For Quick Alerts
ALLOW NOTIFICATIONS  
For Daily Alerts

ಊಟದ ಸವಿಯನ್ನು ಹೆಚ್ಚಿಸುವ ರುಚಿಕರ ಆಲೂಗಡ್ಡೆ ಬೀನ್ಸ್ ಪಲ್ಯ

|

ಬಿಡುವಿಲ್ಲದ ಸಮಯದಲ್ಲಿ ಅಡಿಗೆ ಕೆಲಸವನ್ನು ನಾವು ಸಾಧ್ಯವಾದಷ್ಟು ಬೇಗನೇ ಮುಗಿಸುವ ಆತುರದಲ್ಲಿರುತ್ತೇವೆ. ಆರೋಗ್ಯಯುತವಾದ ರುಚಿಕರವಾದ ತಿಂಡಿ ಅಥವಾ ಪಲ್ಯವನ್ನು ತಯಾರಿಸಿಕೊಳ್ಳುವುದು ಗೃಹಿಣಿಯರಿಗೆ ನಿಜಕ್ಕೂ ಸವಾಲಿನ ಕೆಲಸವೇ. ಮನೆಯಲ್ಲೇ ಇರುವ ಮಹಿಳೆ ಆಗಿರಬಹುದು ಅಥವಾ ಹೊರಗೆ ದುಡಿಯುವವರೇ ಆಗಿರಬಹುದು ಇಬ್ಬರಿಗೂ ಬೆಳಗಿನ ತಿಂಡಿ ಅಥವಾ ಮಧ್ಯಾಹ್ನದ ಊಟಕ್ಕೆ ಕೊಂಡೊಯ್ಯುವ ಪಲ್ಯವನ್ನು ಚಕ ಚಕನೇ ಮಾಡಿ ಮುಗಿಸುವುದೆಂದರೆ ತುಸು ಕಷ್ಟದ ಕೆಲಸವಾಗುತ್ತದೆ.

ನಿಮ್ಮ ಕಷ್ಟವನ್ನು ನಿವಾರಿಸಲು ಮತ್ತು ಆರೋಗ್ಯಪೂರ್ಣ ಹಾಗೂ ರುಚಿಕರ ಪಲ್ಯದ ಸವಿಯನ್ನು ನಿಮ್ಮ ಮನೆಮಂದಿಗೆ ಬಡಿಸುವ ನಿಮ್ಮ ಇಚ್ಛೆಯನ್ನು ಈಡೇರಿಸಲೆಂದೇ ಇಂದಿನ ಲೇಖನದಲ್ಲಿ ಅತಿ ರುಚಿಕರ ಆಲೂಗಡ್ಡೆ ಮತ್ತು ಬೀನ್ಸ್ ಪಲ್ಯದೊಂದಿಗೆ ನಾವು ಬಂದಿದ್ದೇವೆ. ನಿಜಕ್ಕೂ ಅಮೂಲಾಗ್ರ ರುಚಿಯನ್ನು ನೀಡುವ ಮತ್ತು ಸುಲಭವಾಗಿ ತಯಾರಿಸಬಹುದಾದ ಈ ಪಲ್ಯ ನಿಮ್ಮ ಮನೆಯವರಿಗೂ ಅಚ್ಚುಮೆಚ್ಚಿನದಾಗುವುದು ಖಂಡಿತ.

Quick Aloo Beans Sabzi For Working People

ಬರಿಯ ಆಲೂಗಡ್ಡೆ ಮತ್ತು ಬೀನ್ಸ್ ಅಲ್ಲದೆ ಇತರ ರುಚಿಕರ ಪರಿಕರಗಳನ್ನು ಸೇರಿಸಿ ಈ ಪಲ್ಯವನ್ನು ತಯಾರಿಸಬಹುದಾಗಿದ್ದು ನಿಜಕ್ಕೂ ಇದು ನಿಮ್ಮಲ್ಲಿ ತಿನ್ನುವ ತುಡಿತವನ್ನು ಹೆಚ್ಚಿಸುತ್ತದೆ. ಹಾಗಿದ್ದರೆ ತಡ ಮಾಡದೇ ಇಲ್ಲಿ ನಾವು ನೀಡಿರುವ ಅತೀ ಸರಳ ಪಲ್ಯದ ವಿಧಾನವನ್ನು ಅರಿತುಕೊಂಡು ಇದನ್ನು ತಯಾರಿಸಿಕೊಳ್ಳಿ.

ಸೊಪ್ಪಿನ ಪಲ್ಯ-ಬ್ಯಾಚುಲರ್ ರೆಸಿಪಿ

ಪ್ರಮಾಣ: 2
*ಸಿದ್ಧತಾ ಸಮಯ: 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು
*ಆಲೂಗಡ್ಡೆ - 4 (ಬೇಯಿಸಿದ್ದು)
*ಹಸಿರು ಬೀನ್ಸ್ - 7-8 (ಕತ್ತರಿಸಿ ಬೇಯಿಸಿದ್ದು
*ಈರುಳ್ಳಿ - 1 (ಹೆಚ್ಚಿದ್ದು)
*ಬೆಳ್ಳುಳ್ಳಿ ಪೇಸ್ಟ್ - 1 ಚಮಚ
*ಅರಶಿನ ಹುಡಿ - 1 ಚಮಚ
*ಮೆಣಸಿನ ಹುಡಿ - 1 ಚಮಚ
*ಜೀರಿಗೆ ಹುಡಿ - 1 ಚಮಚ
*ಚಾಟ್ ಮಸಾಲಾ - 1 ಚಮಚ
*ಮೆಂತೆ ಬೀಜ - 1 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 1 ಚಮಚ

ಮಾಡುವ ವಿಧಾನ
1. ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ ಮತ್ತು ಇದಕ್ಕೆ ಮೆಂತೆಯನ್ನು ಹಾಕಿ ಅದನ್ನು ಸಿಡಿಯಲು ಬಿಡಿ
2. ನಂತರ ಹೆಚ್ಚಿಟ್ಟ ಈರುಳ್ಳಿಯನ್ನು ಎಣ್ಣೆಗೆ ಹಾಕಿ 2-3 ನಿಮಿಷಗಳ ಕಾಲ ಹುರಿದುಕೊಳ್ಳಿ
3. ಇನ್ನು ಇದಕ್ಕೆ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ
4. ತದನಂತರ ಅರಶಿನ ಹುಡಿ, ಮೆಣಸಿನ ಹುಡಿ, ಚಾಟ್ ಮಸಾಲಾ, ಜೀರಿಗೆ ಹುಡಿ ಹಾಕಿ ಇದನ್ನು 2-3 ನಿಮಿಷಗಳ ಹುರಿದುಕೊಳ್ಳಿ
5. ಇಷ್ಟೆಲ್ಲಾ ಆದನಂತರ ಬೇಯಿಸಿದ ಆಲೂಗಡ್ಡೆ ಮತ್ತು ಬೀನ್ಸ್ ಅನ್ನು ಸೇರಿಸಿಕೊಳ್ಳಿ 4-5 ನಿಮಿಷಗಳ ಕಾಲ ಇದನ್ನು ಬೇಯಿಸಿಕೊಳ್ಳಿ
೬. ಉಪ್ಪು ಹಾಕಿ ಒಗ್ಗರಣೆಯನ್ನು ಪರಿಶೀಲಿಸಿಕೊಳ್ಳಿ
೭. ಪೂರ್ತಿ ಆದ ನಂತರ ಗ್ಯಾಸ್ ಆಫ್ ಮಾಡಿಕೊಳ್ಳಿ

ಆಲೂ ಬೀನ್ಸ್ ಪಲ್ಯ ಸಿದ್ಧವಾಗಿದೆ. ಈ ಪಲ್ಯವನ್ನು ರೋಟಿ ಮತ್ತು ಚಪಾತಿಯೊಂದಿಗೆ ಸವಿಯಲು ನೀಡಿ.

English summary

Quick Aloo Beans Sabzi For Working People

Being a working individual has its own constrictions. Work takes most part of the day and by the time you get back from office there is no energy left to cook something complicated. At such times you need recipes which can get ready in a few minutes.
Story first published: Tuesday, September 16, 2014, 13:02 [IST]
X
Desktop Bottom Promotion