For Quick Alerts
ALLOW NOTIFICATIONS  
For Daily Alerts

ಹೊಟ್ಟೆಗೆ ತಂಪು ತರಿಸುವ ಬಾಳೆಕಾಯಿ ಮೊಸರು ರಾಯಿತ

|

ರುಚಿಯಾದ ಅಡುಗೆ ಕಣ್ಮುಂದೆ ಇದ್ದರೆ ಊಟ ಮಾಡುವವರ ಮನಸ್ಸು ಹೊಟ್ಟೆ ಸದಾ ತುಂಬಿರುತ್ತದೆ. ಮೃಷ್ಟಾನ್ನ ಭೋಜನ ಕೂಡ ರುಚಿಯಲ್ಲಿ ತನ್ನ ಮಹತ್ವವನ್ನು ಕಳೆದುಕೊಂಡಿದ್ದರೆ ಅದು ಸಪ್ಪೆಯಾಗುತ್ತದೆ ಮತ್ತು ಹೊಟ್ಟೆ ತುಂಬಿದರೂ ಮನಸ್ಸು ಇದರಿಂದ ತುಂಬುವುದಿಲ್ಲ.

ಭಾರತೀಯ ಖಾದ್ಯ ತಯಾರಿಯು ಈ ರುಚಿ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಆಹಾರ ತಯಾರಿಗಳ ಕಾರ್ಯವನ್ನು ಮಾಡುತ್ತವೆ. ಆದ್ದರಿಂದಲೇ ನಮ್ಮಲ್ಲಿನ ತಿಂಡಿ ತಿನಿಸುಗಳು ಹೊರ ದೇಶದಲ್ಲೂ ಮಾನ್ಯತೆಯನ್ನು ಪಡೆಯುತ್ತಿರುವುದು. ಸಣ್ಣ ಹೋಟೆಲ್‌ಗಳಿಂದ ಹಿಡಿದು ಮೂರಂತಸ್ತಿನ ಹೋಟೆಲ್‌ಗಳೂ ಕೂಡ ರುಚಿ ಎಂಬ ಮಂತ್ರವನ್ನು ಅಡಿಪಾಯವನ್ನಾಗಿಸಿಕೊಂಡು ಭಕ್ಷ್ಯಗಳನ್ನು ತಯಾರಿಸುತ್ತವೆ.

Mouthwatering Tasty Banana Raita Recipe

ಇನ್ನು ನಮ್ಮಲ್ಲಿ ತಯಾರಾಗುವ ಹಳ್ಳಿ ತಿಂಡಿಗಳಿಗೂ ಹೆಚ್ಚಿನ ಬೇಡಿಕೆಯಿದೆ. ಹಿತ್ತಲಿನಲ್ಲಿ ಬೆಳೆಯುವ ಆಹಾರ ಪದಾರ್ಥಗಳು ಪೋಷಕಾಂಶದೊಂದಿಗೆ ಹೇರಳವಾಗಿರುವುದರ ಮೂಲಕ ರುಚಿಯ ಅಮೂಲಾಗ್ರ ಶ್ರೀಮಂತಿಕೆಯನ್ನು ಉಣಬಡಿಸುತ್ತವೆ.

ಇಂದಿನ ಲೇಖನದಲ್ಲಿ ಕೂಡ ಹಿತ್ತಲಿನ ತರಕಾರಿಯಾದ ಬಾಳೆಕಾಯಿಯ ಮೊಸರು ಬಜ್ಜಿ ಅಥವಾ ರಾಯಿತ ಪಾಕ ವಿಧಾನದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ನಾರಿನಂಶದಿಂದ ಸಮೃದ್ಧವಾಗಿರುವ ಬಾಳೆಕಾಯಿ ನಿಮ್ಮ ಹೊಟ್ಟೆಗೂ ನಾಲಿಗೆಗೂ ಹಿತಕಾರಿಯಾಗಿರುವಂಥದ್ದು.

ತೆಳ್ಳಗೆ-ಬೆಳ್ಳಗಿನ ನೀರು ದೋಸೆ

ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು
*ಬಾಳೆಕಾಯಿ -2
*ಹಸಿಮೆಣಸು - 2-3
*ಕೊತ್ತಂಬರಿ ಸೊಪ್ಪು - 3-4
*ಮೊಸರು - 2 ಕಪ್
*ತುರಿದ ತೆಂಗಿನಕಾಯಿ - 2-3 ಚಮಚ
*ಉಪ್ಪು- ರುಚಿಗೆ ತಕ್ಕಷ್ಟು
*ಸಾಸಿವೆ - 1 ಚಮಚ
*ಜೀರಿಗೆ - 1/2 ಚಮಚ
*ಸ್ವಲ್ಪ ಇಂಗಿನ ಪುಡಿ
*ಕರಿಬೇವಿನೆಲೆ - 5-6
*ಕೆಂಪು ಮೆಣಸು - 1-2
*ಎಣ್ಣೆ - 1 ಚಮಚ

ಮಾಡುವ ವಿಧಾನ
*ಉಪ್ಪು ಮತ್ತು ಸಾಕಷ್ಟು ನೀರು ಹಾಕಿ ಕುಕ್ಕರ್‌ನಲ್ಲಿ ಬಾಳೆಕಾಯಿಯನ್ನು ಬೇಯಿಸಿಕೊಳ್ಳಿ.
*ಕುಕ್ಕರ್ ತಣ್ಣಗಾದ ನಂತರ, ಬೇಯಿಸಿದ ಬಾಳೆಕಾಯಿಯ ಸಿಪ್ಪೆಯನ್ನು ತೆಗೆಯಿರಿ. ನಂತರ ಚೆನ್ನಾಗಿ ಅದನ್ನು ಹಿಸುಕಿಕೊಳ್ಳಿ. ತೆಂಗಿನ ತುರಿಯನ್ನು ನುಣ್ಣಗೆ ಪೇಸ್ಟ್‌ನಂತೆ ರುಬ್ಬಿಕೊಳ್ಳಿ. ತದನಂತರ ಹಸಿಮೆಣಸನ್ನು ಮತ್ತು ಕರಿಬೇವಿನೆಲೆಯನ್ನು ಜೊತೆಯಾಗಿ ರುಬ್ಬಿಕೊಳ್ಳಿ.
*ಇನ್ನು ಈ ಮಿಶ್ರಣಕ್ಕೆ ಮೊಸರನ್ನು ಸೇರಿಸಿ
*ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾದೊಡನೆ ಸಾಸಿವೆ, ಜೀರಿಗೆ, ಕೆಂಪು ಮೆಣಸನ್ನು ಹಾಕಿ ಒಗ್ಗರಣೆ ತಯಾರು ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಇಂಗಿನ ಪುಡಿ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಒಗ್ಗರಣೆ ಮಾಡಿ ಚೆನ್ನಾಗಿ ಮಿಶ್ರ ಮಾಡಿ.

English summary

Mouthwatering Tasty Banana Raita Recipe

Banana raita, this delectable raita will transform any preconceived notions you have about the banana, and make you fall instantly in love with. It is rich in potassium that will benefit hypertensive people wanting to loss weight so try out this Banana raita recipe
Story first published: Tuesday, August 12, 2014, 15:22 [IST]
X
Desktop Bottom Promotion