For Quick Alerts
ALLOW NOTIFICATIONS  
For Daily Alerts

ಮಧ್ಯಾಹ್ನ ಊಟದ ಸೊಗಸನ್ನು ಹೆಚ್ಚಿಸುವ ಟೊಮೇಟೊ ಕರಿ

By Super
|

ಟೊಮೇಟೊ ಗ್ರೇವಿಯ ರೆಸಿಪಿಯು ಅತ್ಯಂತ ಸುಲಭವಾದ ರೆಸಿಪಿಯಾಗಿರುತ್ತದೆ. ಭಾರತೀಯ ಶೈಲಿಯ ಈ ಖಾದ್ಯವನ್ನು ರೋಟಿ, ಬ್ರೆಡ್ ಮತ್ತು ಅನ್ನದ ಜೊತೆಗೆ ಸೇವಿಸಲಾಗುತ್ತದೆ. ಅದರಲ್ಲೂ ಕೇರಳ ಶೈಲಿಯ ರೆಸಿಪಿಯು ಅತ್ಯಂತ ಜನಪ್ರಿಯವಾಗಿದೆ. ವಾರದ ದಿನಗಳಲ್ಲಿ ಪ್ರತಿಯೊಬ್ಬರು ಯಾವುದಾದರು ಒಂದು ತಕ್ಷಣಕ್ಕೆ ತಯಾರಾಗುವ ಆಹಾರವನ್ನು ತಯಾರಿಸಲು ಇಷ್ಟಪಡುತ್ತಾರೆ. ಅಂತಹವರಿಗಾಗಿ ಈ ಟೊಮೇಟೊ ಕರಿ ರೆಸಿಪಿಯು ತುಂಬಾ ಸುಲಭದ್ದಾಗಿರುತ್ತದೆ.

ಇದನ್ನು ಮಾಡುವುದು ಸುಲಭ, ಇಂದು ನೀವು ಮನೆಯಲ್ಲಿ ಇದ್ದಲ್ಲಿ, ಇದನ್ನು ಮಾಡಲು ನೀವು ಅದೃಷ್ಟಶಾಲಿಗಳು ಎಂದೇ ಭಾವಿಸಿ! ಚಪಾತಿಯ ಜೊತೆಗೆ ಟೊಮೇಟೊ ಕರಿಯ ರೆಸಿಪಿಯು ಕೆಲಸಕ್ಕೆ ಹೋಗುವ ಪುರುಷ ಮತ್ತು ಮಹಿಳೆಯರ ವಲಯದಲ್ಲಿ ಭಾರೀ ಜನಪ್ರಿಯತೆಯನ್ನು ತಮ್ಮದನ್ನಾಗಿಸಿಕೊಂಡಿದೆ.

Easy Tomato Curry Recipe For Lunch

ಏಕೆಂದರೆ ಇದನ್ನು ಮಾಡುವುದು ಸುಲಭವಾದ್ದರಿಂದ. ಟೊಮೇಟೊ ಗ್ರೇವಿಯ ರೆಸಿಪಿಯನ್ನು ಹಲವು ತರದಲ್ಲಿ ತಯಾರಿಸಿಕೊಳ್ಳಬಹುದು, ನಿಮಗೆ ಬೇಕಾದಲ್ಲಿ ಇದಕ್ಕೆ ಹೆಚ್ಚಿನ ತರಕಾರಿಗಳನ್ನು ಹಾಕಿಕೊಳ್ಳಬಹುದು.

ಇದು ನಿಮ್ಮ ಮಕ್ಕಳಿಗೆ ಆರೋಗ್ಯಕರ ಸಹ ಹೌದು. ಇನ್ನೂ ಕುತೂಹಲಕರವಾದ ವಿಚಾರವೆಂದರೆ, ಈ ಟೊಮೇಟೊ ಕರಿಯು ದಕ್ಷಿಣ ಭಾರತ ಮತ್ತು ಉತ್ತರ ಭಾರತ ಎರಡು ಕಡೆ ಜನಪ್ರಿಯವಾಗಿದೆ. ಬೋಲ್ಡ್ ಸ್ಕೈ ನಿಮಗಾಗಿ ಟೊಮೇಟೊ ಕರಿಯನ್ನು ಅತಿ ಶೀಘ್ರವಾಗಿ ಮಾಡುವ ರೆಸಿಪಿಯನ್ನು ಒದಗಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ. ಅಸದಳ ರುಚಿಯನ್ನು ನೀಡುವ ಬೇಬಿ ಕಾರ್ನ್ ಗೋಡಂಬಿ ಗ್ರೇವಿ

*ಪ್ರಮಾಣ: ಇಬ್ಬರಿಗೆ ಬಡಿಸಬಹುದು
*ಅಡುಗೆಗೆ ತಗುಲುವ ಸಮಯ- 20 ನಿಮಿಷಗಳು

ಬೇಕಾಗುವ ಪದಾರ್ಥ
*ಟೊಮೇಟೊ - 4 (ಕತ್ತರಿಸಿರುವ)
*ಈರುಳ್ಳಿ - 2 (ಕತ್ತರಿಸಿದಂತಹುದು)
*ಹಸಿ ಮೆಣಸಿನ ಕಾಯಿಗಳು - 3 (ಉದ್ದಕ್ಕೆ ಕತ್ತರಿಸಲಾಗಿರುವ)
*ತುರಿದ ತೆಂಗಿನಕಾಯಿ - ½ ಕಪ್
*ಖಾರದ ಪುಡಿ - ¾ ಟೀ. ಚಮಚ
*ಅರಿಶಿಣ ಪುಡಿ - ½ ಟೀ. ಚಮಚ
*ಸಾಸಿವೆ ಬೀಜಗಳು - 2 ಟೀ. ಚಮಚ
*ಕೊತ್ತಂಬರಿ ಸೊಪ್ಪು
*ಉಪ್ಪು: ರುಚಿಗೆ ತಕ್ಕಷ್ಟು
*ತೆಂಗಿನ ಎಣ್ಣೆ - ಅಗತ್ಯವಿದ್ದಷ್ಟು

ಮಾಡುವ ವಿಧಾನ
1. ಮೊದಲು ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಾಯಿಸಿ. ನಂತರ ಅದಕ್ಕೆ ಸಾಸಿವೆ ಬೀಜ ಹಾಕಿ. ಅದು ಚಟ ಪಟ ಎಂದು ಹಾರುವವರೆಗೆ ಕಾಯಿರಿ. ನಂತರ ಅದಕ್ಕೆ ಟೊಮೇಟೊ ಹಸಿ ಮೆಣಸಿನಕಾಯಿಗಳನ್ನು ಹಾಕಿ.
2. ಟೊಮೇಟೊ ಚೆನ್ನಾಗಿ ಬೇಯುವವರೆಗೆ ಕಾಯಿರಿ. ನಂತರ ಅದಕ್ಕೆ ನೀರನ್ನು ಬೆರೆಸಿ, ಮತ್ತು ಸ್ವಲ್ಪ ಮೆದುವಾದ ಗ್ರೇವಿಯಂತೆ ತಯಾರಿಸಿಕೊಳ್ಳಿ.
3. ಇದೇ ಸಮಯದಲ್ಲಿ, ತುರಿದ ತೆಂಗಿನಕಾಯಿಗಳನ್ನು, ಈರುಳ್ಳಿ ಮತ್ತು ಸ್ವಲ್ಪ ನೀರನ್ನು ಮಿಕ್ಸರಿನಲ್ಲಿ ಹಾಕಿಕೊಂಡು, ಚೆನ್ನಾಗಿ ರುಬ್ಬಿ. ಪೇಸ್ಟ್‌ನಂತೆ ಮಾಡಿಕೊಳ್ಳಿ.
4. ಈಗ ಈ ಮಿಶ್ರಣವನ್ನು ಬಾಣಲೆಯಲ್ಲಿ ಹಾಕಿ ಅದಕ್ಕೆ ನೀರನ್ನು ಬೆರೆಸಿ.
5. ನಂತರ ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಈ ಗ್ರೇವಿಗೆ ಹಾಕಿ, ಚೆನ್ನಾಗಿ ಕಲೆಸಿಕೊಡಿ.
6. ನಂತರ ಇದಕ್ಕೆ ನೀರನ್ನು ಹಾಕಿ ಮತ್ತು 10 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ.

ಈಗ ನಿಮ್ಮ ಸರಳವಾದ ಮತ್ತು ಸುಲಭವಾದ ಟೊಮೇಟೊ ಗ್ರೇವಿಯು ಸಿದ್ಧವಾಗಿದೆ. ಟೊಮೇಟೊ ಮತ್ತು ತೆಂಗಿನಕಾಯಿಗಳನ್ನು ಒಳಗೊಂಡಿರುವ ಈ ರೆಸಿಪಿಯು ನಿಜಕ್ಕು ನಿಮಗೆ ಮೆಚ್ಚುಗೆಯಾಗುತ್ತದೆ. ಇದರ ಮೇಲೆ ಅಲಂಕಾರಕ್ಕೆಂದು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ.

#ಪೋಷಕಾಂಶಗಳ ಪ್ರಮಾಣ:
ಟೊಮೇಟೊಗಳಲ್ಲಿ ಪೋಷಕಾಂಶಗಳ ಪ್ರಮಾಣವು ಅಧಿಕವಾಗಿರುತ್ತದೆ. ಇದು ನಿಮ್ಮ ಜೀರ್ಣಾಂಗದ ಪರಿಚಲನೆಯನ್ನು ಸುಗಮಗೊಳಿಸಲು ಅನುಕೂಲ ಮಾಡಿಕೊಡುತ್ತದೆ. ಜೊತೆಗೆ ನಿಮ್ಮ ದೇಹದಲ್ಲಿ ನೀರಿನ ಅಂಶವನ್ನು ಸಹ ಕಾಪಾಡಲು ಟೊಮೇಟೊಗಳು ನೆರವಾಗುತ್ತವೆ.
ಟೊಮೇಟೊಗಳು ಹಲವು ಬಗೆಯ ಕ್ಯಾನ್ಸರ್ ಬರದಂತೆ ನಿಯಂತ್ರಿಸಲು ಸಹಕರಿಸುತ್ತವೆ. ಅದರಲ್ಲಿರುವ ಕೊಲೊರೆಕ್ಟಲ್ ಮತ್ತು ಪ್ರೋಸ್ಟೇಟ್ ಕ್ಯಾನ್ಸರ್ ಬರದಂತೆ ತಡೆಯಲು ಇದು ತುಂಬಾ ನೆರವಾಗುತ್ತದೆ.

#ಸಲಹೆಗಳು:
ಒಂದು ವೇಳೆ ನಿಮಗೆ ಗ್ರೇವಿಯು ಕಡುಗೆಂಪು ಬಣ್ಣದಲ್ಲಿ ಬೇಕಾದಲ್ಲಿ, ಇದಕ್ಕೆ ಖಾರದ ಪುಡಿಯ ಬದಲಿಗೆ ಕಾಶ್ಮೀರಿ ಖಾರದ ಪುಡಿಯನ್ನು ಬಳಸಿ. ನಿಮಗೆ ಜೀರಿಗೆ ಇಷ್ಟವಾದಲ್ಲಿ, ಈ ಗ್ರೇವಿಯ ರುಚಿಯನ್ನು ಹೆಚ್ಚಿಸಲು ಇದಕ್ಕೆ ಜೀರಿಗೆಯನ್ನು ಬೆರಿಸಿಕೊಳ್ಳಬಹುದು.

English summary

Easy Tomato Curry Recipe For Lunch

Recipe for tomato gravy is very simple. This Indian dish can be savoured with rotis, bread and rice. The recipe for tomato curry in Kerala style is very popular. Weekday mayhem is here, and everybody wants to cook something quickly and pack that for work.
X
Desktop Bottom Promotion