For Quick Alerts
ALLOW NOTIFICATIONS  
For Daily Alerts

ಚುಮುಗುಟ್ಟುವ ಚಳಿಯಲಿ ಜೀರಿಗೆ ರಸಂ ಜೊತೆಯಲಿ

|
Jeera rasam
ಈ ಚಳಿ ಮಳೆಯಲ್ಲಿ ಬಿಸಿ ಬಿಸಿ ಸೂಪ್ ಕುಡಿದರೆ ಚೆಂದ. ಆದ್ರೆ ಅದಕ್ಕಿಂತ ಹೆಚ್ಚಾಗಿ ಮನೆಯಲ್ಲೇ ಸಾಂಬಾರು ಪದಾರ್ಥಗಳಿಂದ ರಸಂ ಮಾಡಿ ಕುಡಿದರೆ ಬಾಯಿಗೂ ರುಚಿ, ಆರೋಗ್ಯಕ್ಕೂ ಒಳಿತು. ನೆಗಡಿ, ಕೆಮ್ಮು ಮುಂತಾದ ಶೀತಸಂಬಂಧಿ ಮತ್ತು ಗ್ಯಾಸ್ಟ್ರಿಕ್, ಆಸಿಡಿಟಿಯಂತಹ ಉದರ ಸಂಬಂಧಿ ರೋಗಗಳಿಗೆ ರಸಂ ಪರಿಣಾಮಕಾರಿ ಮದ್ದು.

ಜೀರಿಗೆ ರಸವನ್ನು ಅತಿ ಸುಲಭವಾಗಿ ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು:
* 1 1\2 ಚಮಚ ಜೀರಿಗೆ
* 3 ಕಪ್ ನೀರು
* ಒಂದು ಚಮಚ ಬೆಲ್ಲ
* 1 ಚಮಚ ಮೆಣಸು
* 1\4 ಕಪ್ ಕೊತ್ತಂಬರಿ ಕತ್ತರಿಸಿದ ಸೊಪ್ಪು
* 2 ಕೆಂಪು ಮೆಣಸಿನ ಕಾಯಿ
* 1 ಚಮಚ ಸಾಸಿವೆ
* ಎಣ್ಣೆ, ಉಪ್ಪು

ಜೀರಿಗೆ ರಸಂ ತಯಾರಿಸುವ ವಿಧಾನ: ಒಂದು ಪಾತ್ರೆಗೆ ಎಣ್ಣೆ ಹಾಕಿಕೊಂಡು ಅದು ಕಾದ ನಂತರ ಅದಕ್ಕೆ ಸಾಸಿವೆ, ಜೀರಿಗೆ, ಕೆಂಪು ಮೆಣಸಿನ ಕಾಯಿ, ಕರಿ ಮೆಣಸು ಇವೆಲ್ಲವನ್ನೂ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಅದಕ್ಕೆ ಮೂರು ಕಪ್ ನೀರು ಬೆರೆಸಿ ಚೆನ್ನಾಗಿ ಕುದಿಸಬೇಕು.

ರುಚಿಗೆ ತಕ್ಕಂತೆ ಉಪ್ಪು ಮತ್ತು ಬೆಲ್ಲವನ್ನು ಹಾಕಿ ಕತ್ತರಿಸಿಕೊಂಡಿದ್ದ ಕೊತ್ತಂಬರಿ ಸೊಪ್ಪನ್ನು ಹಾಕಬೇಕು. ಈಗ ಜೀರಿಗೆ ರಸಂ ಕುಡಿಯಲು ತಯಾರಾಗಿದೆ. ಇದನ್ನು ಚಳಿಯಲ್ಲಿ ಹಾಗೆಯೇ ಕುಡಿಯಬಹುದು ಅಥವಾ ಅನ್ನದೊಂದಿಗೆ ಬಳಸಬಹುದು. ಜೊತೆಗೆ ತುಪ್ಪ ಸೇರಿದರೆ ಇನ್ನೂ ರುಚಿ.

English summary

Jeera Rasam for Monsoon | Jeera rasam recipe for Good Health | ಮಳೆಗಾಲಕ್ಕೆ ಉತ್ತಮ ಜೀರಿಗೆ ರಸಂ | ಉತ್ತಮ ಆರೋಗ್ಯಕ್ಕೆ ಜೀರಿಗೆ ರಸಂ ರೆಸಿಪಿ

Soups may be the best appetizers but rasams are even better as they are even more watery and contain spices that cure many monsoon related diseases and stomach related problems. Today we want to share a secret recipe that is best for seasonal change, we are referring to Jeera Rasam recipe. Take a look.
Story first published: Wednesday, August 24, 2011, 12:38 [IST]
X
Desktop Bottom Promotion