For Quick Alerts
ALLOW NOTIFICATIONS  
For Daily Alerts

ಫಲಾಮೃತವ ಸವಿದು ತಣ್ಣಗಿರಿ!

By Staff
|
Rcipe for Karnataka summer
(ಶಿವರಾತ್ರಿ ಹಬ್ಬ ಆಚರಿಸುವುದೆಂದರೆ, ಪರಮೇಶ್ವರನ ಅಚಲ ನಂಬಿಕೆಯನ್ನು ಪುನರ್‌ಮನನ ಮಾಡಿಕೊಳ್ಳುವ ಒಂದು ಅವಕಾಶ. ಪಾಮರರಿಗೆ ಒಂದು ದಿನದ ತಪಸ್ಸು. ತನಗಿಂತ ದೊಡ್ಡವನೊಬ್ಬನಿದ್ದಾನೆಂಬ ಭಯ ಮಿಶ್ರಿತ ಗೌರವ. ಶಿವನೊಲುಮೆಯಾಂದಿದ್ದರೆ ಭಯವಿಲ್ಲ ಎನ್ನುವ ಸಮಾಧಾನ. ನಿರ್ಮಲ ಮನಸ್ಸಿನಿಂದ ಶಿವ ದರ್ಶನ, ಬಿಲ್ವಪತ್ರೆಯ ಪೂಜೆ, ಭಕ್ತಿಭಾವಗಳ ಯಥೇಶ್ಚ ನೈವೇದ್ಯ.

ಭಕ್ತ ಸಿರಿಯಾಳನಂತೆ, ಬೇಡರ ಕಣ್ಣಪ್ಪನಂತೆ ನೇಮನಿಷ್ಠೆಯನ್ನು ಕೈಕಂಕರ್ಯವೆಂದು ಭಾವಿಸುವವನಾದರೆ ಅಹೋರಾತ್ರಿ ನಾಲಕ್ಕು ಯಾಮದ ಪೂಜೆ. ರುದ್ರಾಭಿಷೇಕ, ಮಹಾರುದ್ರ ಪಠಣ. ಅನೇಕರಿಗೆ ಇಂದು ನಿಟ್ಟುಪವಾಸದ ದಿನಕೂಡ. ಕೆಲವರಿಗೆ ಪಾನಕ, ಕೋಸಂಬರಿ, ಹಣ್ಣು ಹಂಪಲಗಳೇ ಆಹಾರ.

ಇಂಥ ದಿವಸ ನಿಮಗೊಂದು ಫಲಾಹಾರ ಅರ್ಥಾತ್‌ ಫಲಾಮೃತವನ್ನು ಉಣಿಸಬೇಕೆಂಬ ಆಸೆ ನಮ್ಮದು. ಫಲಾಮೃತ ತಯಾರಿಸುವ ಬಗೆಯನ್ನು ಬೆಂಗಳೂರಿನ ಅಂಜಲಿ ರಾಮಣ್ಣ ವಿವರಿಸಿದ್ದು, ಆಬಾಲವೃದ್ಧರಿಗೂ ಸಲ್ಲುವ ಹಣ್ಣಿನ ಜೀವರಸವನ್ನು ಇಂದು ತಯಾರಿಸಿ ಮನೆ-ನೆರೆಮನೆ ಮಕ್ಕಳಿಗೆ ಕೊಡುವವರಂಥವರಾಗಿರಿ. ನೀವೂ ಸೇವಿಸಿ ತಣ್ಣಗಿರಿ, ಈ ಬೆಸಗೆಯಲ್ಲಿ. ಶಿವ ನಿಮಗೊಲಿದಾನು. ಅದೇಕೆ ಒಲಿಯನು?- ಸಂಪಾದಕ)

ಫಲಾಮೃತ ಮಾಡೋದು ಎಷ್ಟು ಸುಲಭ ಗೊತ್ತಾ...

ಕಲ್ಲಂಗಡಿ ಹಣ್ಣಿನ ಹೋಳುಗಳು 4 ಕಪ್
ಕರಬೂಜ ಹಣ್ಣಿನ ಹೋಳುಗಳು 3 ಕಪ್
ಚಿಕ್ಕದಾದ ಸಪೋಟ ಹಣ್ಣುಗಳು 2 ಅಥವಾ 3
ಕಳಿತ ಏಲಕ್ಕಿ ಬಾಳೆಹಣ್ಣು 2 ಅಥವಾ 3
ಚಿಕ್ಕದಾದ (ಸಿಪ್ಪೆ ಬಿಡಿಸಿದ) ಕಿತ್ತಲೆ ಹಣ್ಣು 2 ಅಥವಾ 3
ನಿಂಬೇಹಣ್ಣಿನ ರಸ 1 ಸ್ಪೂನ್
ಬಿಡಿಸಿದ ಪುದಿನಾ ಸೊಪ್ಪು 1/2 ಕಪ್
ರುಚಿಗೆ ಬೇಕಾದಷ್ಟು (ಬೇಕಿದ್ದರೆ) ಸಕ್ಕರೆ, ಒಂದು ಚಿಟಿಕೆ ಉಪ್ಪು, ಒಂದು ಸ್ಪೂನ್‌ ಚ್ಯಾಟ್‌ ಮಸಾಲ ಪುಡಿ

ವಿಧಾನ : ಎಲ್ಲ ಸಾಮಾನನ್ನು ಮಿಕ್ಸಿಗೆ ಹಾಕಿ ಜೂಸ್‌ ಮಾಡಿ, ಸೋಸಿಡುವುದು. ಆಗ ಮಾಡಿ ಆಗಲೇ ಉಪಯೋಗಿಸಿದರೆ ಒಳಿತು.

English summary

Fruit punch for summer | Rcipe for Karnataka summer | Mixed fruit juice | ಬೇಗೆ ತಣಿಸುವ ಜ್ಯೂಸ್ | ಬೇಸಿಗೆಗೆ ತಣ್ಣನೆಯ ಪಾನಕ

Mixed fruit juice is the right choice on the occasion of Mahashivaratri, as the summer too is on the door step. A recipe by Anjali Ramanna, Bangalore.
Story first published: Thursday, March 3, 2011, 16:55 [IST]
X
Desktop Bottom Promotion