For Quick Alerts
ALLOW NOTIFICATIONS  
For Daily Alerts

ರಾಗಿ ರೊಟ್ಟಿ ಪಾಕ ವಿಧಾನ

Posted By: Divya Pandith
|

ರಾಗಿ ಅತ್ಯುತ್ತಮ ಆಹಾರ ಪದಾರ್ಥದಲ್ಲಿ ಒಂದು. ಸಮೃದ್ಧವಾದ ಪೋಷಕಾಂಶವನ್ನು ಹೊಂದಿರುವುದರಿಂದ ಜನರು ಇದನ್ನು ಮುಖ್ಯ ಆಹಾರವಾಗಿಯೂ ಸೇವಿಸುತ್ತಾರೆ. ಇದರಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ರಾಗಿರೊಟ್ಟಿಯೂ ಒಂದು. ಗ್ರಾಮೀಣ ಜನರು ಇದನ್ನು ಕಡ್ಡಾಯವಾದ ಉಪಹಾರವಾಗಿ ಸೇವಿಸುತ್ತಾರೆ. ಇದರಲ್ಲಿ ಪ್ರೋಟೀನ್ ಮತ್ತು ನಾರಿನಂಶ ಅಧಿಕ ಪ್ರಮಾಣದಲ್ಲಿ ಇರುವುದರಿಂದ ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುವುದು.

ರಾಗಿ ಹಿಟ್ಟಿನಿಂದಿಗೆ ವಿವಿಧ ಬಗೆಯ ತರಕಾರಿ ಹಾಗೂ ತೆಂಗಿನಕಾಯಿ ಮಿಶ್ರಣದಿಂದ ತಯಾರಿಸಲಾಗುತ್ತದೆ. ರೊಟ್ಟಿಯನ್ನು ತುಪ್ಪ ಮತ್ತು ಶೇಂಗಾ ಚಟ್ನಿಯೊಂದಿಗೆ ಸವಿದರೆ ಉತ್ತಮ ಅನುಭವ ಸಿಗುವುದು. ಜೊತೆಗೆ ನಾಲಿಗೆ ಮತ್ತೆ ಮತ್ತೆ ಚಪ್ಪರಿಸುವಂತೆ ಮಾಡುವುದು. ಮುಂಜಾನೆಯ ಉಪಹಾರ, ಹಬ್ಬ ಹರಿದಿನಗಳಲ್ಲಿ ಉಪವಾಸದ ಭಕ್ಷ್ಯವಾಗಿಯೂ ಇದನ್ನು ಸವಿಯಬಹುದು. ಇದು ದೇಹಕ್ಕೆ ಶಕ್ತಿ ಹಾಗೂ ಚೈತನ್ಯಭರಿತವಾದ ಅನುಭವ ನೀಡುವುದು.

ಕರ್ನಾಟಕದಲ್ಲಿ ಜನಪ್ರಿಯವಾದ ಸಾಂಪ್ರದಾಯಿಕ ತಿಂಡಿಗಳಲ್ಲಿ ಇದೂ ಒಂದು. ಈರುಳ್ಳಿ, ಮೆಣಸಿನ ಕಾಯಿಗಳ ಮಿಶ್ರಣವನ್ನು ಹೊಂದಿರುವ ಈ ರೊಟ್ಟಿಯನ್ನು ಕೈಗಳಿಂದ ತಟ್ಟುತ್ತಾರೆ. ಸೂಕ್ತವಾದ ಪ್ರಮಾಣದಲ್ಲಿ ಎಣ್ಣೆ ಅಥವಾ ತುಪ್ಪದಲ್ಲಿ ಬೇಯಿಸಬಹುದು. ಸರಳವಾಗಿ ಹಾಗೂ ಸುಲಭವಾದ ವಿಧಾನದಲ್ಲಿ ತಯಾರಿಸುವ ಈ ತಿಂಡಿಯನ್ನು ನೀವೂ ಸಹ ಮನೆಯಲ್ಲಿ ತಯಾರಿಸಬಹುದು. ನಿಮಗೆ ಈ ತಿಂಡಿಯನ್ನು ತಯಾರಿಸಲು ಸೂಕ್ತ ಮಾಹಿತಿ ಬೇಕಿದ್ದಲ್ಲಿ ಈ ಮುಂದೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಿ.

Ragi rotti recipe
ರಾಗಿ ರೊಟ್ಟಿ ರೆಸಿಪಿ| ರಾಗಿ ರೊಟ್ಟಿ ಮಾಡುವುದು ಹೇಗೆ| ನಾಚ್ನಿ ರೊಟ್ಟಿ ರೆಸಿಪಿ| ರಾಗಿ ಈರುಳ್ಳಿ ರೊಟ್ಟಿ ರೆಸಿಪಿ| ರೊಟ್ಟಿ ರೆಸಿಪಿ
ರಾಗಿ ರೊಟ್ಟಿ ರೆಸಿಪಿ| ರಾಗಿ ರೊಟ್ಟಿ ಮಾಡುವುದು ಹೇಗೆ| ನಾಚ್ನಿ ರೊಟ್ಟಿ ರೆಸಿಪಿ| ರಾಗಿ ಈರುಳ್ಳಿ ರೊಟ್ಟಿ ರೆಸಿಪಿ| ರೊಟ್ಟಿ ರೆಸಿಪಿ
Prep Time
10 Mins
Cook Time
15M
Total Time
25 Mins

Recipe By: ಕಾವ್ಯಶ್ರೀ ಎಸ್.

Recipe Type: ಪ್ರಮುಖ ಖಾದ್ಯ

Serves: 5-6

Ingredients
  • ರಾಗಿ ಹಿಟ್ಟು- 3/4 ಬೌಲ್

    ಎಣ್ಣೆ - ಬಳಿಯಲು

    ಹೆಚ್ಚಿಕೊಂಡ ಈರುಳ್ಳಿ- 2

    ನೀರು- ಮಿಶ್ರಗೊಳಿಸಲು

    ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - 1/2 ಕಪ್

    ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ- 5-6

    ಜೀರಿಗೆ -1 ಟೀ ಚಮಚ

    ಉಪ್ಪು -1/2 ಟೇಬಲ್ ಚಮಚ

Red Rice Kanda Poha
How to Prepare
  • 1. ಒಂದು ದೊಡ್ಡ ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಸೇರಿಸಿ.

    2. ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಮತ್ತು ಜೀರಿಗೆ ಸೇರಿಸಿ.

    3. ಹೆಚ್ಚಿಕೊಂಡ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.

    4. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ನಾವು ಅರ್ಧ ಟೇಬಲ್ ಚಮಚ ಉಪ್ಪನ್ನು ಸೇರಿಸಿದ್ದೇವೆ.

    5. ಒಂದು ಚಮಚದ ಸಹಾಯದಿಂದ ಎಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿ.

    6. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ ಹಿಟ್ಟನ್ನು ನಾದಿಕೊಳ್ಳಿ.

    7. ಒಂದು ಹಿಡಿಯಷ್ಟು ಹಿಟ್ಟನ್ನು ತೆಗೆದುಕೊಂಡು ಉಂಡೆಯ ಆಕಾರದಲ್ಲಿ ಮಾಡಿಕೊಳ್ಳಿ.

    8. ನಂತರ ಒಂದು ನಾನ್ ಸ್ಟಿಕ್ ಪೇಪರ್ ತೆಗೆದುಕೊಂಡು, ಎಣ್ಣೆಯನ್ನು ಸವರಿಕೊಳ್ಳಿ.

    9. ಹಿಟ್ಟಿನ ಉಂಡೆಯನ್ನು ಇದರ ಮೇಲಿಟ್ಟು, ಕೈಯಿಂದ ತಟ್ಟಿ.

    10. ನಂತರ ಮೂರು ರಂಧ್ರವನ್ನು ಮಾಡಿ. ಅದು ಚೆನ್ನಾಗಿ ಬೇಯಲು ಸಹಾಯ ಮಾಡುತ್ತದೆ.

    11. ವೃತ್ತಾಕಾರದಲ್ಲಿ ತಟ್ಟಿಕೊಂಡಿರಬೇಕು.

    12. ತವಾ ಅಥವಾ ಬಾಣಲೆಯ ಮೇಲೆ ಎರಡು ಟೇಬಲ್ ಚಮಚ ಎಣ್ಣೆಯನ್ನು ಸವರಿಕೊಳ್ಳಿ.

    13. ತಟ್ಟಿಕೊಂಡ ರೊಟ್ಟಿಯನ್ನು ಬಾಣಲೆಯ ಮೇಲೆ ಹಾಕಿ.

    14. ರೊಟ್ಟಿಯ ಮೇಲೂ ಸ್ವಲ್ಪ ಎಣ್ಣೆಯನ್ನು ಚಿಮುಕಿಸಿ.

    15. ಎರಡು ನಿಮಿಷ ಬೇಯಲು ಬಿಡಿ.

    16. ಎರಡು ಬದಿಯಲ್ಲೂ ಚೆನ್ನಾಗಿ ಬೇಯುವಂತೆ ತಿರುವಿಕೊಳ್ಳಿ.

    17. ಬೆಂದ ನಂತರ ಒಂದು ಪ್ಲೇಟ್‍ಗೆ ವರ್ಗಾಯಿಸಿ. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

Instructions
  • 1. ಫಾಯಿಲ್ ಪೇಪರ್, ಬಾಳೆ ಎಲೆ ಅಥವಾ ಅಂಟಿಕೊಳ್ಳದ ಯಾವುದೇ ಕಾಗದಗಳನ್ನು ಬಳಸಬಹುದು.
  • 2. ಹಿಟ್ಟನ್ನು ನೇರವಾಗಿ ಬಾಣಲೆಗೆ ಹಾಕಿಯೂ ರೊಟ್ಟಿಯನ್ನು ತಟ್ಟಬಹುದು.
  • 3. ಹಿಟ್ಟನ್ನು ತಟ್ಟುವಾಗ ಕೈಗೆ ಎಣ್ಣೆಯನ್ನು ಸವರಿಕೊಂಡಿರಿ.
Nutritional Information
  • ಬಡಿಸುವ ಪ್ರಮಾಣ - 1
  • ಕ್ಯಾಲೋರಿ - 107 ಕ್ಯಾಲ್
  • ಕೊಬ್ಬು - 4 ಗ್ರಾಂ.
  • ಪ್ರೋಟೀನ್ - 2.1 ಗ್ರಾಂ.
  • ಕಾರ್ಬೋಹೈಡ್ರೇಟ್ - 15 ಗ್ರಾಂ.
  • ಸಕ್ಕರೆ - 0.9 ಗ್ರಾಂ
  • ಫೈಬರ್ - 1.9 ಗ್ರಾಂ.

ಚಿತ್ರ ವಿವರಣೆ:

1. ಒಂದು ದೊಡ್ಡ ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಸೇರಿಸಿ.

Ragi rotti recipe

2. ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಮತ್ತು ಜೀರಿಗೆ ಸೇರಿಸಿ.

Ragi rotti recipe
Ragi rotti recipe

3. ಹೆಚ್ಚಿಕೊಂಡ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.

Ragi rotti recipe
Ragi rotti recipe

4. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ನಾವು ಅರ್ಧ ಟೇಬಲ್ ಚಮಚ ಉಪ್ಪನ್ನು ಸೇರಿಸಿದ್ದೇವೆ.

Ragi rotti recipe

5. ಒಂದು ಚಮಚದ ಸಹಾಯದಿಂದ ಎಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿ.

Ragi rotti recipe

6. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ ಹಿಟ್ಟನ್ನು ನಾದಿಕೊಳ್ಳಿ.

Ragi rotti recipe
Ragi rotti recipe

7. ಒಂದು ಹಿಡಿಯಷ್ಟು ಹಿಟ್ಟನ್ನು ತೆಗೆದುಕೊಂಡು ಉಂಡೆಯ ಆಕಾರದಲ್ಲಿ ಮಾಡಿಕೊಳ್ಳಿ.

Ragi rotti recipe
Ragi rotti recipe

8. ನಂತರ ಒಂದು ನಾನ್ ಸ್ಟಿಕ್ ಪೇಪರ್ ತೆಗೆದುಕೊಂಡು, ಎಣ್ಣೆಯನ್ನು ಸವರಿಕೊಳ್ಳಿ.

Ragi rotti recipe

9. ಹಿಟ್ಟಿನ ಉಂಡೆಯನ್ನು ಇದರ ಮೇಲಿಟ್ಟು, ಕೈಯಿಂದ ತಟ್ಟಿ.

Ragi rotti recipe
Ragi rotti recipe

10. ನಂತರ ಮೂರು ರಂಧ್ರವನ್ನು ಮಾಡಿ. ಅದು ಚೆನ್ನಾಗಿ ಬೇಯಲು ಸಹಾಯ ಮಾಡುತ್ತದೆ.

Ragi rotti recipe

11. ವೃತ್ತಾಕಾರದಲ್ಲಿ ತಟ್ಟಿಕೊಂಡಿರಬೇಕು.

Ragi rotti recipe

12. ತವಾ ಅಥವಾ ಬಾಣಲೆಯ ಮೇಲೆ ಎರಡು ಟೇಬಲ್ ಚಮಚ ಎಣ್ಣೆಯನ್ನು ಸವರಿಕೊಳ್ಳಿ.

Ragi rotti recipe

13. ತಟ್ಟಿಕೊಂಡ ರೊಟ್ಟಿಯನ್ನು ಬಾಣಲೆಯ ಮೇಲೆ ಹಾಕಿ.

Ragi rotti recipe

14. ರೊಟ್ಟಿಯ ಮೇಲೂ ಸ್ವಲ್ಪ ಎಣ್ಣೆಯನ್ನು ಚಿಮುಕಿಸಿ.

Ragi rotti recipe

15. ಎರಡು ನಿಮಿಷ ಬೇಯಲು ಬಿಡಿ.

Ragi rotti recipe

16. ಎರಡು ಬದಿಯಲ್ಲೂ ಚೆನ್ನಾಗಿ ಬೇಯುವಂತೆ ತಿರುವಿಕೊಳ್ಳಿ.

Ragi rotti recipe
Ragi rotti recipe

17. ಬೆಂದ ನಂತರ ಒಂದು ಪ್ಲೇಟ್‍ಗೆ ವರ್ಗಾಯಿಸಿ. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

Ragi rotti recipe
Ragi rotti recipe
Ragi rotti recipe
[ 4.5 of 5 - 27 Users]
Story first published: Saturday, March 3, 2018, 19:50 [IST]
X
Desktop Bottom Promotion