For Quick Alerts
ALLOW NOTIFICATIONS  
For Daily Alerts

ಜ್ವರ ಶೀತಕ್ಕೆ ಸಿದ್ಧೌಷಧ-ಬೆಳ್ಳುಳ್ಳಿ ಕರಿಮೆಣಸು ರಸಂ

By Jaya subramanya
|

ಮಳೆಗಾಲದ ಸೀಸನ್ ಆರಂಭವಾಗಿದೆ. ಈ ಸಮಯದಲ್ಲಿ ನಾವು ಮಳೆಯಿಂದ ನಮ್ಮನ್ನು ರಕ್ಷಣೆ ಮಾಡಿಕೊಂಡರೂ ದೇಹಕ್ಕೆ ತಂಪುವುಂಟಾಗಿ ಜ್ವರ, ಶೀತ ಖಾಯಂ ಆಗಿ ಬಿಡುತ್ತದೆ. ದೇಹವನ್ನು ಬೆಚ್ಚಗೆ ಮಾಡಿಕೊಳ್ಳುವ ವಿಧಾನವನ್ನು ನಾವು ಅನುಸರಿಸುವುದು ಈ ಸಮಯದಲ್ಲಿ ವಾಡಿಕೆ. ಮಾತ್ರೆ, ಟಾನಿಕ್‎ಗಳನ್ನು ನಾವು ಎಷ್ಟೇ ಬಳಸಿಕೊಂಡರೂ ಮನೆಔಷಧಿಯನ್ನು ನಾವು ಬಳಸಿಕೊಳ್ಳಲೇಬೇಕಾಗುತ್ತದೆ.

ಅಂತಹುದೇ ಸಿದ್ಧೌಷಧವೊಂದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ನಿಮ್ಮ ಜ್ವರ, ಶೀತ ಕೆಮ್ಮಿನಂತಹ ರೋಗಗಳನ್ನು ನಿವಾರಿಸುವ ದಿವ್ಯ ಔಷಧವಾಗಿ ಇದು ಕಾರ್ಯನಿರ್ವಹಿಸಲಿದೆ. ಕರಿಮೆಣಸು (ಕಾಳುಮೆಣಸು) ಮತ್ತು ಬೆಳ್ಳುಳ್ಳಿ ರಸಂ ಇದಾಗಿದ್ದು ಜ್ವರದ ಸಮಯದಲ್ಲಿ ಈ ರಸಂ ನಿಮ್ಮನ್ನು ಚಟುವಟಿಕೆಯಿಂದ ಇರಿಸುತ್ತದೆ. ಸುಸ್ತನ್ನು ಹೋಗಲಾಡಿಸುತ್ತದೆ. ಶೀತ, ಗಂಟಲು ಕೆರತ ಹೋಗಲಾಡಿಸುತ್ತೆ ಈ ರಸಂ

ಸಸ್ಯಾಹಾರಿಗಳಿಗೆ ಈ ರಸಂ ಬಿಸಿ ಚಿಕನ್ ಸೂಪ್‎ನಂತೆ ಕಾರ್ಯನಿರ್ವಹಿಸಿ ಜ್ವರದ ಬೇಗೆಯನ್ನು ಕಡಿಮೆ ಮಾಡುತ್ತದೆ. ಮಧ್ಯಾಹ್ನದೂಟಕ್ಕೆ ಸೂಕ್ತ ಕಾಂಬಿನೇಶನ್ ಎಂದೆನಿಸಿರುವ ರಸಂ ತಯಾರಿ ವಿಧಾನವನ್ನೇ ಇಂದಿಲ್ಲಿ ತಿಳಿಸುತ್ತಿದ್ದು ಇದು ಹೆಚ್ಚು ಸಮಯವನ್ನೂ ತೆಗೆದುಕೊಳ್ಳುವುದಿಲ್ಲ. ಹಾಗಿದ್ದರೆ ಮಧ್ಯಾಹ್ನದೂಟಕ್ಕೆ ಈ ರಸಂ ನಿಮ್ಮ ಸಾಥ್ ನೀಡಲಿ.

Healthy Pepper And Garlic Rasam Recipe

*ಪ್ರಮಾಣ-3

*ಸಿದ್ಧತಾ ಸಮಯ- 10 ನಿಮಿಷಗಳು

*ಅಡುಗೆಗೆ ಬೇಕಾದ ಸಮಯ- 10 ನಿಮಿಷಗಳು

ಸಾಮಾಗ್ರಿಗಳು

*ಬೆಳ್ಳುಳ್ಳಿ - 8 ಎಸಳು (ಕತ್ತರಿಸಿದ್ದು)

*ಕಾಳುಮೆಣಸು -1 1/2 ಚಮಚ

*ಕೆಂಪು ಮೆಣಸು - 1

*ಉಪ್ಪು ರುಚಿಗೆ ತಕ್ಕಷ್ಟು

*ಹುಳಿ - 1 ಚಮಚ

*ಸಾಸಿವೆ - 1 ಚಮಚ

*ಟೊಮೆಟೊ - 1

*ಜೀರಿಗೆ - 1 ಚಮಚ

*ಇಂಗು - ಸ್ವಲ್ಪ

*ಅರಿಶಿನ - 1/2 ಚಮಚ

*ಎಣ್ಣೆ - 2 ಚಮಚ

*ಕರಿಬೇವಿನೆಲೆ - 5-10

*ಕೊತ್ತಂಬರಿ ಎಸಳು - 2 ಚಮಚ (ಸಣ್ಣದಾಗಿ ಹೆಚ್ಚಿದ್ದು)

*ನೀರು - 2 ಕಪ್ ಚುಮುಚುಮು ಚಳಿಗೆ-ಬಿಸಿ ಬಿಸಿ ಹಲಸಿನ ಬೀಜದ ರಸಂ

ವಿಧಾನ

1. ಬೆಚ್ಚಗಿನ ನೀರು ತೆಗೆದುಕೊಂಡು ಅದರಲ್ಲಿ ಹುಳಿಯನ್ನು 5 ನಿಮಿಷಗಳ ಕಾಲ ನೆನೆಯಿಸಿ

2. ನೀರಿನಲ್ಲಿ ಹುಳಿಯನ್ನು ಚೆನ್ನಾಗಿ ಹಿಸುಕಿಕೊಂಡು ಅದರಿಂದ ದಪ್ಪನೆಯ ರಸ ಸಿದ್ಧಪಡಿಸಿ

3. ಸಾರು ಮಾಡಲು ಬೇಕಾಗುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ

4. ಸಾಸಿವೆ, ಕೆಂಪು ಮೆಣಸು, ಜೀರಿಗೆ ಮತ್ತು ಇಂಗನ್ನು ಇದಕ್ಕೆ ಹಾಕಿ

5. ಸಾಸಿವೆ ಸಿಡಿಯುತ್ತಿದ್ದಂತೆ, ಕರಿಬೇವಿನೆಸಳನ್ನು ಹಾಕಿ

6. ಈಗ, ಕತ್ತರಿಸಿದ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಕಾಲ ಹುರಿದುಕೊಳ್ಳಿ. ಗ್ಯಾಸ್ ಉರಿಯನ್ನು ತುಸು ಕಡಿಮೆ ಮಾಡಿಕೊಳ್ಳಿ. ಇದರಿಂದ ಬೆಳ್ಳುಳ್ಳಿ ಹೊತ್ತುವ ಸಾಧ್ಯತೆ ಇರುವುದಿಲ್ಲ.

7. ನಂತರ, ಕತ್ತರಿಸಿದ ಟೊಮೆಟೊವನ್ನು ಪ್ಯಾನ್‎ಗೆ ಹಾಕಿಕೊಳ್ಳಿ.

8. ಅರಿಶಿನವನ್ನು ಹಾಕಿ 10 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಚೆನ್ನಾಗಿ ಕಲಸಿಕೊಂಡು ತಳ ಊರದಂತೆ ನೋಡಿಕೊಳ್ಳಿ

9. ಕಾಳುಮೆಣಸನ್ನು ಜಜ್ಜಿ ಪ್ಯಾನ್‎ಗೆ ಹಾಕಿ

10. ನೀರನ್ನು ಬೆರೆಸಿಕೊಂಡು ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಳ್ಳಿ, ಚೆನ್ನಾಗಿ ಮಿಶ್ರಣವನ್ನು ಕಲಸಿ.

11. ಉಪ್ಪನ್ನು ಇದಕ್ಕೆ ಹಾಕಿಕೊಂಡು ಮಿಶ್ರಣ 2-3 ನಿಮಿಷ ಕುದಿಯಲಿ ಮಧ್ಯಮ ಪ್ರಮಾಣದಲ್ಲಿ ಉರಿಯನ್ನು ಇರಿಸಿಕೊಳ್ಳಿ

12. ಬೆಳ್ಳುಳ್ಳಿ ಮತ್ತು ಕಾಳು ಮೆಣಸಿನ ರಸಂ ಸಿದ್ಧವಾಗಿದೆ. ನಿಮ್ಮ ಮಧ್ಯಾಹ್ನದೂಟದೊಂದಿಗೆ ಈ ರಸಂ ಅತ್ಯುತ್ತಮ ಎಂದೆನಿಸಲಿದೆ. ದೋಸೆ ಮತ್ತು ಇಡ್ಲಿಗೆ ಕೂಡ ಇದು ಸೂಕ್ತವಾದುದಾಗಿದೆ. ರುಚಿ ರುಚಿಯಾದ ಮಾವಿನಕಾಯಿ ರಸಂ

ನೆನಪಿಡಿ:

*ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವಾಗ, ಕೆಲವೊಂದು ಅಂಶಗಳನ್ನು ನೀವು ಗಮನಕ್ಕೆ ತೆಗೆದುಕೊಳ್ಳಬೇಕು

ಕುದಿಯುವ ಸಮಯವನ್ನು ನೋಡಿಕೊಳ್ಳಿ. ರಸಂ ಹೆಚ್ಚು ಕುದಿದಂತೆ ರುಚಿ ವ್ಯತ್ಯಾಸವಾಗಬಹುದು.

*ನಿಮಗೆ ಜಾಸ್ತಿ ಖಾರ ಬೇಕೆಂದು ಹೆಚ್ಚು ಕಾಳುಮೆಣಸನ್ನು ಹಾಕದಿರಿ. ಬದಲಿಗೆ ಮೆಣಸಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ

*ಬೆಳ್ಳುಳ್ಳಿಯನ್ನು ರುಬ್ಬಿಕೊಳ್ಳದಿರಿ. ಇದರ ಘಾಟು ರಸಂ ಅನ್ನು ಹಾಳುಮಾಡಬಹುದು. ಬೆಳ್ಳುಳ್ಳಿಯನ್ನು ಜಜ್ಜಿ ಅಥವಾ ಕತ್ತರಿಸಿಕೊಂಡು ಬಳಸಿ.

*ಮೂಲತಃ ರಸಂ ದಕ್ಷಿಣ ಭಾರತೀಯ ಖಾದ್ಯದಲ್ಲಿ ಒಂದು ಭಾಗ ಎಂದೆನಿಸಿದೆ. ಈ ರಸಂ ಮಾತ್ರ ನಿಮಗೆ ಅನೂಹ್ಯ ರುಚಿಯನ್ನು ನೀಡುವುದಲ್ಲದೆ ಶೀತದ ಹವಾಮಾನದಲ್ಲಿ ಬೆಚ್ಚಗೆ ಇರಿಸುತ್ತದೆ. ನಿಮ್ಮ ಎಂದಿನ ರಸಂ ಶೈಲಿಗಿಂತ ವಿಭಿನ್ನವಾದುದನ್ನು ತಯಾರಿಸಿಕೊಳ್ಳಿ ನಿಮಗಿದು ಖಂಡಿತ ಇಷ್ಟವಾಗುತ್ತದೆ.

English summary

Healthy Pepper And Garlic Rasam Recipe

Are you suffering from cold and flu? Do your taste buds crave for something tangy and spicy? Then, a bowl of hot pepper garlic rasam can make you feel better within a moment. If you are a vegetarian, this preparation is the best to work on your flu like hot chicken soup and keep the virus and bacteria away. So, here is the recipe that you've been wanting to read, have a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more