For Quick Alerts
ALLOW NOTIFICATIONS  
For Daily Alerts

ಶಿವರಾತ್ರಿ ವೃತಕ್ಕಾಗಿ ಆಲೂಗಡ್ಡೆ ರೆಸಿಪಿ

|

ಮಹಾಶಿವರಾತ್ರಿಗೆ ಇನ್ನು ಕೇವಲ ದಿನಗಳು ಮಾತ್ರ ಬಾಕಿ ಉಳಿದಿದೆ. ಶಿವ ದೇವರನ್ನು ಮನೆಗೆ ಆಹ್ವಾನಿಸಲು ನಾವೆಲ್ಲಾ ಸಂಭ್ರಮಿಸುವವ ಕಾಲ ಬಂದೊದಗಿದೆ. ವೃತಾಧಾರಿಗಳು ಶಿವರಾತ್ರಿಯಂದು ಕೈಗೊಳ್ಳುವ ಉಪಾಸ ಮಹತ್ವಪೂರ್ಣವಾಗಿರುತ್ತದೆ. ಆದರೆ ಆಹಾರಗಳನ್ನು ತೆಗೆದುಕೊಳ್ಳದೇ ವೃತವನ್ನು ಆಚರಿಸುವುದು ಪೌಷ್ಟಿಕಾಂಶ ಕೊರತೆಗೆ ಕಾರಣವಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವರಾತ್ರಿಗಾಗಿ ಗುಜರಾತಿ ಸ್ಪೆಶಲ್ ಸೇವ್ ಟೊಮೇಟೊ ಪಲ್ಯ

ಲಘು ಆಹಾರವನ್ನು ತೆಗೆದುಕೊಳ್ಳುವುದು ವೃತಾಧಾರಿಗೆ ಅನುಮತಿಸಲಾಗಿದೆ. ಶಿವರಾತ್ರಿಯಂದು ವೃತವನ್ನು ಪೂರ್ಣಗೊಳಿಸಲು ದೇವರಿಗೆ ಪ್ರಸಾದ ರೂಪವಾಗಿ ಅರ್ಪಿಸಿದ ಆಹಾರವನ್ನು ತೆಗೆದುಕೊಳ್ಳುವುದು ವಾಡಿಕೆ. ಅದಕ್ಕಾಗಿ ನಾವಿಂದು ಪೋಷಕಾಂಶ ಭರಿತ ಆಹಾರ ಪದಾರ್ಥವಾದ ಆಲೂಗಡ್ಡೆ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಆಲೂಗಡ್ಡೆ ಪ್ರತಿಯೊಂದು ಖಾದ್ಯಕ್ಕೂ ಉತ್ತಮ ರುಚಿಯನ್ನು ಒದಗಿಸುತ್ತದೆ. ಆದರೆ ಶಿವರಾತ್ರಿಯು ಅಡುಗೆಯು ಈರುಳ್ಳಿ ಮತ್ತು ಬೆಳ್ಳುಳ್ಳಿ ರಹಿತವಾಗಿರಬೇಕು ಎಂಬ ಅಂಶ ಗಮನದಲ್ಲಿರಬೇಕು. ಆಲೂಗಡ್ಡೆಯನ್ನು ಈ ಸಾಮಾಗ್ರಿಗಳನ್ನು ಬಳಸದೇ ತಯಾರಿಸುವುದು ವೃತಕ್ಕೆ ಅಡ್ಡಿಯನ್ನು ಉಂಟುಮಾಡುವುದಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವರಾತ್ರಿಗಾಗಿ ಬಾಯಲ್ಲಿ ನೀರೂರಿಸುವ ವಿಶೇಷ ಸಿಹಿತಿಂಡಿಗಳು

ಹಾಗಿದ್ದರೆ ತಡವೇಕೆ, ಆಲೂಗಡ್ಡೆಯ ವೈವಿಧ್ಯಮಯ ಖಾದ್ಯಗಳನ್ನು ಪ್ರಯತ್ನಿಸೋಣ.

1.ಆಲೂಗಡ್ಡೆ ಪಲ್ಯ

1.ಆಲೂಗಡ್ಡೆ ಪಲ್ಯ

ಆಲೂಗಡ್ಡೆ ಪಲ್ಯ ವೃತಕ್ಕೆ ಹೇಳಿ ಮಾಡಿಸಿದ ಡಿಶ್ ಆಗಿದೆ. ಇದನ್ನು ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಬಳಸದೇ ಮಾಡಿ.

2.ಆಲೂಗಡ್ಡೆ ಫ್ರೈ

2.ಆಲೂಗಡ್ಡೆ ಫ್ರೈ

ವೃತಾಧಾರಿಯು ಕಡಿಮೆ ಆಹಾರವನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಆಲೂಗಡ್ಡೆ, ಹಣ್ಣುಗಳು, ಜ್ಯೂಸ್ ಅನ್ನು ಸೇವಿಸುವುದು ಉತ್ತಮ. ಈ ಸಮಯದಲ್ಲಿ ಆಲೂಗಡ್ಡೆ ಫ್ರೈಯನ್ನು ಸೇವಿಸುವುದು ಒಳಿತು.

<a href=3.ಆಲೂ ಟಮಾಟರ್ ಪಲ್ಯ" title="3.ಆಲೂ ಟಮಾಟರ್ ಪಲ್ಯ" class="sliderImg image_listical" width="600" height="338" loading="lazy"/>

3.ಆಲೂ ಟಮಾಟರ್ ಪಲ್ಯ

ಈ ಸರಳವಾದ ರೆಸಿಪಿಯನ್ನು ನಿಮಗೆ 30 ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಆಲೂಗಡ್ಡೆಯನ್ನು ಬೇಯಿಸಿ ಟೊಮೇಟೋದೊಂದಿಗೆ ಮಿಶ್ರಮಾಡಿ ಈ ರೆಸಿಪಿಯನ್ನು ತಯಾರಿಸಬಹುದು. ಕಲ್ಲುಪ್ಪನ್ನು ಬಳಸಿ ಈ ಅಡುಗೆಯನ್ನು ಇನ್ನಷ್ಟು ರುಚಿಕರವಾಗಿಸಿ.

<a href=4.ಆಲೂ ಮೆಂತೆ ಪಲ್ಯ " title="4.ಆಲೂ ಮೆಂತೆ ಪಲ್ಯ " class="sliderImg image_listical" width="600" height="338" loading="lazy"/>

4.ಆಲೂ ಮೆಂತೆ ಪಲ್ಯ

ಮೆಂತೆ ಸೊಪ್ಪನ್ನು ಕೂಡ ಆಲೂಗಡ್ಡೆಯೊಂದಿಗೆ ಮಿಶ್ರ ಮಾಡಿಕೊಂಡು ರೆಸಿಪಿಯನ್ನು ತಯಾರಿಸಬಹುದು. ತಾಜಾ ಮೆಂತೆ ಸೊಪ್ಪು ಮತ್ತು ಬೇಬಿ ಆಲೂಗಡ್ಡೆಯನ್ನು ಬಳಸಿ ಈ ರುಚಿಕರ ಪಲ್ಯವನ್ನು ತಯಾರಿಸಬಹುದು. ಇದು ಆರೋಗ್ಯಕರ ಮತ್ತು ವೃತಾಧಾರಿಗೆ ಉತ್ತಮ ಪೋಷಕಾಂಶ ಒದಗಿಸುತ್ತದೆ.

5.ಆಲೂಗಡ್ಡೆ ಹಲ್ವ

5.ಆಲೂಗಡ್ಡೆ ಹಲ್ವ

ಊಟವನ್ನು ಸಂಪೂರ್ಣಗೊಳಿಸಲು ಸಿಹಿತಿಂಡಿ ಅತ್ಯವಶ್ಯಕ. ಅದಕ್ಕಾಗಿ ಆಲೂಗಡ್ಡೆ ಸಿಹಿಯನ್ನು ಈ ಶಿವರಾತ್ರಿಗಾಗಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಈ ಹಲ್ವಾಕ್ಕೆ ಗೇರುಬೀಜ, ದ್ರಾಕ್ಷಿಯನ್ನು ಬಳಸಿ ಇನ್ನಷ್ಟು ಟೇಸ್ಟಿಯಾಗಿಸಬಹುದು.

6.ಹಸಿರು ಬೀನ್ಸ್ ಆಲೂಗಡ್ಡೆ

6.ಹಸಿರು ಬೀನ್ಸ್ ಆಲೂಗಡ್ಡೆ

ಈರುಳ್ಳಿ ಮತ್ತು ಬೆಳ್ಳುಳ್ಳಿ ರಹಿತವಾಗಿರುವ ಈ ಹಸಿರು ಬೀನ್ಸ್ ಆಲೂಗಡ್ಡೆ ಪಲ್ಯ ಮಾಡಲು ಅತಿ ಸರಳವಾಗಿದೆ. ರುಚಿ ಮತ್ತು ಉತ್ತಮ ಸುವಾಸನೆಯನ್ನು ಹೊಂದಿರುವ ಈ ಪಲ್ಯ ದೇಹಕ್ಕೆ ಪೋಷಕಾಂಶವನ್ನು ಒದಗಿಸುತ್ತದೆ.

7.ಚಟ್‌ಪಟೆ ಆಲೂ

7.ಚಟ್‌ಪಟೆ ಆಲೂ

ಈ ಖಾರವಾಗಿರುವ ರುಚಿಕರ ಆಲೂ ಪಲ್ಯ ಎಲ್ಲಾ ವಯಸ್ಸಿನವರಿಗೂ ಹಿತಕಾರಿ. ಇದಕ್ಕೆ ಬೆಳ್ಳುಳ್ಳಿ ಸೇರಿಸಬಾರದು ಎಂಬ ಅಂಶ ನಿಮ್ಮ ತಲೆಯಲ್ಲಿರಲಿ. ಕಲ್ಲುಪ್ಪನ್ನು ಬಳಸಿ ಈ ರೆಸಿಪಿ ತಯಾರಿಸಿ.

8.ಆಲೂ ಜೀರಾ ರೆಸಿಪಿ

8.ಆಲೂ ಜೀರಾ ರೆಸಿಪಿ

ಇದನ್ನು ಸುಲಭವಾಗಿ ತಯಾರಿಸಬಹುದು ಮತ್ತು ವೃತಕ್ಕೆ ಹೇಳಿ ಮಾಡಿಸಿದ ಡಿಶ್ ಇದಾಗಿದೆ. ನಿಮ್ಮ ಊಟಕ್ಕೆ ಪ್ರತ್ಯೇಕತೆಯನ್ನು ಇದು ಒದಗಿಸುತ್ತದೆ. ಜೀರ ಅಥವಾ ಜೀರಿಗೆಯನ್ನು ಬಳಸಿ ಈ ರೆಸಿಪಿಯನ್ನು ಸಿದ್ಧಪಡಿಸಿ.

9.ಆಲೂ ಮೊಸರು

9.ಆಲೂ ಮೊಸರು

ಈ ಆಲೂಗಡ್ಡೆ ಸಬ್ಜಿಯನ್ನು ಮೊಸರಿನೊಂದಿಗೆ ತಯಾರಿಸಲಾಗುತ್ತದೆ. ಬೇಯಿಸಿದ ಆಲೂಗಡ್ಡೆಯನ್ನು ಮೊಸರಿನೊಂದಿಗೆ ಸೇರಿಸಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ. ಇದು ರುಚಿಕರ ಮತ್ತು ಆರೋಗ್ಯಕರ.

10.ಗುಜರಾತಿ ಆಲೂ ಪಲ್ಯ

10.ಗುಜರಾತಿ ಆಲೂ ಪಲ್ಯ

ಗುಜರಾತಿಗಳು ಮೂಲತಃ ಸಸ್ಯಾಹಾರಿಗಳಾಗಿರುವುದರಿಂದ ಅಲ್ಲಿನ ಎಲ್ಲಾ ಖಾದ್ಯಗಳೂ ತರಕಾರಿಯಿಂದ ಭರಿತವಾಗಿರುತ್ತವೆ. ಸಿಹಿ ಮತ್ತು ಖಾರಯುಕ್ತವಾಗಿರುವ ಈ ಪಲ್ಯ ರುಚಿಕರ ಮತ್ತು ಸ್ವಾದಿಷ್ಟವಾಗಿರುತ್ತದೆ. ಮೊಸರು ಮತ್ತು ಇತರ ಖಾರದ ಪದಾರ್ಥಗಳನ್ನು ಸೇರಿಸಿ ಈ ಪಲ್ಯವನ್ನು ತಯಾರಿಸುತ್ತಾರೆ.

English summary

Potato Recipes For Shivratri Vrat

Maha Shivratri is just 2 days away and we need to gear up to welcome Lord Shiva into our homes. Devotees are expected to fast on Shivratri but then Indians are incurable foodies. We cannot help but feast even after a fast.&#13;
Story first published: Wednesday, February 26, 2014, 11:36 [IST]
X
Desktop Bottom Promotion