For Quick Alerts
ALLOW NOTIFICATIONS  
For Daily Alerts

ಥಟ್ ಅಂತ ರೆಡಿಯಾಗುತ್ತೆ ಬದನೆಕಾಯಿ ಕರಿ

|
Eggplant Curry Easy Recipe
ದೋಸೆ, ಚಪಾತಿ, ಪರೋಟಗೆಂದು ವಿಭಿನ್ನ ಗೊಜ್ಜನ್ನು ಹುಡುಕುತ್ತಿದ್ದರೆ ಇಲ್ಲಿದೆ ನಿಮಗೆ ಉತ್ತಮ ಆಯ್ಕೆ. ತುಂಬಾ ಸುಲಭವಾಗಿ ಮಾಡಿ ಮುಗಿಸಬಹುದಾದ ಈ ಬದನೆಕಾಯಿ ಕರಿಯನ್ನು ಬೇಂಗನ್ ಭಾರ್ಟ ಅಂತಲೂ ಕರೆಯುತ್ತಾರೆ.

ಟೇಸ್ಟಲ್ಲಿ ಸಾಟಿಯಿಲ್ಲದ ಈ ಬದನೆಕಾಯಿ ಮಾಡುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.

ಬದನೆಕಾಯಿ ಕರಿಗೆ ಏನೇನು ಬೇಕು?: 1 ದುಂಡು ಬದನೆಕಾಯಿ, 1 ಈರುಳ್ಳಿ, 1 ಟೊಮೆಟೊ, ಚೂರು ಶುಂಠಿ, 4 ಮೆಣಸಿನಕಾಯಿ, 1 ಚಮಚ ಜೀರಿಗೆ, 1 ಚಮಚ ಜೀರಿಗೆ ಪುಡಿ, 1 ಚಮಚ ಧನಿಯಾ ಪುಡಿ, 1 ಚಮಚ ಕೆಂಪು ಮೆಣಸಿನಕಾಯಿ ಪುಡಿ, ಸ್ವಲ್ಪ ಇಂಗು, ಕೊತ್ತಂಬರಿ, ಪಲಾವ್ ಎಲೆ 1, ಎಣ್ಣೆ, ಉಪ್ಪು.

ಬದನೆಕಾಯಿ ಕರಿ ಮಾಡುವುದು ಹೇಗೆ?

* ಮೊದಲು ಬದನೆಕಾಯಿಯನ್ನು ಗ್ಯಾಸ್ ಉರಿಯಲ್ಲಿ ಎಲ್ಲ ಬದಿಯಲ್ಲೂ ಚೆನ್ನಾಗಿ ಸುಟ್ಟುಕೊಳ್ಳಬೇಕು (ಸ್ಟೀಲ್ ಕಡ್ಡಿಯನ್ನು ಚುಚ್ಚಿ ಸುಟ್ಟುಕೊಳ್ಳಬಹುದು)

* ಬದನೆಕಾಯಿ ಕಪ್ಪಗಾದಂತೆ ಕಂಡಾಗ ಒಲೆಯಿಂದ ತೆಗೆದು ತಣ್ಣಗಾಗಲು ಬಿಡಬೇಕು. ಅದು ತಣ್ಣಗಾದ ನಂತರ ಚೆನ್ನಾಗಿ ಹಿಸುಕಿ ಒಂದೆಡೆ ಇಟ್ಟುಕೊಳ್ಳಬೇಕು.

* ಈಗ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಜೀರಿಗೆ, ಪಲಾವ್ ಎಲೆ ಮತ್ತು ಇಂಗನ್ನು ಹುರಿದುಕೊಳ್ಳಬೇಕು. ನಂತರ ಈರುಳ್ಳಿ ಹಾಕಿ ಕೆಂಪಗಾಗುವ ತನಕ ಹುರಿಯಬೇಕು.

* ಈ ಮಿಶ್ರಣಕ್ಕೆ ಶುಂಠಿ, ಹಸಿರು ಮೆಣಸಿನಕಾಯಿ ಹಾಕಿ ಚೆನ್ನಾಗಿ ತಿರುಗಿಸಿ ಟೊಮೆಟೊ ಬೆರೆಸಿ ಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. 2 ನಿಮಿಷ ಟೊಮೆಟೊ ಬೇಯಿಸಿದ ನಂತರ ಕಲೆಸಿಟ್ಟಿದ್ದ ಬದನೆಕಾಯಿಯನ್ನು ಇದಕ್ಕೆ ಬೆರೆಸಿ ಜೀರಿಗೆ ಪುಡಿ, ಧನಿಯಾ ಪುಡಿ, ಕೆಂಪುಮೆಣಸಿನ ಪುಡಿ ಬೆರೆಸಿ ಚೆನ್ನಾಗಿ ತಿರುಗಿಸಬೇಕು.

* ಈ ಮಿಶ್ರಣ ಸುಮಾರು 7 ನಿಮಿಷ ಚೆನ್ನಾಗಿ ಬೆಂದ ನಂತರ ಕೆಳಗಿಳಿಸಿ ಕತ್ತರಿಸಿದ್ದ ಕೊತ್ತಂಬರಿ ಹಾಕಬೇಕು. ಆದರೆ ಇದು ತಳ ಹಿಡಿಯದಂತೆ ಎಚ್ಚರಿಕೆವಹಿಸಬೇಕು. ಈಗ ಬದನೆಕಾಯಿ ಕರಿ ತಿನ್ನಲು ರೆಡಿ.

English summary

Eggplant Curry Easy Recipe | Baingan Bharta | ಬದನೆಕಾಯಿ ಕರಿ ಮಾಡುವ ವಿಧಾನ | ಬೇಂಗನ್ ಭಾರ್ಟ ಖಾದ್ಯ

Eggplant curry is one of the commonest Indian recipes that we make when we are in a hurry. This curry is also called as Baingan bharta. It is very easy to make recipe and It draws its taste from the roasting process more than anything else. Take a look at the procedure.
Story first published: Tuesday, November 15, 2011, 14:51 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more