For Quick Alerts
ALLOW NOTIFICATIONS  
For Daily Alerts

ಚಪಾತಿಗೆ ಚೆಂದ ಟೊಮೆಟೊ-ಗೋಡಂಬಿ ಕರಿ

|
Tomato Cashew Curry Recipe
ಚಪಾತಿಗೆ ಬರೀ ಚಟ್ನಿ, ಗೊಜ್ಜು ತಿಂದು ಬೇಜಾರಾಗಿದ್ದರೆ, ರುಚಿಕರವಾದ, ಮಾಡಲು ಬಲು ಸುಲಭವಾದ ಈ ಟೊಮೆಟೊ, ಗೋಡಂಬಿ ಕರಿ ಮಾಡಬಹುದು. ರುಚಿಗೆ ಸಾಟಿಯಿಲ್ಲದ ಈ ಕರಿ ದೋಸೆ, ಪೂರಿ, ಬಿಸಿ ಅನ್ನಕ್ಕೂ ಚೆಂದ. ರೋಟಿ, ಪರೋಟಾಗಂತು ಹೇಳಿ ಮಾಡಿಸಿದ ಖಾದ್ಯ. ಟೊಮೆಟೊ ಗೋಡಂಬಿ ಕರಿ ಮಾಡೋದು ಹೇಗೆ ಎಂದು ಇಲ್ಲಿ ನೋಡಿ.

ಟೊಮೆಟೊ-ಗೋಡಂಬಿ ಕರಿಗೆ ಏನೇನು ಬೇಕು?: 1/2 ಕೆಜಿ ಟೊಮೆಟೊ (ಕತ್ತರಿಸಿರಬೇಕು), 2 ಚಮಚ ತಾಜಾ ಶುಂಠಿ ಪೇಸ್ಟ್, 1 ಏಲಕ್ಕಿ, 1 ತುಂಡು ಚೆಕ್ಕೆ, 1 ಲವಂಗ, 1 ಕಪ್ ಗೋಡಂಬಿ, 1/2 ಕಪ್ ತೆಂಗಿನ ತುರಿ, 1 ಚಮಚ ಗರಂ ಮಸಾಲ ಪುಡಿ, 1 ಚಮಚ ಕೆಂಪು ಮೆಣಸಿನ ಪುಡಿ, ಸ್ವಲ್ಪ ಸಕ್ಕರೆ, ಸಾಸಿವೆ, 1 ಚಮಚ ಜೀರಿಗೆ, ಎಣ್ಣೆ

ಟೊಮೆಟೊ ಗೋಡಂಬಿ ಕರಿ ಮಾಡುವ ವಿಧಾನ:

* ಸ್ವಲ್ಪ ಟೊಮೆಟೊವನ್ನು ಮಸಾಲೆಗೆ, ಇನ್ನೂ ಸ್ವಲ್ಪ ಹುರಿಯುವುದಕ್ಕೆ ಇಟ್ಟಿರಬೇಕು. ಮಿಕ್ಸಿ ಬಟ್ಟಲಿಗೆ ಮಸಾಲೆಗೆಂದು ಟೊಮೆಟೊ, ಶುಂಠಿ ಪೇಸ್ಟ್, ಏಲಕ್ಕಿ, ಚೆಕ್ಕೆ, ಲವಂಗ, 3-4 ಗೋಡಂಬಿ, ತೆಂಗಿನ ತುರಿ ಹಾಕಿಕೊಂಡು ಪೇಸ್ಟ್ ನಂತೆ ರುಬ್ಬಿಕೊಳ್ಳಬೇಕು.

* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಸಾಸಿವೆ ಮತ್ತು ಜೀರಿಗೆಯನ್ನು ಹುರಿದುಕೊಳ್ಳಬೇಕು.

* ಸಾಸಿವೆ, ಜೀರಿಗೆಯನ್ನು ಹುರಿದುಕೊಂಡ ನಂತರ ರುಬ್ಬಿಕೊಂಡ ಮಿಶ್ರಣವನ್ನು ಅದಕ್ಕೆ ಹಾಕಿ ಸ್ವಲ್ಪ ಸಕ್ಕರೆ ಬೆರೆಸಿ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಸಾಲೆ ಬೇಯುವವರೆಗೂ ಸಣ್ಣ ಉರಿಯಲ್ಲಿ ಚೆನ್ನಾಗಿ ತಿರುಗಿಸಬೇಕು.

* ಬೇಯುತ್ತಿರುವ ಮಿಶ್ರಣಕ್ಕೆ ಗರಂ ಮಸಾಲೆ ಪುಡಿ, ಮತ್ತು ಕೆಂಪು ಮೆಣಸಿನಕಾಯಿ ಪುಡಿಯನ್ನು ಹಾಕಬೇಕು. ಕೊನೆಗೆ ಕತ್ತರಿಸಿದ ಟೊಮೆಟೊ ಮತ್ತು ಚಿಕ್ಕ ಗೋಡಂಬಿ ಚೂರುಗಳನ್ನು ಹಾಕಿ ಟೊಮೆಟೊ ಕರಗುವ ತನಕ ಬೇಯಿಸಿಬಿಟ್ಟರೆ ಟೊಮೆಟೊ ಗೋಡಂಬಿ ಕರಿ ತಿನ್ನಲು ರೆಡಿಯಾಗಿರುತ್ತೆ.

English summary

Tomato Cashew Curry Recipe | Indian Curry Recipe | ಟೊಮೆಟೊ ಗೋಡಂಬಿ ಕರಿ | ಭಾರತೀಯ ಮಸಾಲೆ ಖಾದ್ಯ

The spicy indian curry recipe that we are presenting today is the tomato curry with rich cashews. The tomato cashew curry is a classic curry that taste best with normal sambar powder or the chettinad spice or with even the italian spice. Take a look to know how to go about with the tomato curry recipe.
Story first published: Saturday, November 5, 2011, 17:02 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more