For Quick Alerts
ALLOW NOTIFICATIONS  
For Daily Alerts

ರಂಜಾನ್‌ ಸ್ಪೆಷಲ್: ನಿಮಿಷಾರ್ಧದಲ್ಲಿ ರುಚಿಕಟ್ಟಾದ ಸಲಾಡ್...

By Deepak M
|

ರಂಜಾನ್ ತಿಂಗಳು ನಡೆಯುತ್ತಿದೆ. ರಂಜಾನ್ ಉಪವಾಸ ಮಾಡುತ್ತಿದ್ದಾಗ ಸರಿಯಾದ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ಈಗ ದಿನಕ್ಕೆ ಎರಡೇ ಹೊತ್ತು ಊಟ ಮಾಡುವ ವ್ರತವಿರುವುದರಿಂದಾಗಿ, ಆರೋಗ್ಯಕರವಾದ ಆಹಾರವನ್ನೆ ಸೇವಿಸುವುದು ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಈ ಸಮಯದಲ್ಲಿ ಮಾಂಸಾಹಾರಿ ತಿಂಡಿಗಳನ್ನೆ ತಯಾರಿಸಲಾಗುತ್ತದೆ. ಹಾಗಾಗಿ ಆರೋಗ್ಯದ ಕುರಿತಾಗಿ ಕಾಳಜಿ ಹೆಚ್ಚು ವಹಿಸಬೇಕಾಗುತ್ತದೆ.

ರಂಜಾನ್‌ಗಾಗಿಯೇ ಒಂದು ವಿಶೇಷವಾದ ಸಲಾಡ್ ಇದೆ. ಅದು ನಿಮ್ಮನ್ನು ಆರೋಗ್ಯಕರವಾಗಿಯೂ ಮತ್ತು ಸದೃಢವಾಗಿಯೂ ಇರಿಸುತ್ತದೆ. ಯಾವುದು ಅದು ಎಂದಿರಾ, ಅದೇ ರಂಜಾನ್ ವಿಶೇಷ ಸಲಾಡ್! ಆ ಸಲಾಡ್ ಅನ್ನು ನಿಮಿಷಗಳಲ್ಲಿ ತಯಾರಿಸಬಹುದು ಮತ್ತು ಮುಖ್ಯವಾಗಿ ಇದು ಆರೋಗ್ಯವನ್ನು ಹೆಚ್ಚಿಸುತ್ತದೆ. ಈ ಸಲಾಡ್ ಅನ್ನು ಏಕೆ ಸೇವಿಸಬೇಕು ಎಂದರೆ, ಅದರಿಂದ ನಿಮಗೆ ಉತ್ತಮ ಪೋಷಕಾಂಶಗಳು ಮತ್ತು ಆರೋಗ್ಯ ಎರಡೂ ದೊರೆಯುತ್ತದೆ. ಬನ್ನಿ ಇದನ್ನು ತಯಾರಿಸುವ ವಿಧಾನ ಹೇಗೆ ಎಂದು ತಿಳಿದುಕೊಳ್ಳೋಣ. ಸರಳ ಮತ್ತು ಆರೋಗ್ಯಪೂರ್ಣ ಸಲಾಡ್ ರೆಸಿಪಿ

*ಪ್ರಮಾಣ: 4 ಜನರಿಗೆ ಬಡಿಸಬಹುದು
*ತಯಾರಿಸಲು ಬೇಕಾದ ಸಮಯ - 15 ನಿಮಿಷಗಳು
*ಅಡುಗೆ ಮಾಡಲು ಬೇಕಾದ ಸಮಯ - 10 ನಿಮಿಷಗಳು

Healthiest Salad Recipe For Ramzan

ಅಗತ್ಯ ಪದಾರ್ಥಗಳು
*ಕ್ಯಾರೆಟ್ - 1/2 ಕಪ್
*ಈರುಳ್ಳಿ ಹೂವು- 1/2 ಕಪ್
*ಟೊಮೆಟೊಗಳು - 1/2 ಕಪ್
*ಸೌತೆಕಾಯಿ - 1/2 ಕಪ್
*ಸ್ವೀಟ್ ಕಾರ್ನ್- 1/2 ಕಪ್
*ಕಿತ್ತಳೆ - 1/2 ಕಪ್
*ಕಲ್ಲಂಗಡಿ - 1/2 ಕಪ್
*ದ್ರಾಕ್ಷಿ - 1/2 ಕಪ್
*ಮಾವಿನ ಹಣ್ಣು - 1/2 ಕಪ್
*ಮೆಣಸು - 1/2 ಟೀಸ್ಪೂನ್
*ಲಿಂಬೆ ರಸ - 1 ಟೀಸ್ಪೂನ್
*ಜೇನು ತುಪ್ಪ - 1/2 ಟೀಸ್ಪೂನ್
*ಉಪ್ಪು ಟೊಮೆಟೋ ಸೌತೆಕಾಯಿ ಸಲಾಡ್‌

ವಿಧಾನ:
*ಒಂದು ಬಟ್ಟಲು, ಸೌತೆಕಾಯಿ, ಕ್ಯಾರೆಟ್, ಈರುಳ್ಳಿ ಹೂವು, ಸ್ವೀಟ್ ಕಾರ್ನ್ ಮತ್ತು ಸ್ವಲ್ಪ ಮೆಣಸನ್ನು ತೆಗೆದುಕೊಳ್ಳಿ.
ಇದನ್ನು ಚೆನ್ನಾಗಿ ಬೆರೆಸಿಕೊಳ್ಳಿ,
*ತದನಂತರ ಇದಕ್ಕೆ ಉಪ್ಪು ಮತ್ತು ಮೆಣಸಿನ ಜೊತೆಗೆ ಉಳಿದ ಹಣ್ಣುಗಳನ್ನು ಬೆರೆಸಿ.ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ.
*ಇನ್ನು ಲಿಂಬೆ ರಸ ಮತ್ತು ಹಣ್ಣುಗಳನ್ನು ತರಕಾರಿಗಳ ಜೊತೆಗೆ ಬೆರೆಸಿ.
*ಇದರ ಮೇಲೆ ಸ್ವಲ್ಪ ಜೇನು ತುಪ್ಪ ಹಾಕಿ ತಿನ್ನಲು ನೀಡಿ.

English summary

Healthiest Salad Recipe For Ramzan

As you fast for Ramzan, it is important to have the right kind of food too. It is important that you have healthy food during the 2 meals since you're body would require a lot of energy during the fast. Generally, non-vegetarian foods are prepared during Ramzan, so as to keep oneself healthy and active.
X
Desktop Bottom Promotion