For Quick Alerts
ALLOW NOTIFICATIONS  
For Daily Alerts

ಹೊಸರುಚಿ : ಹೋಳಿಗೆ ಸಾರು ಅಥವಾ ಒಬ್ಬಟ್ಟು ಸಾರು

By * ಕುಮುದಾ ಶಂಕರ್, ಸೌದಿ ಅರೇಬಿಯಾ
|
Holige saaru recipe
ಬೇಳೆ ಸಾರು, ಕಟ್ಟಿನ ಸಾರು, ಮೆಣಸಿನ ಸಾರು, ಕೂಟು, ಈರುಳ್ಳಿ ಸಾಂಬಾರು, ಸೊಪ್ಪಿನ ಸಾರು ಮುಂತಾದ ವಿವಿಧ ಬಗೆಯ ಸಾರು, ಸಾಂಬಾರು ಮಾಡಿ ನಿಮಗೆ ತಿಳಿದಿರುತ್ತದೆ. ಆದರೆ, ಒಬ್ಬಟ್ಟು ಸಾರು ಅಥವಾ ಹೋಳಿಗೆ ಸಾರು ಎಂದಾದರೂ ಮಾಡಿದ್ದೀರಾ? ಮಾಡಿಲ್ಲದಿದ್ದರೆ, ಇಲ್ಲಿದೆ ನೋಡಿ ವಿಶಿಷ್ಟ ಬಗೆಯ ಸಾರು.

ಬೇಳೆಕಟ್ಟು : ಬೇಳೆಯನ್ನು ತುಂಬಾ ನೀರು ಹಾಕಿ ಬೇಯಿಸಿಕೊಳ್ಳಬೇಕು. ಬೇಳೆಯೂ ಕರಗದಂತೆ ಬೇಯಿಸಿ, ಗಟ್ಟಿಯಿರುವಾಗಲೆ ಅದನ್ನು ಇಳಿಸಿ ನೀರು ಸೋಸಿ ಬಸಿದುಕೊಳ್ಳಿ. ಅದರಿಂದ ಬರುವ ನೀರನ್ನೆ "ಬೇಳೆ ಕಟ್ಟು" ಎನ್ನುತ್ತೇವೆ. ಬಸಿದಾಗ ಬಂದಿರುವ ಬೇಳೆಗೆ ಬೆಲ್ಲ ಮತ್ತು ಏಲಕ್ಕಿ ಹಾಕಿ, ಒಲೆ ಮೇಲಿಟ್ಟು ಕುದಿಸಿ, ರುಬ್ಬಿಕೊಳ್ಳುವ ಮಿಶ್ರಣವೇ "ಹೂರಣ".

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ ಬೇಯಿಸಿ ಬಸಿದು ತೆಗೆದ ಬೇಳೆಕಟ್ಟು

ಕರಿಬೇವು ಎಸಳು - ಎರಡು

ಹೂರಣ (ಬೇಳೆ-ಬೆಲ್ಲದ ರುಬ್ಬಿದ ಮಿಶ್ರಣ)- ಎರಡು ಚಮಚ

ಈರುಳ್ಳಿ - ಒಂದು

ಬೆಳ್ಳುಳ್ಳಿ ಐದಾರು ಎಸಳು

ತೆಂಗಿನಕಾಯಿ ತುರಿ ಸ್ವಲ್ಪ

ಹುಣಸೇಹಣ್ಣು / ಹುಣಸೇರಸ(ಪಲ್ಪ್)

ಕೊತ್ತಂಬರಿ ಸೊಪ್ಪು ಸ್ವಲ್ಪ

ಎಣ್ಣೆ / ತುಪ್ಪ

ಸಾಸಿವೆ, ಕರಿಬೇವು

ಇಂಗು, ಜೀರಿಗೆ

ಉಪ್ಪು

ಹುರಿದು ಮಸಾಲೆಪುಡಿ ಮಾಡಿಕೊಳ್ಳಿ

ಒಣಮೆಣಸಿನಕಾಯಿ ರುಚಿಗೆ

ಧನಿಯಾ - ಎರಡು ದೊಡ್ಡ ಚಮಚಗಳು

ಜೀರಿಗೆ - ಒಂದು ದೊಡ್ಡ ಚಮಚ

ಮೆಣಸು - ಕಾಲು ಚಮಚ

ಮೆಂತ್ಯ - ಕಾಲು ಚಮಚ

ಸಾಸಿವೆ - ಕಾಲು ಚಮಚ

ಚೆಕ್ಕೆ - ಚಿಕ್ಕ ಚೂರು,ಲವಂಗ -ಒಂದು

ತಯಾರಿಸುವ ರೀತಿ:

ಬೇಳೆ ಬಸಿದುಕೊಂಡ ಕಟ್ಟು ನೀರಿಗೆ ಅದು ಬಿಸಿಯಾಗಿರುವಾಗಲೆ ಒಂದೆರಡು ಎಸಳು ತೊಳೆದಿರುವ ಕರಿಬೇವಿನಸೊಪ್ಪು ಹಾಕಿಡಿ. ಮೊದಲು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಚೂರು ಎಣ್ಣೆ ಹಾಕಿ ಹುರಿದುಕೊಳ್ಳಿ. ಹುರಿದುಕೊಂಡು ಪುಡಿ ಮಾಡಲು ಹೇಳಿರುವ ಸಾಮಾನುಗಳನ್ನೆಲ್ಲಾ ಹುರಿದು ಪುಡಿಮಾಡಿಕೊಳ್ಳಿ.

ತೆಂಗಿನಕಾಯಿ ತುರಿಗೆ, ಹುರಿದಿರುವ ಈರುಳ್ಳಿ, ಬೆಳ್ಳುಳ್ಳಿ, ಮಸಾಲೆಪುಡಿ, ಹುಣಸೇಹಣ್ಣು, ಬೇಳೆ ಹೂರಣ, ಕೊತ್ತಂಬರಿಸೊಪ್ಪು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಈಗ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಮತ್ತು ಒಂದು ಚಮಚ ತುಪ್ಪ ಹಾಕಿ ಸಾಸಿವೆ, ಜೀರಿಗೆ, ಕರಿಬೇವು, ಇಂಗು ಮತ್ತು ಒಂದು ಜಜ್ಜಿದ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿಕೊಂಡು, ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಮತ್ತು ಬೇಳೆ ಕಟ್ಟು ಕೂಡ ಸೇರಿಸಿ. ಎರಡನ್ನು ಚೆನ್ನಾಗಿ ಬೆರೆಸಿ ಕುದಿಯಲು ಬಿಡಿ. ರುಚಿಗೆ ತಕ್ಕ ಉಪ್ಪು ಮತ್ತು ಕಾರ ಸೇರಿಸಿಕೊಳ್ಳಿ. ಒಂದು ಕುದಿ ಮಾತ್ರ ಕುದಿಸಿ ಇಳಿಸಿ. ಹೋಳಿಗೆ ಸಾರು ತಯಾರಾಗುತ್ತದೆ.

ಈ ಹೋಳಿಗೆ ಸಾರನ್ನು ಮೊದಲ ಸಾರಿ ಮಾತ್ರ ಒಂದು ಸಾರಿ ಕುದಿಸಿದರೆ ಸಾಕು. ಈ ಸಾರು ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಕುದಿಸಿ ಕುದಿಸಿ ಸ್ವಲ್ಪ ಗಟ್ಟಿ ಬಂದಾಗ ಇನ್ನೂ ರುಚಿ ಜಾಸ್ತಿಯಾಗುತ್ತದೆ. [ಕೃಪೆ : ಅಡಿಗೆ ಸವಿರುಚಿ]

English summary

Obbattu saaru recipe | Holige saaru recipe | Recipe by Kumuda Shankar | ಒಬ್ಬಟ್ಟು ಸಾರು ರೆಸಿಪಿ | ಹೋಳಿಗೆ ಸಾರು ರೆಸಿಪಿ

Obbattu saaru recipe or Holige saaru recipe is a different kind of saaru, which can be prepared on special occasions like Hindu festivals.
Story first published: Wednesday, September 7, 2011, 10:59 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more