For Quick Alerts
ALLOW NOTIFICATIONS  
For Daily Alerts

ಹುಳಿ ಖಾರದ ಸಮ್ಮಿಶ್ರಣ ಮಾವಿನ ರಸಂನಲ್ಲಿದೆ

|
Mango Rasam Recipe
ಟೊಮೆಟೊ ರಸಂ, ಜೀರಿಗೆ ರಸಂ ಮಾಡಿ ಬೋರ್ ಆಗಿದ್ದರೆ ಹೊಸದಾದ ಈ ಮಾವಿನ ರಸಂ ರುಚಿಯನ್ನು ತಯಾರಿಸಿ ಸವಿಯಬಹುದು. ಹುಳಿ ಖಾರದ ಹದವಾದ ಸಮ್ಮಿಶ್ರಣದ ಈ ಮಾವಿನ ರಸಂ ನಿಮ್ಮ ಮನ ಗೆಲ್ಲುವುದಂತೂ ಗ್ಯಾರಂಟಿ.

ಬೇಕಾಗುವ ಪದಾರ್ಥ:

* 1 ಮಾವಿನ ಕಾಯಿ (ಬೇಯಿಸಿದ್ದು)
* 1 ಚೂರು ಬೆಲ್ಲ
* 3 ಚಮಚ ಮೆಣಸು, 3 ಚಮಚ ಜೀರಿಗೆ
* ಕರಿಬೇವು, 2-3 ಹಸಿರು ಮೆಣಸಿನಕಾಯಿ
* 1 ಕಪ್ ತಾಜಾ ತೆಂಗಿನ ತುರಿ
* 1 ಚಮಚ ಸಾಸಿವೆ, 1 ಕೆಂಪು ಒಣ ಮೆಣಸಿನಕಾಯಿ
* 1 ಲೀಟರ್ ನೀರು
* ರುಚಿಗೆ ತಕ್ಕಷ್ಟು ಉಪ್ಪು
* ಕತ್ತರಿಸಿದ ಕೊತ್ತಂಬರಿ ಸೊಪ್ಪು

ಮಾವಿನ ರಸಂ ಮಾಡುವುದು ಹೇಗೆ?
* ಬೇಯಿಸಿದ ಮಾವಿನ ಕಾಯಿ ರಸವನ್ನು ತೆಗೆದು ಒಂದು ಲೀಟರ್ ನೀರಿಗೆ ರಸವನ್ನು ಬೆರೆಸಿ ಬೇಯಲು ಇಡಬೇಕು.
* ಬಾಣಲೆಯಲ್ಲಿ ಜೀರಿಗೆ ಮತ್ತು ಮೆಣಸನ್ನು ಹುರಿದು ಪುಡಿಮಾಡಿಕೊಳ್ಳಬೇಕು.
* ಅದೇ ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಹಸಿ ಮೆಣಸಿನ ಕಾಯಿ, ತೆಂಗಿನ ತುರಿಯನ್ನು ಹುರಿದು ಅದನ್ನು ಪೇಸ್ಟ್ ನಂತೆ ರುಬ್ಬಿಕೊಳ್ಳಬೇಕು.
* ಈಗ ರುಬ್ಬಿಕೊಂಡ ಪುಡಿ, ಪೇಸ್ಟ್, ಉಪ್ಪು, ಬೆಲ್ಲವನ್ನು ಕುದಿಯುತ್ತಿರುವ ರಸದೊಂದಿಗೆ ಬೆರೆಸಬೇಕು. ಇದನ್ನು ಚೆನ್ನಾಗಿ ತಿರುಗಿಸಿ ಸಣ್ಣ ಕಾವಿನಲ್ಲಿ ಕೆಲ ನಿಮಿಷ ಕುದಿಸಬೇಕು.
* ಕೊನೆಗೆ ಸಾಸಿವೆ, ಒಣಮೆಣಸಿನಕಾಯಿ ಮತ್ತು ಕರಿಬೇವಿನಿಂದ ಒಗ್ಗರಣೆ ನೀಡಿ ರಸಂಗೆ ಬೆರೆಸಬೇಕು. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಂಡು ಮೇಲೆ ಉದುರಿಸಿದರೆ ರುಚಿಯಾದ ಮಾವಿನ ರಸಂ ಸವಿಯಲು ಸಿದ್ಧವಾಗಿರುತ್ತೆ.

English summary

Mango Rasam Recipe | Different Types of Rasam | ಮಾವಿನ ಹಣ್ಣಿನ ರಸಂ ರೆಸಿಪಿ | ವಿಧವಿಧವಾದ ರಸಂ ಅಡುಗೆ

If you are bored of preparing the usual tomato or jeera rasams, here is a spicy mango rasam recipe that can be prepared for your evening supper and it tastes best with rice and ghee. Take a look to know how to go about aam rasam or mango rasam recipe.
Story first published: Friday, September 23, 2011, 16:40 [IST]
X
Desktop Bottom Promotion