲ್‌ಗೆ ಮೊಸರನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

4.ಪ್ಯಾನ್‌ನಲ್ಲಿ ಎರಡು ಸ್ಪೂನ್‌ನಷ್ಟು ಬೆಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಇದಕ್ಕೆ ಜೀರಿಗೆ, ದಾಲ್ಚೀನಿ, ಏಲಕ್ಕಿ, ಬೇ ಲೀಫ್ ಅನ್ನು ಹಾಕಿ ಹುರಿಯಿರಿ.

5.ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ 4-5 ನಿಮಿಷಗಳ ಕಾಲ ಫ್ರೈ ಮಾಡಿ.

6.ತದನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಜೀರಿಗೆ ಹುಡಿ, ಕೊತ್ತಂಬರಿ ಹುಡಿ ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಬೇಯಿಸಿ.

7.ಇನ್ನೂ ಟೊಮೇಟೊ ಪೂರಿ ಸೇರಿಸಿ ಮತ್ತು 4-5 ನಿಮಿಷಗಳ ಕಾಲ ಬೇಯಿಸಿ.

8.ಈಗ ಬೇಯಿಸಿದ ಬೇಳೆಯನ್ನು ಸೇರಿಸಿ ಮತ್ತು ಮಿಶ್ರ ಮಾಡಿಕೊಳ್ಳಿ. ಒಗ್ಗರಣೆಯನ್ನು ಪರಿಶೀಲಿಸಿಕೊಳ್ಳಿ ಮತ್ತು ಉಪ್ಪು ಬೇಕಿದ್ದರೆ ಹಾಕಿ.

9.ಕಸೂರಿ ಮೇಥಿಯನ್ನು ಬೇಳೆಯ ಮೇಲೆ ಸ್ವಲ್ಪ ಹಾಕಿ ಮತ್ತು ಕುದಿಯಲು ಬಿಡಿ.

10.ಒಮ್ಮೆ ಪೂರ್ತಿ ಆದ ನಂತರ, ಉರಿಯನ್ನು ನಿಲ್ಲಿಸಿ ಕ್ರೀಮ್‌ನೊಂದಿಗೆ ಅಲಂಕರಿಸಿಕೊಳ್ಳಿ ಮತ್ತು ಇದಕ್ಕೆ ಬೆಣ್ಣೆ ಹಾಗೂ ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಕಿ.

ಮಾ ಕಿ ದಾಲ್ ಸವಿಯಲು ಸಿದ್ಧವಾಗಿದೆ. ಈ ಪಂಜಾಬಿ ರೆಸಿಪಿಯನ್ನು ರೋಟಿ ಅಥವಾ ಫ್ರೈಡ್ ರೈಸ್‌ನೊಂದಿಗೆ ಸವಿಯಿರಿ.

English summary

Maa Ki Dal Recipe For Father's Day

Maa ki dal is an exotic and a delicious dal recipe that you can try out on this Father's day. This recipe is a rich and creamy delight. So, if you want to enjoy the taste of it, then you have to chuck the calorie count
X
Desktop Bottom Promotion