For Quick Alerts
ALLOW NOTIFICATIONS  
For Daily Alerts

ನಮ್ಮ ಈರುಳ್ಳಿ ಸಾಂಬಾರ್ ಕದ್ದವರಾರು?

By Shami
|
ತರಕಾರಿ ಬೆಲೆಗಳು ಕಮ್ಮಿ ಆಗಿವೆ ಎಂದು ನೀವು ಸುದ್ದಿ ಹಾಕಿದ್ದೀರಿ. ಹುರುಳಿಕಾಯಿ ಕೆಜಿಗೆ 80 ರೂಪಾಯಿ ಕೊಟ್ಟು ಸುಸ್ತು ಹೊಡೆದಿದ್ದ ನಮಗೆ ಈ ಸುದ್ದಿ ನೋಡಿ ಸಂತೋಷವಾಯಿತು. ಈರುಳ್ಳಿ 17 ರೂ ಆಲೂಗೆಡ್ಡೆಗೆ 16 ರೂಪಾಯಿ. ಆಹಾ, ಆಲೂಗೆಡ್ಡೆ ಈರುಳ್ಳಿ ಸಾಂಬಾರ್ ತಿಂದಷ್ಟೇ ಸಂತೋಷವಾಯಿತು.

ತರಕಾರಿ ಬೆಲೆ ನಿರ್ಧಾರ ಹೇಗೆ ಆಗುತ್ತದೆ, ಅದನ್ನು ನಿರ್ಧಾರ ಮಾಡುವವರು ಯಾರು ಎಂಬ ಪ್ರಶ್ನೆ ನಮ್ಮ ಮನೆಯವರನ್ನೆಲ್ಲ ಕಾಡಿತು. ನಮ್ಮ ಮನೆ ಹತ್ತಿರ ಇರುವ ರಿಲಯನ್ಸ್ ಮಳಿಗೆಯಲ್ಲಿ ತಾಜಾ ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ತದೆ. ಆದರೆ ಅದೇ ತರಕಾರಿಗಳು ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಹೆಚ್ಚಾಗಿರುತ್ತವೆ. ಹೀಗೆ ಏಕೆ? ಖಾಸಗಿಯವರು ಕಡಿಮೆ ಬೆಲೆಗೆ, ಸರಕಾರದವರು ದುಬಾರಿ ಬೆಲೆಗೆ ಎನ್ನುವುದು ಯಾವ ನ್ಯಾಯ?

ರಿಲಯನ್ಸ್ ಫ್ರೆಶ್ ಅಂಗಡಿಯಲ್ಲಿ ತರಕಾರಿ ಬೆಲೆಗಳು ಯಾವತ್ತೂ ಕಡಿಮೆ ಇರುತ್ತವೆ. ಈರುಳ್ಳಿ ಬೇರೇ ಕಡೆ 16 ರೂಪಾಯಿ ಇದ್ದರೆ ರಿಲಯನ್ಸ್ ನಲ್ಲಿ 10 ಅಥವಾ 11 ರೂಪಾಯಿಗೆ ಮಾರುತ್ತಾರೆ. ಇತರ ತರಕಾರಿ ಬೆಲೆಗಳು ಕಡಿಮೆನೇ. ತರಕಾರಿಗಳು ಅಂಗಡಿಗೆ ಬರುವ ಮೂಲಗಳು ಒಂದೇ ಇರುವಾಗ ಬೆಲೆ ವ್ಯತ್ಯಾಸ ಏಕೆ ಆಗುತ್ತದೆ ಎನ್ನುವುದು ನಮ್ಮ ಪ್ರಶ್ನೆ. ಕೆಆರ್ ಮಾರುಕಟ್ಟೆ ಮತ್ತಿತರ ಕಾಂಪ್ಲೆಕ್ಸುಗಳಲ್ಲಿ ಮಾರಾಟವಾಗುವ ಬೆಲೆಗಳೂ ದುಬಾರಿಯೇ.

ಬೆಳೆಗಾರನಿಗೂ ಲಾಭವಿಲ್ಲ, ತಿನ್ನುವವರಿಗೂ ಲಾಭವಿಲ್ಲದ ತರಕಾರಿ ಬೆಲೆ ನಿರ್ಧಾರದ ಬಗ್ಗೆ ಏಕ ರೂಪತೆ ಬರಬೇಕು. ಮಧ್ಯವರ್ತಿಗಳ ಹಾವಳಿಯಲ್ಲಿ ಇಬ್ಬರಿಗೂ ಅನ್ಯಾಯವಾಗುತ್ತಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ನಮಗೆ ಉತ್ತರಿಸಬೇಕು.

* ಲಲಿತಾ ಮುನಿರಾಜು ಮತ್ತು ಕೆಂಪಮ್ಮ ಆಡುಗೋಡಿ

Story first published: Friday, July 23, 2010, 15:44 [IST]
X
Desktop Bottom Promotion