For Quick Alerts
ALLOW NOTIFICATIONS  
For Daily Alerts

ಅವಲಕ್ಕಿ ಪಾಕವಿಧಾನ

Posted By: Divya Pandith
|

ಅವಲಕ್ಕಿ ಜನಪ್ರಿಯ ಉಪಾರ. ಇದನ್ನು ಉತ್ತರ ಭಾರತ ಮತ್ತು ದಕ್ಷಿಣ ಭಾರತದೆಲ್ಲೆಡೆಯೂ ತಯಾರಿಸುತ್ತಾರೆ. ಅವಲಕ್ಕಿಯಲ್ಲಿ ಎರಡು ಮೂರು ಬಗೆಗಳಿರುವುದನ್ನು ಸಹ ನಾವು ಕಾಣಬಹುದು. ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ಅವಲಕ್ಕಿಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಅವಲಕ್ಕಿಯನ್ನು ಪವಿತ್ರ ಆಹಾರ ಎಂತಲೂ ಕರೆಯುತ್ತಾರೆ. ಕೆಲವು ದೇವರಿಗೆ, ವಿಶೇಷವಾಗಿ ಇದರಿಂದಲೇ ಪ್ರಸಾದವನ್ನೂ ಸಹ ತಯಾರಿಸುತ್ತಾರೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಉಪವಾಸ ಗೈಯುವಾಗಲೂ ಅವಲಕ್ಕಿಯನ್ನು ಸೇವಿಸುತ್ತಾರೆ.

ಅವಲಕ್ಕಿಯು ಪೋಷಕಾಂಶ ಭರಿತವಾದ ಉಪಹಾರ. ಇದರ ಸೇವನೆಯು ಪರಿಪೂರ್ಣತೆಯನ್ನು ನೀಡುತ್ತದೆ. ತೆಂಗಿನ ತುರಿ, ಈರುಳ್ಳಿ, ಟೊಮ್ಯಾಟೋ ಹಾಗೂ ಸೂಕ್ತ ಪ್ರಮಾಣದ ಉಪ್ಪು, ಹುಳಿ ಮತ್ತು ಖಾರವನ್ನು ಬೆರೆಸಿದರೆ ರುಚಿಕರವಾದ ತಿಂಡಿಯಾಗುತ್ತದೆ. ಇದನ್ನು ನಿತ್ಯದ ರೀತಿಯಲ್ಲಿ ಸೇವಿಸದರೂ ಯಾವುದೇ ಬಗೆಯ ಬೇಸರ ಉಂಟಾಗದು. ಇದರಲ್ಲಿ ಸೇರಿಸಲಾಗುವ ಕೆಲವು ಒಗ್ಗರಣೆ ಪದಾರ್ಥಗಳು ಹಾಗೂ ತರಕಾರಿಗಳು ನಾಲಿಗೆಗೆ ಇನ್ನಷ್ಟು ರುಚಿಯನ್ನು ನೀಡುತ್ತವೆ.

ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಈ ಉಪಹಾರವನ್ನು ಮುಂಜಾನೆಯ ಉಪಹಾರ, ಮಧ್ಯಾಹ್ನದ ಊಟದ ಸಲುವಾಗಿ, ಸಂಜೆ ಟೀ ಸಮಯದಲ್ಲಿ ಮತ್ತು ರಾತ್ರಿಯ ಊಟಕ್ಕಾಗಿಯೂ ಸಹ ಸವಿಯಬಹುದು. ನಿಮಗೂ ಈ ಉಪಹಾರದ ಪಾಕವಿಧಾನವನ್ನು ತಿಳಿದುಕೊಳ್ಳಬೇಕು ಎಂಬ ಬಯಕೆಯಾದರೆ ಈ ಮುಂದೆ ನೀಡಿರುವ ವೀಡಿಯೋ ಮತ್ತು ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಿ.

to make avalakki
ಅವಲಕ್ಕಿ ರೆಸಿಪಿ| ಅವಲಕ್ಕಿ ಮಾಡುವುದು ಹೇಗೆ| ಫ್ಲಾಟ್ಟೆನ್ಡ್ ರೈಸ್ ಅವಲಕ್ಕಿ ರೆಸಿಪಿ| ಅವಲಕ್ಕಿ ರೆಸಿಪಿ| ವೆಜಿಟಬಲ್ ಅವಲಕ್ಕಿ ರೆಸಿಪಿ
ಅವಲಕ್ಕಿ ರೆಸಿಪಿ| ಅವಲಕ್ಕಿ ಮಾಡುವುದು ಹೇಗೆ| ಫ್ಲಾಟ್ಟೆನ್ಡ್ ರೈಸ್ ಅವಲಕ್ಕಿ ರೆಸಿಪಿ| ಅವಲಕ್ಕಿ ರೆಸಿಪಿ| ವೆಜಿಟಬಲ್ ಅವಲಕ್ಕಿ ರೆಸಿಪಿ
Prep Time
15 Mins
Cook Time
10M
Total Time
25 Mins

Recipe By: ಕಾವ್ಯಶ್ರೀ ಎಸ್.

Recipe Type: ಪ್ರಮುಖ ತಿಂಡಿ

Serves: 2-3 ಮಂದಿಗೆ

Ingredients
  • ಎಣ್ಣೆ - 6 ಟೇಬಲ್ ಚಮಚ

    ಸಾಸಿವೆ- 3/4 ಟೀ ಚಮಚ

    ಉದ್ದಿನ ಬೇಳೆ- 3/4 ಟೀ ಚಮಚ

    ಕಡ್ಲೆ ಬೇಳೆ -3/4 ಟೀ ಚಮಚ

    ಶೇಂಗಾ - 3/4 ಟೀ ಚಮಚ

    ಹಸಿ ಮೆಣಸಿನಕಾಯಿ - 5-6

    ಕರಿಬೇವಿನ ಎಲೆ -6-8

    ಅರಿಶಿನ ಪುಡಿ -1/2 ಟೇಬಲ್ ಚಮಚ

    ಹೆಚ್ಚಿಕೊಂಡ ಈರುಳ್ಳಿ -1 ಕಪ್

    ಹೆಚ್ಚಿಕೊಂಡ ಕ್ಯಾಪ್ಸಿಕಮ್ - 3/4 ಕಪ್

    ಹೆಚ್ಚಿಕೊಂಡ ಗಜರಿ - 1 ಕಪ್

    ತೆಂಗಿನ ತುರಿ - 2 ಟೇಬಲ್ ಚಮಚ + ಅಲಂಕಾರಕ್ಕೆ

    ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು- 2 ಟೇಬಲ್ ಚಮಚ + ಅಲಂಕಾರಕ್ಕೆ

    ನಿಂಬೆ ರಸ -2 ಟೇಬಲ್ ಚಮಚ

    ಸಾಮಾನ್ಯ ದಪ್ಪದ ಅವಲಕ್ಕಿ -1 ಬೌಲ್

    ಉಪ್ಪು -1/2 ಟೀಚಮಚ + 1/2 ಟೇಬಲ್ ಚಮಚ

Red Rice Kanda Poha
How to Prepare
  • 1. ಒಂದು ದೊಡ್ಡ ಬೌಲ್‍ನಲ್ಲಿ ಅವಲಕ್ಕಿಯನ್ನು ಹಾಕಿ, ಅವಲಕ್ಕಿಯನ್ನು ಸಂಪೂರ್ಣವಾಗಿ ಮುಳುಗುವಷ್ಟು ನೀರನ್ನು ಸೇರಿಸಿ, ನೆನೆಯಲು ಬಿಡಿ.

    2. ಮಧ್ಯಮ ಪ್ರಮಾಣದಲ್ಲಿ ನೆನೆಯಬೇಕು.

    3. ನೆನೆದ ನಂತರ ಜರಡಿಯ ಸಹಾಯದಿಂದ ನೀರನ್ನು ಸಂಪೂರ್ಣವಾಗಿ ಬೇರ್ಪಡಿಸಿ.

    4. ನೆನೆದ ಅವಲಕ್ಕಿಯನ್ನು ಒಂದು ಬೌಲ್‍ಗೆ ವರ್ಗಾಯಿಸಿ.

    5. ಒಂದು ಬೌಲ್ ನೀರನ್ನು ಸೇರಿಸಿ ಪಕ್ಕಕ್ಕೆ ಇಡಿ.

    6. 10 ನಿಮಿಷಗಳ ಕಾಲ ನೆನೆಯಲು ಬಿಡಿ.

    7. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ.

    8. ಎಣ್ಣೆ ಬಿಸಿಯಾದ ನಂತರ ಸಾಸಿವೆ ಕಾಳನ್ನು ಹಾಕಿ, ಹುರಿಯಲು ಬಿಡಿ.

    9. ನಂತರ ಉದ್ದಿನ ಬೇಳೆ ಮತ್ತು ಕಡ್ಲೆ ಬೇಳೆ ಸೇರಿಸಿ.

    10. ಕರಿ ಬೇವಿನ ಎಲೆ ಮತ್ತು ಸೀಳಿಕೊಂಡ ಹಸಿ ಮೆಣಸಿನಕಾಯನ್ನು ಸೇರಿಸಿ.

    11. ನಂತರ ಅರಿಶಿನ ಪುಡಿಯನ್ನು ಸೇರಿಸಿ, ಚೆನ್ನಾಗಿ ತಿರುವಿ.

    12. ಕಡಲೆಕಾಯನ್ನು ಸೇರಿಸಿ ಚೆನ್ನಾಗಿ ತಿರುವಿ.

    13. ಕಡಲೆಕಾಯಿ ಬಣ್ಣ ಬದಲಾಗಿ ಹುರಿಯುವವರೆಗೆ 2 ನಿಮಿಷಗಳ ಕಾಲ ಬೇಯಿಸಿ.

    14. ಹೆಚ್ಚಿಕೊಂಡ ಈರುಳ್ಳಿಯನ್ನು ಸೇರಿಸಿ, ಚೆನ್ನಾಗಿ ತಿರುವಿ.

    15. ಅರ್ಧ ಟೀ ಚಮಚ ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

    16. ಹೆಚ್ಚಿಕೊಂಡ ಕ್ಯಾರೆಟ್ ಮತ್ತು ಕ್ಯಾಪ್ಸಿಕಮ್ ಸೇರಿಸಿ.

    17. 2 ನಿಮಿಷಗಳ ಕಾಲ ಬೇಯಲು ಬಿಡಿ.

    18. ನೀರನ್ನು ಬೇರ್ಪಡಿಸಿ, ಅವಲಕ್ಕಿಯನ್ನು ಸೇರಿಸಿ.

    19. ಎಲ್ಲಾ ಸಾಮಾಗ್ರಿಗಳೊಂದಿಗೆ ಸೂಕ್ತವಾಗಿ ಹೊಂದಿಕೊಳ್ಳುವಂತೆ, ಚೆನ್ನಾಗಿ ತಿರುವಿ.

    20. ಅರ್ಧ ಟೇಬಲ್ ಚಮಚ ಉಪ್ಪನ್ನು ಸೇರಿಸಿ.

    21. 2 ಟೇಬಲ್ ಚಮಚ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, 2 ಟೇಬಲ್ ಚಮಚ ತೆಂಗಿನ ತುರಿಯನ್ನು ಸೇರಿಸಿ, ಮಿಶ್ರಗೊಳಿಸಿ. ಉರಿಯನ್ನು ಆರಿಸಿ.

    22. ಉತ್ತಮ ರುಚಿ ಹಾಗೂ ಪರಿಮಳಕ್ಕಾಗಿ ನಿಂಬೆ ರಸವನ್ನು ಸೇರಿಸಿ.

    23. ನಂತರ ಒಂದು ಬೌಲ್‍ಗೆ ವರ್ಗಾಯಿಸಿ.

    24. ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

    25. ಬಿಸಿ ಇರುವಾಗಲೇ ಸವಿಯಲು ನೀಡಿ.

Instructions
  • 1. ಅಧಿಕ ಸಮಯದ ತನಕ ಅವಲಕ್ಕಿಯನ್ನು ನೆನೆಸದಿರಿ. ಅತಿಯಾಗಿ ನೆನೆದರೆ ಬಹಳ ಮೃದುವಾಗಿಬಿಡುತ್ತದೆ.
  • 2. ಅವಲಕ್ಕಿಗೆ ತರಕಾರಿಯನ್ನು ಸೇರಿಸುವುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.
  • '3. ನಿಂಬೆ ರಸ ಸೇರಿಸುವ ಮುಂಚೆ ಅವಲಕ್ಕಿ ಕೊಂಚ ತಣಿದಿರಬೇಕು.
  • 4. ಅವಲಕ್ಕಿಯನ್ನು ಒಗ್ಗರಣೆಗೆ ಸೇರಿಸುವಾಗ ಸಂಪೂರ್ಣವಾಗಿ ನೀರಿನಿಂದ ಬೇರ್ಪಟ್ಟಿರಬೇಕು.
Nutritional Information
  • ಬಡಿಸುವ ಪ್ರಮಾಣ - 1 ಬೌಲ್
  • ಕ್ಯಾಲೋರಿ - 250.2 ಕ್ಯಾಲ್
  • ಕೊಬ್ಬು - 5.6 ಗ್ರಾಂ.
  • ಪ್ರೋಟೀನ್ - 4.9 ಗ್ರಾಂ.
  • ಕಾರ್ಬೋಹೈಡ್ರೇಟ್ - 44.9 ಗ್ರಾಂ.
  • ಫೈಬರ್ - 2.4 ಗ್ರಾಂ.

ಹಂತ ಹಂತವಾದ ಚಿತ್ರವಿವರಣೆ:

1. ಒಂದು ದೊಡ್ಡ ಬೌಲ್‍ನಲ್ಲಿ ಅವಲಕ್ಕಿಯನ್ನು ಹಾಕಿ, ಅವಲಕ್ಕಿಯನ್ನು ಸಂಪೂರ್ಣವಾಗಿ ಮುಳುಗುವಷ್ಟು ನೀರನ್ನು ಸೇರಿಸಿ, ನೆನೆಯಲು ಬಿಡಿ.

to make avalakki
to make avalakki

2. ಮಧ್ಯಮ ಪ್ರಮಾಣದಲ್ಲಿ ನೆನೆಯಬೇಕು.

to make avalakki

3. ನೆನೆದ ನಂತರ ಜರಡಿಯ ಸಹಾಯದಿಂದ ನೀರನ್ನು ಸಂಪೂರ್ಣವಾಗಿ ಬೇರ್ಪಡಿಸಿ.

to make avalakki

4. ನೆನೆದ ಅವಲಕ್ಕಿಯನ್ನು ಒಂದು ಬೌಲ್‍ಗೆ ವರ್ಗಾಯಿಸಿ.

to make avalakki

5. ಒಂದು ಬೌಲ್ ನೀರನ್ನು ಸೇರಿಸಿ ಪಕ್ಕಕ್ಕೆ ಇಡಿ.

to make avalakki

6. 10 ನಿಮಿಷಗಳ ಕಾಲ ನೆನೆಯಲು ಬಿಡಿ.

to make avalakki

7. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ.

to make avalakki

8. ಎಣ್ಣೆ ಬಿಸಿಯಾದ ನಂತರ ಸಾಸಿವೆ ಕಾಳನ್ನು ಹಾಕಿ, ಹುರಿಯಲು ಬಿಡಿ.

to make avalakki

9. ನಂತರ ಉದ್ದಿನ ಬೇಳೆ ಮತ್ತು ಕಡ್ಲೆ ಬೇಳೆ ಸೇರಿಸಿ.

to make avalakki
to make avalakki

10. ಕರಿ ಬೇವಿನ ಎಲೆ ಮತ್ತು ಸೀಳಿಕೊಂಡ ಹಸಿ ಮೆಣಸಿನಕಾಯನ್ನು ಸೇರಿಸಿ.

to make avalakki
to make avalakki

11. ನಂತರ ಅರಿಶಿನ ಪುಡಿಯನ್ನು ಸೇರಿಸಿ, ಚೆನ್ನಾಗಿ ತಿರುವಿ.

to make avalakki
to make avalakki

12. ಕಡಲೆಕಾಯನ್ನು ಸೇರಿಸಿ ಚೆನ್ನಾಗಿ ತಿರುವಿ.

to make avalakki
to make avalakki

13. ಕಡಲೆಕಾಯಿ ಬಣ್ಣ ಬದಲಾಗಿ ಹುರಿಯುವವರೆಗೆ 2 ನಿಮಿಷಗಳ ಕಾಲ ಬೇಯಿಸಿ.

to make avalakki

14. ಹೆಚ್ಚಿಕೊಂಡ ಈರುಳ್ಳಿಯನ್ನು ಸೇರಿಸಿ, ಚೆನ್ನಾಗಿ ತಿರುವಿ.

to make avalakki
to make avalakki

15. ಅರ್ಧ ಟೀ ಚಮಚ ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

to make avalakki
to make avalakki

16. ಹೆಚ್ಚಿಕೊಂಡ ಕ್ಯಾರೆಟ್ ಮತ್ತು ಕ್ಯಾಪ್ಸಿಕಮ್ ಸೇರಿಸಿ.

to make avalakki
to make avalakki

17. 2 ನಿಮಿಷಗಳ ಕಾಲ ಬೇಯಲು ಬಿಡಿ.

to make avalakki

18. ನೀರನ್ನು ಬೇರ್ಪಡಿಸಿ, ಅವಲಕ್ಕಿಯನ್ನು ಸೇರಿಸಿ.

to make avalakki

19. ಎಲ್ಲಾ ಸಾಮಾಗ್ರಿಗಳೊಂದಿಗೆ ಸೂಕ್ತವಾಗಿ ಹೊಂದಿಕೊಳ್ಳುವಂತೆ, ಚೆನ್ನಾಗಿ ತಿರುವಿ.

to make avalakki

20. ಅರ್ಧ ಟೇಬಲ್ ಚಮಚ ಉಪ್ಪನ್ನು ಸೇರಿಸಿ.

to make avalakki

21. 2 ಟೇಬಲ್ ಚಮಚ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, 2 ಟೇಬಲ್ ಚಮಚ ತೆಂಗಿನ ತುರಿಯನ್ನು ಸೇರಿಸಿ, ಮಿಶ್ರಗೊಳಿಸಿ. ಉರಿಯನ್ನು ಆರಿಸಿ.

to make avalakki
to make avalakki

22. ಉತ್ತಮ ರುಚಿ ಹಾಗೂ ಪರಿಮಳಕ್ಕಾಗಿ ನಿಂಬೆ ರಸವನ್ನು ಸೇರಿಸಿ.

to make avalakki
to make avalakki

23. ನಂತರ ಒಂದು ಬೌಲ್‍ಗೆ ವರ್ಗಾಯಿಸಿ.

to make avalakki

24. ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

to make avalakki
to make avalakki

25. ಬಿಸಿ ಇರುವಾಗಲೇ ಸವಿಯಲು ನೀಡಿ.

to make avalakki
to make avalakki
[ 5 of 5 - 100 Users]
Story first published: Monday, January 29, 2018, 12:25 [IST]
X
Desktop Bottom Promotion