For Quick Alerts
ALLOW NOTIFICATIONS  
For Daily Alerts

ಸ್ವಾದದ ಘಮಲನ್ನು ಹೆಚ್ಚಿಸುವ ಪನ್ನೀರ್ ಕ್ಯಾಪ್ಸಿಕಂ ಭುರ್ಜಿ ರೆಸಿಪಿ

|

ಭಾರತದಲ್ಲಿ ಅತ್ಯಂತ ಇಷ್ಟಪಡುವ ಕೆಲವೊಂದು ಆಹಾರ ಪದಾರ್ಥಗಳಲ್ಲಿ ಚೀಸ್ ಅಥವಾ ಪನ್ನೀರ್ ಸಹ ಒಂದು. ಉತ್ತರ ಭಾರತದಲ್ಲಿ ಪ್ರತಿದಿನದ ಆಹಾರ ಪದಾರ್ಥಗಳಲ್ಲಿ ಪನ್ನೀರನ್ನು ಬಳಸುತ್ತಾರೆ. ಪನ್ನೀರು ಭುರ್ಜಿಯು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಮಾಡುವ ಮತ್ತು ಸುಲಭವಾಗಿ ತಯಾರಿಸಬಹುದಾದ ಖಾದ್ಯವಾಗಿದೆ. ಆದರೆ ಬೋಲ್ಡ್ ಸ್ಕೈ ಇಂದು ವಿಶೇಷವಾದ ರೆಸಿಪಿಯನ್ನು ನಿಮ್ಮ ಮುಂದೆ ತಂದಿದೆ ಅದುವೇ ಪನ್ನೀರ್ ಕ್ಯಾಪ್ಸಿಕಂ ಭುರ್ಜಿ ರೆಸಿಪಿ. ಈ ಖಾದ್ಯಕ್ಕೆ ನಾವು ಕ್ಯಾಪ್ಸಿಕಂ ಸಹ ಬಳಸಿರುವುದರಿಂದ, ಇದು ಮತ್ತಷ್ಟು ರುಚಿಕರ ಮತ್ತು ಆರೋಗ್ಯಕರವಾಗುತ್ತದೆ.

ಇದಕ್ಕೂ ಮೇಲಾಗಿ ಈ ಅವಧಿಯಲ್ಲಿ ಕ್ಯಾಪ್ಸಿಕಂ ಬೆಳೆ ಬರುವ ಕಾರಣ ನೀವು ಅದನ್ನು ಸುಲಭವಾಗಿ ಅಂಗಡಿಯಲ್ಲಿ ಖರೀದಿಸಿ ಈ ರುಚಿಕರವಾದ ಖಾದ್ಯವನ್ನು ತಯಾರಿಸಿಕೊಳ್ಳಬಹುದು. ಬನ್ನಿ ಪನ್ನೀರ್ ಕ್ಯಾಪ್ಸಿಕಂ ಭುರ್ಜಿ ರೆಸಿಪಿಯನ್ನು ತಯಾರಿಸುವುದು ಹೇಗೆಂದು ಒಂದು ಸಲ ನೋಡಿಕೊಂಡು ಬರೋಣ.

Quick & Easy Paneer Capsicum Bhurji Recipe

*ಮೂರು ಜನಕ್ಕೆ ಬಡಿಸಬಹುದು.
*ತಯಾರಿಕೆಗೆ ತಗುಲುವ ಸಮಯ: 10 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 20 ನಿಮಿಷಗಳು

ಸ್ವಾದದ ಘಮಲನ್ನು ಹೆಚ್ಚಿಸುವ ಕ್ಯಾಪ್ಸಿಕಂ ಬಾತ್

ಅಗತ್ಯವಾದ ಪದಾರ್ಥಗಳು
*ಪನ್ನೀರ್- 200 ಗ್ರಾಂ (ಪುಡಿ ಮಾಡಿದಂತಹುದು)
*ಕ್ಯಾಪ್ಸಿಕಂ- 2 (ಸಣ್ಣಗೆ ಕತ್ತರಿಸಿದಂತಹುದು)
ಟೊಮೇಟೊ- 2 (ಸಣ್ಣಗೆ ಕತ್ತರಿಸಿದಂತಹುದು)
*ಈರುಳ್ಳಿ- 1 (ಸಣ್ಣಗೆ ಕತ್ತರಿಸಿದಂತಹುದು)
*ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಟೀ.ಚಮಚ
*ಹಸಿ ಮೆಣಸಿನ ಕಾಯಿ- 2 (ಉದ್ದಕ್ಕೆ ಕತ್ತರಿಸಿದಂತಹುದು)
*ಜೀರಿಗೆ ಪುಡಿ - 1 ಟೀ.ಚಮಚ

*ಅರಿಶಿನ ಪುಡಿ - 1/2 ಟೀ.ಚಮಚ
*ಖಾರದ ಪುಡಿ - 1 ಟೀ.ಚಮಚ
*ಚಾಟ್ ಮಸಾಲ - 1 ಟೀ.ಚಮಚ
*ಜೀರಿಗೆ - 1 ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ಕೊತ್ತಂಬರಿ ಸೊಪ್ಪು - 2-3 ಟೀ.ಚಮಚ (ಸಣ್ಣಗೆ ಕತ್ತರಿಸಿದಂತಹುದು)
*ಎಣ್ಣೆ - 2 ಟೀ.ಚಮಚ

ತಯಾರಿಸುವ ವಿಧಾನ
1. ಮೊದಲು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ. ಅದಕ್ಕೆ ಜೀರಿಗೆಯನ್ನು ಹಾಕಿ. ಒಗ್ಗರೆಣ್ಣೆ ರೀತಿ ಮಾಡಿಕೊಳ್ಳಿ.
2. ನಂತರ ಅದಕ್ಕೆ ಈರುಳ್ಳಿಯನ್ನು ಹಾಕಿ ಹೊಂಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.
3. ಇನ್ನು ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಖಾರದ ಪುಡಿ, ಜೀರಿಗೆ ಪುಡಿಗಳನ್ನು ಹಾಕಿ ಮತ್ತು 3-4 ನಿಮಿಷಗಳ ಕಾಲ ಬೇಯಿಸಿ.
4. ನಂತರ ಟೊಮೇಟೊ, ಕ್ಯಾಪ್ಸಿಕಂ ಮತ್ತು ಉಪ್ಪನ್ನು ಹಾಕಿ.
5. ತದನಂತರ ಇದಕ್ಕೆ ಚಾಟ್ ಮಸಾಲ ಮತ್ತು ಪುಡಿ ಮಾಡಿದ ಪನ್ನೀರ್ ಹಾಕಿ. 4-5 ನಿಮಿಷಗಳ ಕಾಲ ಬೇಯಿಸಿ. ಅಗತ್ಯವಾದರೆ ಸ್ವಲ್ಪ ನೀರನ್ನು ಹಾಕಿ.
6. ಹೀಗೆ 4-5 ನಿಮಿಷ ಬೇಯಿಸಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ. ಇದೆಲ್ಲ ಮುಗಿದ ಮೇಲೆ ಉರಿಯನ್ನು ಆರಿಸಿ.
ಈಗ ನಿಮ್ಮ ಮುಂದೆ ಪನ್ನೀರ್ ಕ್ಯಾಪ್ಸಿಕಂ ಭುರ್ಜಿ ಖಾದ್ಯ ತಯಾರಾಗಿದೆ. ಇದನ್ನು ಪರೋಟ ಮತ್ತು ರೋಟಿಯ ಜೊತೆಗೆ ಬಡಿಸಿ.

ಪೋಷಕಾಂಶದ ಪ್ರಮಾಣ
ಈ ರೆಸಿಪಿಯಲ್ಲಿ ಪ್ರೋಟೀನ್ ಅಧಿಕವಾಗಿರುತ್ತವೆ. ಜೊತೆಗೆ ಶೇ. 25 ರಷ್ಟು ಕೊಬ್ಬು ಇರುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವರು ಇದನ್ನು ಸೇವಿಸದೆ ಇದ್ದರೆ ಉತ್ತಮ. ಇದರಲ್ಲಿರುವ ಅಧಿಕ ಪ್ರಮಾಣದ ಸ್ಯಾಚುರೇಟೇಡ್ ಕೊಬ್ಬು ಅವರ ದೇಹಕ್ಕೆ ಒಳ್ಳೆಯದಲ್ಲ.

ಸಲಹೆ
ತೂಕ ಇಳಿಸಿಕೊಳ್ಳಲು ಶ್ರಮಿಸುತ್ತಿರುವವರು ಈ ರೆಸಿಪಿಗೆ ಪನ್ನೀರ್ ಬದಲಿಗೆ ಟೊಫುವನ್ನು ಬಳಸಬಹುದು. ಏಕೆಂದರೆ ಇದು ನಾವು ಸೇವಿಸುವ ಕೊಬ್ಬನ್ನು ಕಡಿಮೆ ಮಾಡುತ್ತದೆ.

English summary

Quick & Easy Paneer Capsicum Bhurji Recipe

One of the most loved ingredients in India is dishes made out of cottage cheese or paneer. In Northern parts of India, it is not uncommon to find paneer as an ingredient in at least one dish in a day. Take a look at this quick and easy paneer capsicum bhurji recipe and do give it a try this evening.
X
Desktop Bottom Promotion