For Quick Alerts
ALLOW NOTIFICATIONS  
For Daily Alerts

ಶೀತ, ಕೆಮ್ಮು, ಕಫ ಹೋಗಲಾಡಿಸುವ ಕಷಾಯ

|

ಮಳೆಯ ಆರ್ಭಟ ಜಾಸ್ತಿಯಾಗಿದೆ. ವಾತಾವರಣ ತಂಪಾಗಿರುವುದರಿಂದ ಕಾಯಿಲೆ ಬೀಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಕಾಯಿಲೆ ಬೀಳದಂತೆ ಮುನ್ನೆಚ್ಚರಿಕೆ ಪಾಲಿಸುವುದು ಒಳ್ಳೆಯದು. ಕಷಾಯ ಕಾಯಿಲೆ ಬೀಳದಂತೆ ತಡೆಯುವಲ್ಲಿ ತುಂಬಾ ಸಹಕಾರಿಯಾಗಿದೆ. ಶೀತ, ಕೆಮ್ಮು, ಜ್ವರ ಈ ರೀತಿಯ ಕಾಯಿಲೆಗಳನ್ನು ಗುಣ ಪಡಿಸುವ ಶಕ್ತಿ ಕಷಾಯಕ್ಕೆ ಇದೆ.

ಅನೇಕ ರೀತಿಯಲ್ಲಿ ಕಷಾಯ, ಮಾಡಬಹುದು. ಇಲ್ಲಿ ನಾವು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವಂತಹ ಪದಾರ್ಥಗಳನ್ನು ಬಳಸಿ ಮಾಡುವ ಆರೋಗ್ಯಕರವಾದ ಕಷಾಯದ ರೆಸಿಪಿಯನ್ನು ನೀಡಿದ್ದೇವೆ ನೋಡಿ:

Kashaya

ಬೇಕಾಗುವ ಸಾಮಾಗ್ರಿಗಳು

ಜೀರಿಗೆ 2 ಚಮಚ
ಅಂಗೈಯ ಅರ್ಧದಷ್ಟು ಅಗಲವಿರುವ ಹಸಿ ಶುಂಠಿ
ಕರಿ ಮೆಣಸು ಅರ್ಧ ಚಮಚ
ಚಕ್ಕೆ 2 ಪೀಸ್
ಲವಂಗ 3-4
ಪುದೀನಾ ಅರ್ಧ ಕಟ್ಟು
ತುಳಸಿ

ತಯಾರಿಸುವ ವಿಧಾನ:
ಒಂದು ಪಾತ್ರೆಗೆ ಶುಂಠಿಯನ್ನು ಜಜ್ಜಿ ಹಾಕಿ, ಕರಿ ಮೆಣಸು ಮತ್ತು ಜೀರಿಗೆಯನ್ನು ಸ್ವಲ್ಪ ಪುಡಿ ಮಾಡಿ ಹಾಕಿ, ನಂತರ ಉಳಿದ ಪದಾರ್ಥಗಳನ್ನು ಹಾಗೇ ಹಾಕಿ, ಅರ್ಧ ಚಮಚ ಉಪ್ಪು ಸೇರಿಸಿ, ಒಂದು ಲೀಟರ್ ನೀರು ಹಾಕಿ ಚೆನ್ನಾಗಿ ಕುದಿಸಿ. ಒಂದು ಲೀಟರ್ ನೀರು ಅರ್ಧ ಲೀಟರ್ ಆಗುವಷ್ಟು ಹೊತ್ತು ಕುದಿಸಿ, ನಂತರ ಉರಿಯಿಂದ ಇಳಿಸಿ, ಬಿಸಿ-ಬಿಸಿಯಾದ ಕಷಾಯವನ್ನು ಸ್ವಲ್ಪ ತಣ್ಣಗೆ ಮಾಡಿ ಒಂದು ಗ್ಲಾಸ್ ಕುಡಿಯಿರಿ .

ಸಲಹೆ:

* ಕಷಾಯವನ್ನು ತುಂಬಾ ತಣ್ಣಗೆ ಮಾಡಬೇಡಿ ಕಾಫಿ ರೀತಿಯಲ್ಲಿ ಬಿಸಿ- ಬಿಸಿಯಾಗಿದ್ದರೆ ಮಾತ್ರ ಕಷಾಯ ಕುಡಿಯಲು ಇಷ್ಟವಾಗುವುದು. ತುಂಬಾ ತಣ್ಣಗಾದರೆ ಕಷಾಯವನ್ನು ಕುಡಿಯಲು ಸಾಧ್ಯವಿಲ್ಲ.

* ಉಳಿದ ಕಷಾಯವನ್ನು ಮತ್ತೊಮ್ಮೆ ಬಿಸಿ ಮಾಡಿ ಕುಡಿಯಬಹುದು. ಈ ರೀತಿ 2-3 ಬಾರಿ ಕುಡಿದರೆ ಸಾಕು ನಿಮ್ಮ ಗಂಟಲಿನ ಕೆರತ, ಶೀತ ಇವುಗಳಿಂದ ಗುಣಮುಕ್ತರಾಗಬಹುದು.

* ಒಂದು ತುಂಡು ಬೆಲ್ಲವನ್ನು ಕೈಯಲ್ಲಿ ಹಿಡಿದು ತಿನ್ನುತ್ತಾ ಈ ಕಷಾಯ ಕುಡಿದರೆ ಕಷಾಯವನ್ನು ಕುಡಿಯಲು ಕಷ್ಟವೆನಿಸುವುದಿಲ್ಲ.

English summary

Drink This Kashaya Say Goog By To Rainy Problem

Kashaya is a healthy drink and cures many ailments like common cold, caugh, fever etc.Take a look at how to make delicious Kashaya recipe.
X
Desktop Bottom Promotion