For Quick Alerts
ALLOW NOTIFICATIONS  
For Daily Alerts

ಗೋಡಂಬಿ ಅಣಬೆ ಸಾರು ಮತ್ತು ಬಿಸಿ ಆಮ್ಲೆಟ್‌!

By Super
|
Mushroom
ಅಣಬೆ ಸಸ್ಯಾಹಾರದ ಸಾಲಿಗೆ ಸೇರುತ್ತದೆಯೋ ಮಾಂಸಾಹಾರದ ಪಟ್ಟಿಯಲ್ಲಿದೆಯೋ ಎಂಬ ಜಿಜ್ಞಾಸೆ ಹಾಗಿರಲಿ. ಅಣಬೆ ಅಮ್ಲೆಟ್‌ ಸವಿದ ಮೇಲೆ ಹೇಳಿ ನೀವು ಯಾವ ಪಟ್ಟಿಗೆ ಸೇರುತ್ತೀರಿ ?

ಗೋಡಂಬಿ - ಅಣಬೆ ಸಾರು

ಬೇಕಾಗುವ ಸಾಮಗ್ರಿ:

100 ಗ್ರಾಂ ಅಣಬೆ, ಗೋಡಂಬಿ 75 ಗ್ರಾಂ. 2 ಈರುಳ್ಳಿ, 3 ಒಣಮೆಣಸಿನ ಕಾಯಿ, 2 ಹಸಿ ಮೆಣಸಿನ ಕಾಯಿ, ಒಂದು ಚಿಟಿಕೆ ಅರಿಸಿನ, 1 ಟೀ ಚಮಚ ಕೊತ್ತಂಬರಿ ಬೀಜ, ಅರ್ಧ ಟೀ ಚಮಚ ಜೀರಿಗೆ, 4 ಎಸಳು ಬೆಳ್ಳುಳ್ಳಿ, 1 ಇಂಚು ಹಸಿ ಶುಂಠಿ, ಅರ್ಧ ಬಟ್ಟಲು ಹಸಿ ತೆಂಗಿನ ಕಾಯಿ ತುರಿ, 3 ಎಸಳು ಕರಿಬೇವಿನ ಎಲೆ, ಎಣ್ಣೆ, ರುಚಿಗೆ ಬೇಕಾಗುವಷ್ಟು ಉಪ್ಪು .

ವಿಧಾನ :

ತೆಂಗಿನ ತುರಿಯಿಂದ ಹಾಲನ್ನು ಬೇರ್ಪಡಿಸಬೇಕು. ಸ್ವಲ್ಪ ತೆಂಗಿನ ಹಾಲನ್ನು ತೆಗೆದುಕೊಂಡು ಅದಕ್ಕೆ ಸ್ವಚ್ಛ ಮಾಡಿ ಹೆಚ್ಚಿದ ಅಣಬೆ ಮತ್ತು ಬಿಸಿ ನೀರಿನಲ್ಲಿ ನೆನೆಸಿದ ಗೋಡಂಬಿಯನ್ನು ಹಾಕಿ ಬೇಯಿಸಬೇಕು.

ನಂತರ ಒಣ ಮೆಣಸಿನ ಕಾಯಿ, ಕೊತ್ತಂಬರಿ ಬೀಜ, ಜೀರಿಗೆ ಅರಿಶಿನ, ಸ್ವಲ್ಪ ತೆಂಗಿನ ತುರಿ ಇವೆಲ್ಲವುಗಳನ್ನು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಎಣ್ಣೆ ಕಾಯಿಸಿ, ಅದರಲ್ಲಿ ಹೆಚ್ಚಿದ ಹಸಿ ಮೆಣಸಿನ ಕಾಯಿ, ಈರುಳ್ಳಿ, ಕರಿಬೇವು, ಅರೆದಿಟ್ಟ ಮಸಾಲೆ ಸೇರಿಸಿ. ಈರುಳ್ಳಿ ಮೃದುವಾಗುವ ತನಕ ಬೇಯಬೇಕು. ಈಗ ಅದರಲ್ಲಿ ಬೇಯಿಸಿಟ್ಟ ಗೋಡಂಬಿ, ಅಣಬೆ, ಹಾಗೂ ನಿಂಬೆ ರಸ, ಉಪ್ಪನ್ನು ಸೇರಿಸಿ.

ಇದನ್ನು ಕುದಿ ಬರುವ ತನಕ ಕುದಿಸಿ ಉಳಿದ ತೆಂಗಿನ ಕಾಯಿ ಹಾಲನ್ನು ಸೇರಿಸಿ ಮತ್ತೆ 5 ನಿಮಿಷಗಳ ಕಾಲ ಬೇಯಿಸಿ ಕೆಳಗಿಳಿಸಿ. ಗೋಡಂಬಿ-ಅಣಬೆ ಸಾರು ರೆಡಿ.

*

ಅಣಬೆ ಆಮ್ಲೆಟ್‌

ಬೇಕಾಗುವ ಸಾಮಗ್ರಿ:

3-4 ಅಣಬೆ. (ಸಣ್ಣಗೆ ಹೆಚ್ಚಿದ್ದು), 1 ಮೊಟ್ಟೆ, 1 ಟೀ ಸ್ಪೂನ್‌ ಹಾಲು, 1 ಸಣ್ಣ ಈರುಳ್ಳಿ ಸಣ್ಣಗೆ ಹೆಚ್ಚಿದ್ದು. ಸಣ್ಣಗೆ ಹೆಚ್ಚಿದ 2 ಹಸಿ ಮೆಣಸಿನ ಕಾಯಿ, 1 ಚಿಟಿಕೆ ಕರಿಮೆಣಸಿನ ಪುಡಿ, 1 ಟಿ ಚಮಚ ನಿಂಬೆ ರಸ. ಸ್ವಲ್ಪ ಎಣ್ಣೆ, ರುಚಿಗೆ ಬೇಕಾಗುವಷ್ಟು ಉಪ್ಪು.

ವಿಧಾನ :

ಮೊಟ್ಟೆಯನ್ನು ಹಾಲಿನೊಂದಿಗೆ ಒಡೆಯಬೇಕು. ಅಣಬೆಯನ್ನು ಈರುಳ್ಳಿ ಹಾಗೂ ಹಸಿ ಮೆಣಸಿನ ಕಾಯಿಯಾಂದಿಗೆ ಹುರಿಯಬೇಕು. ಅದಕ್ಕೆ ಮೊಟ್ಟೆಯ ಮಿಶ್ರಣ, ಮೆಣಸಿನ ಪುಡಿ, ನಿಂಬೆ ರಸ, ಉಪ್ಪು ಸೇರಿಸಿ. ನಂತರ ತವೆಯಲ್ಲಿ ಎಣ್ಣೆ ಹಚ್ಚಿ ಮಿಶ್ರಣ ಹಾಕಿ ಆಮ್ಲೆಟ್‌ ತಯಾರಿಸಿ.

English summary

Mushroom curries special | Mushroom Cashew rasam | Mushroom Omelette | ಗೋಡಂಬಿ ಅಣಬೆ ಸಾರು | ಅಣಬೆ ಆಮ್ಲೆಟ್

Karnataka kitchen room : Mushroom curries special. Mushroom Cashew Rasam and Mushroom Omelette recipes.
Story first published: Tuesday, March 27, 2012, 18:25 [IST]
X
Desktop Bottom Promotion