For Quick Alerts
ALLOW NOTIFICATIONS  
For Daily Alerts

ಪೌಷ್ಟಿಕಾಂಶ ಭರಿತ ಪಿಟ್ಟು (ಖಾರಾರುಚಿ)

By Super Admin
|
3 types of dals used for Pittu
ಪಿಟ್ಟು ಒಂದು ವಿಶಿಷ್ಟ ಬಗೆಯ ಖಾರಾ ತಿನಿಸು. ಮೂರು ತರಹದ ಬೇಳೆಗಳಿಂದ ಕೂಡಿದ ಈ ಖಾದ್ಯ ವಿವಿಧ ಭಕ್ಷ್ಯಗಳೊಂದಿಗೆ ತಿನ್ನಲು ರುಚಿಯಾಗಿಯೂ ಇರುತ್ತದೆ, ಪೋಷಕಾಂಶಗಳೊಂದಿಗೂ ಕೂಡಿರುತ್ತದೆ. ಇದನ್ನು ಚಪಾತಿ, ರೊಟ್ಟಿ, ಪೂರಿ ಮುಂತಾದವುಗಳೊಂದಿಗೆ ತಿನ್ನಬಹುದು.

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು

ತೊಗರಿಬೇಳೆ - 1 ಲೋಟ
ಕಡಲೆಬೇಳೆ - 1 ಲೋಟ
ಹೆಸರುಬೇಳೆ - 1 ಲೋಟ
ತೆಂಗಿನಕಾಯಿ ತುರಿ - 2 ಚಮಚ
ನಿಂಬೆಹಣ್ಣು - 2
ಹಸಿರು ಮೆಣಸಿನಕಾಯಿ - 6ರಿಂದ 7
ಉಪ್ಪು - 1 1/2 ಚಮಚ
ಎಣ್ಣೆ - 4 ಚಮಚ

ಒಗ್ಗರಣೆಗೆ
ಗೋಡಂಬಿ - 1 ಚಮಚ
ಕಡಲೆಬೇಳೆ - 1/2 ಚಮಚ
ಕರಿಬೇವಿನಸೊಪ್ಪು - ಸ್ವಲ್ಪ

ತಯಾರಿಸುವ ವಿಧಾನ

* ಎಲ್ಲಾ ವಿಧವಾದ ಬೆಳೆಗಳನ್ನು ನೀರಿನಲ್ಲಿ ಒಂದೂವರೆಯಿಂದ ಎರಡು ಗಂಟೆಗಳ ಕಾಲ ನೆನೆಸಿಡಿ.
* ಸಣ್ಣ ರವೆಯಂತೆ ತರಿ ತರಿಯಾಗಿ ರುಬ್ಬಿಕೊಳ್ಳಿರಿ.
* ಇಡ್ಲಿಗಳಂತೆ ಹಬೆಯಲ್ಲಿ ಬೇಯಿಸಿರಿ.
* ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
* ಸ್ವಲ್ಪ ಬಿಸಿ ನೀರನ್ನು ಸಿಂಪಡಿಸಿ, ಚೆನ್ನಾಗಿ ಪುಡಿ ಮಾಡಿರಿ.
* ಎಣ್ಣೆಯನ್ನು ಬಿಸಿ ಮಾಡಿ ಒಗ್ಗರಣೆಯನ್ನು ಅರೆದ ಹಸಿರು ಮೆಣಸಿನಕಾಯಿ ಮತ್ತು ಪುಡಿ ಮಾಡಿದ ಬೇಳೆಗಳೊಂದಿಗೆ ಹಾಕಿರಿ.
* ಸುಮಾರಾದ ಉರಿಯಲ್ಲಿ ಮತ್ತೊಮ್ಮೆ ತಾಳಿಸಿರಿ.
* ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ ನಿಂಬೆರಸ ಹಿಂಡಿ, ತೆಂಗಿನಕಾಯಿ ತುರಿಯನ್ನು ಬೆರೆಸಿರಿ.

Story first published: Tuesday, March 22, 2011, 15:00 [IST]
X
Desktop Bottom Promotion