For Quick Alerts
ALLOW NOTIFICATIONS  
For Daily Alerts

ಶೀತ, ಕೆಮ್ಮು ದೂರವಿಡುವ ಬೆಳ್ಳುಳ್ಳಿ ರಸಂ

|
Garlic Rasam Recipe
ತಂಪಾದ ಹವಾಮಾನ, ಮಳೆಯ ಅಬ್ಬರದ ಜೊತೆ ಕೆಮ್ಮು , ಶೀತ, ಜ್ವರದ ಉಪಟಳ. ಈ ಸಮಯದಲ್ಲಿ ಕಾಯಿಲೆ ಬರದಂತೆ ಆದಷ್ಟು ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ಒಳ್ಳೆಯದು. ಆದ್ದರಿಂದ ಅಡುಗೆ ಮಾಡುವಾಗ ಅದರ ಜೊತೆ ಶುಂಠಿ ಕಷಾಯ ಅಥವಾ ಬೆಳ್ಳುಳ್ಳಿ ಹಾಕಿ ತಯಾರಿಸಿದ ಸಾರು ಮಾಡಿದರೆ ಶೀತ ಅಥವಾ ಕೆಮ್ಮ ತಡೆಗಟ್ಟಬಹುದು. ಬೆಳ್ಳುಳ್ಳಿ ಸಾರಂತೂ (ರಸಂ) ಬಾಯಿಗೆ ರುಚಿಕರವಾಗಿದ್ದು ಇದನ್ನು ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

*10-15 ಬೆಳ್ಳುಳ್ಳಿ ಎಸಳು
* 2 ಚಮಚ ತೊಗರಿ ಬೇಳೆ
* 2 ಚಮಚ ಕೊತ್ತಂಬರಿ ಬೀಜ
* ಅರ್ಧ ಚಮಚ ಜೀರಿಗೆ
* ಅರ್ಧ ಚಮಚ ಕರಿಮೆಣಸಿನ ಪುಡಿ
* 2 ಒಣ ಕೆಂಪು ಮೆಣಸು
* 1/4 ಚಮಚ ಮೆಂತೆ
* 1/4 ಚಮಚ ಸಾಸಿವೆ
* ಒಂದು ಚಿಕ್ಕ ತುಂಡು ಶುಂಠಿ
* 1/4 ಚಮಚ ಅರಿಶಿಣ
* ಸ್ವಲ್ಪ ಕರಿಬೇವಿನ ಎಲೆ
* 2 ಚಮಚ ಎಣ್ಣೆ ಅಥವಾ ತುಪ್ಪ
* ರುಚಿಗೆ ತಕ್ಕ ಉಪ್ಪು
* 1 ಚಮಚ ಹುಣಸೆ ರಸ

ತಯಾರಿಸುವ ವಿಧಾನ:

1. ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ತೊಗರಿಬೇಳೆ, ಕೊತ್ತಂಬರಿ ಬೀಜ, ಒಣ ಕೆಂಪು ಮೆಣಸು, ಮಂತೆ, ಕರಿಬೇವಿನ ಎಲೆ, ಅರಿಶಿಣ, ಜೀರಿಗೆ ಇವುಗಳನ್ನು ಹಾಕಿ ಹುರಿಯಬೇಕು. ನಂತರ ಈ ಹುರಿದ ಮಿಶ್ರಣಕ್ಕೆ ಶುಂಠಿ, ಕಾಳು ಮೆಣಸಿನ ಪುಡಿ ಹಾಕಿ ಈ ಮಿಶ್ರಣವನ್ನು ನುಣ್ಣಗೆ ಅರಿಯಬೇಕು.

2. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಅದರಲ್ಲಿ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಕರಿಬೇವಿನ ಎಲೆ ಮತ್ತು ಬೆಳ್ಳುಳ್ಳಿ ಹಾಕಿ ಬೆಳ್ಳುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಅರೆದ ಮಿಶ್ರಣವನ್ನು ಹಾಕಿ 2 ನಿಮಿಷ ಸೌಟ್ ನಿಂದ ಆಡಿಸಿ ನಂತರ ರುಚಿಗೆ ತಕ್ಕ ಉಪ್ಪು ಹಾಕಿ 3 ಕಪ್ ನೀರು ಹಾಕಿ ಚೆನ್ನಾಗಿ ಕುದಿಸಬೇಕು.

3. ಸಾರು ಚೆನ್ನಾಗಿ ಕುದಿಯುತ್ತಿರುವಾಗ ಸ್ವಲ್ಪ ಹುಣಸೆ ರಸ ಹಾಕಿ 5 ನಿಮಿಷ ಕುದಿಸಿದರೆ ರುಚಿಯಾದ ಬೆಳ್ಳುಳ್ಳಿ ಸಾರು ರೆಡಿ.

English summary

Garlic Rasam Recipe | Curry For Rainy Season | ಬೆಳ್ಳುಳ್ಳಿ ಸಾರು ರಸಂ | ಮಳೆಗಾಲಕ್ಕೆ ಸೂಕ್ತವಾದ ರಸಂ

During rainy season it's better to prepare ginger or garlic rasam. These rasam helps to prevent cold and cough. Here is a recipe of garlic rasam.
X
Desktop Bottom Promotion