For Quick Alerts
ALLOW NOTIFICATIONS  
For Daily Alerts

ಹೆಸರುಬೇಳೆ ಹಾಗು ಮೆಂತೆ ಸೊಪ್ಪಿನ ಪಲ್ಯ

By Super
|
Fenugreek and Greengram palya
ಮೆಂತೆ ಸೊಪ್ಪು ಕಹಿಯಾಗಿದ್ದರೂ ಅದನ್ನು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲಾಗುವ ಲಾಭವನ್ನು ಕಡೆಗಣಿಸುವಂತಿಲ್ಲ. ಸಕ್ಕರೆ ರೋಗ ಇದ್ದವರಿಗೆ ಇದು ಹೇಳಿ ಮಾಡಿಸಿದ ತಿನಿಸು. ಮಗುವಿಗೆ ಹಾಲೂಡಿಸುವ ಬಾಳಂತಿಯರು, ಕೊಬ್ಬಿಳಿಸಿಕೊಳ್ಳಬೇಕು ಎನ್ನುವವರು ಯತೇಚ್ಛ ತಿನ್ನಬೇಕು. ಬಾಳಂತಿಯರಲ್ಲಿ ಇದು ಹಾಲಿನ ಉತ್ಪಾದನೆ ಹೆಚ್ಚಿಸುತ್ತದೆ. ಇದು ಸ್ತನ ಮತ್ತು ಕೋಲನ್ ಕ್ಯಾನ್ಸರನ್ನು ಕೂಡ ತಡೆಯುತ್ತದೆ ಎನ್ನುತ್ತಾರೆ ವೈದ್ಯರು. ಇಷ್ಟೇ ಅಲ್ಲ, ಮೆಂತೆ ಪಚನಕಾರಿ ಕೂಡ. ಸೈನಸ್ ಮತ್ತು ಉಸಿರಾಟದ ತೊಂದರೆಯಿಂದ ಬಳಲುವವರು ಮೆಂತೆಯನ್ನು ತಪ್ಪದೆ ತಿನ್ನಬೇಕು. ಇದನ್ನು ಹಸಿಹಸಿಯಾಗಿ ಅಂದರೆ ಬೇಯಿಸದೆ ತಿನ್ನಬಹುದು.

ಉತ್ತರ ಕರ್ನಾಟಕದಲ್ಲಿ ತಯಾರಿಸುವ ವಿವಿಧಮಯ ಪಲ್ಯಗಳ ಸರಣಿಯ ಭಾಗವಾಗಿ ಕಳೆದವಾರ ಈರುಳ್ಳಿ ಮತ್ತು ಹೆಸರುಬೇಳೆ ಪಲ್ಯ ವನ್ನು ಪ್ರಕಟಿಸಲಾಗಿತ್ತು. ಎರಡನೆಯದು ಹೆಸರುಬೇಳೆ ಹಾಗು ಮೆಂತೆ ಸೊಪ್ಪಿನ ಪಲ್ಯ. ಇದನ್ನು ಜೋಳದ ರೊಟ್ಟಿ, ಚಪಾತಿಯ ಜೊತೆ ತಿನ್ನಬಹುದು.

* ಸುನಂದ ಅರುಣಕುಮಾರ್ ಗೋಸಿ, ಬೆಂಗಳೂರು

ಬೇಕಾಗುವ ಸಾಮಗ್ರಿಗಳು :

* ಹೆಸರುಬೇಳೆ - 1/2 ಕಪ್

* ಮೆಂತೆ ಸೊಪ್ಪು - 2 ಕಟ್ಟು

* ಈರುಳ್ಳಿ - 1

* ಗರಂ ಮಸಾಲ - 1/4 ಚಮಚ

* ಅಚ್ಹ ಕಾರಧಪುಡಿ - 1/2 ಚಮಚ

* ಹುಚೆಳ್ಳು ಪುಡಿ - 1/2 ಚಮಚ

* ಅರಿಶಿಣ ಸ್ವಲ್ಪ

* ರುಚಿಗೆ ತಕ್ಕ ಉಪ್ಪು.

* ಒಗ್ಗರೆಣೆಗೆ;- ಸಾಸಿವೆ, ಜೀರಿಗೆ, ಕರಿಬೇವು.

ಮಾಡುವ ವಿಧಾನ :

ಮೊದಲಿಗೆ ಹೆಸರುಬೇಳೆಯನ್ನು ಹದವಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಮೆಂತೆ ಸೊಪ್ಪು ಹಾಗೂ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಬಾಣಲೆಗೆ 2 ಚಮಚ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಕರಿಬೇವು ಹಾಗು ಸಣ್ಣಗೆ ಹೆಚ್ಹಿದ ಈರುಳ್ಳಿ ಹಾಕಿ. ಆಮೇಲೆ ಹುರಿದ ಹೆಸರುಬೇಳೆ ಹಾಗು ಹೆಚ್ಹಿದ ಮೆಂತೆ ಸೊಪ್ಪು ನಂತರ ಅರಿಶಿಣ, ಗರಂ ಮಸಾಲ, ಹುಚ್ಚೆಳ್ಳು ಪುಡಿ, ಕಾರದಪುಡಿ, ರುಚಿಗೆ ತಕ್ಕ ಹಾಗೇ ಉಪ್ಪು ಹಾಕಿ ಮಿಕ್ಸ್ ಮಾಡಿ .

ಹೆಸರುಬೇಳೆ ಬೇಯುವಷ್ಟು ನೀರು ಹಾಕಿ. ಬೇಳೆ ಬೇಯುವಾಗ ಪಾತ್ರೆಯ ಮೇಲೆ ಮುಚ್ಚಳ ಮುಚ್ಚಿಡಿ. ಬೆಂದ ನಂತರ ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ. ಇದು ಚಪಾತಿ, ಅಕ್ಕಿ ರೊಟ್ಟಿ, ಜೋಳದ ರೊಟ್ಟಿ ಹಾಗು ಅನ್ನಕ್ಕೂ ಸಹ ಚೆನ್ನಾಗಿರುತ್ತದೆ. (ಮೆಂತೆ ಸೊಪ್ಪಿನ ಬದಲು ದಂಟು, ಕೆಂಪು ದಂಟು ಮತ್ತು ಹರಿವೆ ಸೊಪ್ಪು ಬೇರೆ ತರಹ ಸೊಪ್ಪುಗಳನ್ನು ಕೂಡ ಹಾಕಿ ಮಾಡಿಕೊಳ್ಳಬಹುದು.

English summary

North Karnataka | Fenugreek Greengram palya | Menthya | Healthy recipe | Sunanda gosi - ಹೆಸರುಬೇಳೆ ಹಾಗು ಮೆಂತೆ ಸೊಪ್ಪಿನ ಪಲ್ಯ

Nutricious and delicious pulse and greens recipes of North Karnataka. By Sunanda Arunkumar Gosi. ಹೆಸರುಬೇಳೆ ಹಾಗು ಮೆಂತೆ ಸೊಪ್ಪಿನ ಪಲ್ಯ
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more