For Quick Alerts
ALLOW NOTIFICATIONS  
For Daily Alerts

ಸ್ವಾದದ ಘಮಲನ್ನು ಹೆಚ್ಚಿಸುವ ಬದನೆಕಾಯಿ ಸಾಂಬರ್!

|

ದಕ್ಷಿಣ ಭಾರತದ ಭೋಜನದ ಪರಿಪೂರ್ಣತೆಯನ್ನು ಅ೦ತಿಮಗೊಳಿಸುವ ಆಹಾರ ವಸ್ತುವೇ ಸಾ೦ಬಾರ್ ಆಗಿದೆ. ಊಟದ ಬಟ್ಟಲಿನಲ್ಲಿ ಸಾ೦ಬಾರ್ ಬಳಿಯಲ್ಲಿಲ್ಲದಿದ್ದರೆ ದಕ್ಷಿಣ ಭಾರತದ ಯಾವುದೇ ತೆರನಾದ ಭೋಜನವು ಪರಿಪೂರ್ಣವಾದ೦ತೆ ಅನಿಸುವುದೇ ಇಲ್ಲ. ಸಾ೦ಬಾರ್ ಎ೦ಬ ಈ ಮೇಲೋಗರದ ಸ್ವಾದವು ದಕ್ಷಿಣ ಭಾರತದಾದ್ಯ೦ತ ಏಕಪ್ರಕಾರವಾಗಿಯೇ ಇರುತ್ತದೆಯೆ೦ದು ಜನರು ಸಾಮಾನ್ಯವಾಗಿ ತಪ್ಪಾಗಿ ಭಾವಿಸುತ್ತಾರೆ.

ಇಂದು ಬೋಲ್ಡ್‌ ಸ್ಕೈ ನಿಮಗೆ ವಿಶೇಷವಾದ ಅಡುಗೆಯನ್ನು ಪರಿಚಯಿಸುತ್ತಿದೆ, ಅದುವೇ ಟೊಮೇಟೊ ಮತ್ತು ಬದನೆಕಾಯಿ ಸೇರಿ ಮಾಡಿದ ರುಚಿಕರವಾದ ಸಾಂಬರ್, ಇದರಲ್ಲಿ ತುಂಬಾ ಮುಖ್ಯವಾದ ಅಂಶವೇನೆಂದರೆ ಇದು ರುಚಿಕರ ಮತ್ತು ಆರೋಗ್ಯಕರ. ಬದನೆಕಾಯಿ ಮತ್ತು ಟೊಮೇಟೊ ಎರಡರಲ್ಲಿ ಉತ್ತಮವಾದ ಪೋಷಕಾಂಶಗಳು ಇದ್ದು, ಇವು ನಿಮ್ಮನ್ನು ಆರೋಗ್ಯವಾಗಿ ಇಡುತ್ತವೆ.

 Curry Treat: Brinjal & Tomato Recipe

ಸಮೃದ್ಧವಾದ ಕಬ್ಬಿಣಾಂಶ, ನಾರಿನಂಶ ಮತ್ತು ಕರಗುವಂತಹ ಕಾರ್ಬೊಹೈಡ್ರೆಟ್‌ಗಳು ಇರುವ ಈ ಬದನೆಕಾಯಿಯಲ್ಲಿ ಕ್ಯಾನ್ಸರ್, ಮಧುಮೇಹ ಮುಂತಾದ ಕಾಯಿಲೆಗಳನ್ನು ಹೊಡೆದೊಡಿಸುವಂತಹ ಅಂಶಗಳು ಇವೆ. ಜೊತೆಗೆ ಇವು ಕ್ಯಾಲೋರಿಗಳನ್ನು ಸಹ ಕರಗಿಸುತ್ತವೆ. ಒಂದು ವೇಳೆ ನೀವು 30 ವರ್ಷ ದಾಟಿದವರಾಗಿದ್ದಲ್ಲಿ, ಈ ತರಕಾರಿಯು ನಿಮ್ಮ ಹೃದಯಕ್ಕೆ ಆರೋಗ್ಯವನ್ನು ಒದಗಿಸುವುದರ ಜೊತೆಗೆ, ನಿಮಗೆ ಇತರ ಕಾಯಿಲೆಗಳು ಬರದಂತೆ ತಡೆಯುತ್ತವೆ. ಹಾಗಾದರೆ ಬನ್ನಿ ರುಚಿಕರವಾದ ಬದನೆ ಮತ್ತು ಟೊಮೇಟೊ ಕರಿ ರೆಸಿಪಿ ಮಾಡುವ ವಿಧಾನವನ್ನು ತಿಳಿಯಿರಿ

ಮೂವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ : 15 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 20 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಬದನೆಕಾಯಿ - 4 (ಕತ್ತರಿಸಿದಂತಹುದು)
*ಈರುಳ್ಳಿ - 1 (ಕತ್ತರಿಸಿದಂತಹುದು) ಎಣ್ಣೆ - ¼ ಟೀ.ಚಮಚ
*ಬೆಳ್ಳುಳ್ಳಿ - 4 - 5 ತುಂಡು
*ಟೊಮೇಟೊ - 4
*ನೀರು -1 ಕಪ್
*ಖಾರದ ಪುಡಿ - 1 ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ಕರಿಬೇವು - ಸ್ವಲ್ಪ
*ಚಕ್ಕೆ - 1
*ಅರಿಶಿನ ಪುಡಿ-1 ಟೀ.ಚಮಚ
*ಜೀರಿಗೆ ಪುಡಿ - 1 ಟೀ.ಚಮಚ
*ಗರಂ ಮಸಾಲ - ½ ಟೀ.ಚಮಚ
*ಕೊತ್ತಂಬರಿ ಸೊಪ್ಪು- ಸ್ವಲ್ಪ (ಕತ್ತರಿಸಿದಂತಹುದು)
*ಬಟಾಣಿ - ½ ಕಪ್ (ಬೇಯಿಸಿದಂತಹುದು)

ತಯಾರಿಸುವ ವಿಧಾನ
* ಬದನೆಕಾಯಿಗಳನ್ನು ನೀರಿನಲ್ಲಿ ನೆನೆಸಿಕೊಳ್ಳಿ. ನಂತರ ಅದನ್ನು ತೆಗೆದು ಹೊರಗೆ ಸ್ವಲ್ಪ ಹೊತ್ತು ಇಡಿ. ಇನ್ನು ತಳ ದಪ್ಪವಿರುವ ಎಣ್ಣೆಯನ್ನು ಕಾಯಿಸಿಕೊಳ್ಳಿ. ಅದು ಕಾದ ಮೇಲೆ, ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ. ಈ ಪದಾರ್ಥಗಳನ್ನು ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.
* 10 ನಿಮಿಷದ ನಂತರ ಇದಕ್ಕೆ ಕತ್ತರಿಸಿದ ಟೊಮೇಟೊಗಳನ್ನು, ಬದನೆಕಾಯಿ ಹೋಳುಗಳನ್ನು, ನೀರು, ಖಾರದ ಪುಡಿ, ಉಪ್ಪು, ಕರಿಬೇವು, ಚಕ್ಕೆ, ಅರಿಶಿನ, ಜೀರಿಗೆ ಪುಡಿ, ಗರಂ ಮಸಾಲ ಪುಡಿ ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಹಾಕಿ. ಒಂದು ಚಪ್ಪಟೆಯಾದ ಸೌಟಿನಿಂದ ಇವುಗಳನ್ನು ಚೆನ್ನಾಗಿ ತಿರುವಿಕೊಳ್ಳಿ
*ಈಗ ಪಾತ್ರೆಯ ಮುಚ್ಚಳವನ್ನು ಮುಚ್ಚಿ 8-10 ನಿಮಿಷಗಳ ಕಾಲ ಬೇಯಲು ಬಿಡಿ. ಇದಾದ ಮೇಲೆ ಮುಚ್ಚಳವನ್ನು ತೆಗೆದು ಮತ್ತೆ ಬೇಯಿಸಿ.

ಪೋಷಕಾಂಶದ ಸಲಹೆ
ಈ ಮೊದಲೆ ಹೇಳಿದಂತೆ ಬದನೆಕಾಯಿಯಲ್ಲಿ ಆರೋಗ್ಯಕಾರಿ ಪ್ರಯೋಜನಗಳು ಯಥೇಚ್ಛವಾಗಿ ದೊರೆಯುತ್ತವೆ. ಟೊಮೇಟೊಗಳು ಸಹ ಆರೋಗ್ಯಕ್ಕೆ ಒಳ್ಳೆಯದು.

ಸಲಹೆ
ಬದನೆ ಮತ್ತು ಟೊಮೇಟೊ ರೆಸಿಪಿಯನ್ನು ಕರಿ ಅಥವಾ ಡ್ರೈ ಕರಿಯ ರೀತಿಯಲ್ಲಿ ನೀವು ತಯಾರಿಸಿಕೊಳ್ಳಬಹುದು.

English summary

Curry Treat: Brinjal & Tomato Recipe

Moong dal is a favourite among many. This type of dal is also rich in many vitamins and other nutrients which is good for health. Boldsky shares with you a simple and easy dal recipe you can prepare in about 20 minutes. This delectable dal curry is cooked along with potato which is another highly nutritious veggie. 
X
Desktop Bottom Promotion