For Quick Alerts
ALLOW NOTIFICATIONS  
For Daily Alerts

ರುಚಿ ಮತ್ತು ಘಮ್ಮೆನ್ನುವ ರಸಂ ಮಾಡಬೇಕೆ?

|
Rasam Masala Powder Recipe
ಅಮ್ಮ ರಸಂ ತಯಾರಿಸುತ್ತಿದ್ದರೆ ಅದರ ಘಮ್ಮೆನ್ನುವ ವಾಸನೆಗೆ ಹೊಟ್ಟೆ ಹಸಿವು ಜಾಸ್ತಿಯಾಗುವುದು. ರಸಂ ರುಚಿಕರವಾಗಿ ಮತ್ತು ಘಮ್ಮೆನ್ನಲು ಅದಕ್ಕೆ ಬಳಸುವ ಮಸಾಲೆ ಕಾರಣ. ಮಸಾಲೆಯನ್ನು ತಯಾರಿಸುವಾಗ ಬಳಸುವ ಸಾಮಾಗ್ರಿಗಳು ಮತ್ತು ಅವುಗಳ ಪ್ರಮಾಣ ಪ್ರಮುಖ ಅಂಶವಾಗಿರುತ್ತದೆ. ಇಲ್ಲಿದೆ ನೋಡಿ ರಸಂ ಮಾಡಲು ಬೇಕಾಗುವ ಮಸಾಲೆ ಪುಡಿ ತಯಾರಿಸುವ ವಿಧಾನ.

ಬೇಕಾಗುವ ಸಾಮಾಗ್ರಿಗಳು:

* 1/2 ಚಮಚ ಜೀರಿಗೆ
* 2 ಚಮಚ ಕೊತ್ತಂಬರಿ ಬೀಜ
* 1 ಚಮಚ ಮೆಂತೆ ಕಾಳು
* 1 ಚಮಚ ಸಾಸಿವೆ
* ಬೇವಿನ ಸೊಪ್ಪು
* 1/2 ಚಮಚ ಉದ್ದಿನ ಬೇಳೆ
* ಒಂದು ಚಿಟಿಕೆಯಷ್ಟು ಇಂಗು
* 1 ಚಮಚ ಕರಿಮೆಣಸು
* 6 ಒಣಮೆಣಸು (ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು)

ತಯಾರಿಸುವ ವಿಧಾನ:

1. ಇಂಗು ಹೊರತು ಪಡಿಸಿ ಉಳಿದೆಲ್ಲಾ ಸಾಮಾಗ್ರಿಗಳನ್ನು ಬಾಣಲೆಗೆ ಹಾಕಿ ಕಡಿಮೆ ಉರಿಯಲ್ಲಿ ಹುರಿಯಬೇಕು. ಮೆಣಸು ಸ್ವಲ್ಪ ವಾಸನೆ ಬರಲು ಪ್ರಾರಂಭಿಸಿದಾಗ ಉರಿಯಿಂದ ತೆಗೆಯಬೇಕು.

2. ನಂತರ ಈ ಹುರಿದ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ನೈಸ್ ಪುಡಿ ಮಾಡಬೇಕು, ನಂತರ ಇಂಗು ಸೇರಿಸಿದರೆ ರಸಂ ರುಚಿ ಹೆಚ್ಚಿಸುವ ಮಸಾಲೆ ಪುಡಿ ರೆಡಿ.

English summary

Rasam Masala Powder Recipe | Variety Of Msala Powder | ರಸಂ ಮಸಾಲೆ ಪುಡಿ ರೆಸಿಪಿ | ಅನೇಕ ಬಗೆಯ ಮಸಾಲೆ ಪುಡಿ

If you want to prepare very tasty rasam then you should add right ingredient in right quantity. Here there is recipe of rasam powder. Take a look.
Story first published: Thursday, March 15, 2012, 18:14 [IST]
X
Desktop Bottom Promotion