For Quick Alerts
ALLOW NOTIFICATIONS  
For Daily Alerts

ಪುಷ್ಟಿದಾಯಕ ಚಿಲ್ಲಿ ಮಶ್ರೂಮ್ ಪಲ್ಯ

By Prasad
|
Mushrooms
ಪಲ್ಯ ಅಂದಕೂಡಲೆ ನೆನಪಿಗೆ ಬರುವ ಎಲ್ಲಾ ತರಕಾರಿಗಳನ್ನು ಬದಿಗಿಟ್ಟು ಒಂದು ಬಾರಿಯಾದರೂ ಅಣಬೆ ಪಲ್ಯ ತಯಾರಿಸಿ ನೋಡಿ. ರುಚಿಗೆಟ್ಟ ನಾಲಿಗೆಗೆ ಅಣಬೆ ಪಲ್ಯ ರುಚಿಸದಿದ್ದರೆ ಕೇಳಿ. ಅಣಬೆ ಪುಷ್ಟಿದಾಯಕ ಆಹಾರವೂ ಹೌದು.

ಬೇಕಾಗುವ ಪದಾರ್ಥಗಳು

ಅಣಬೆ 250 ಗ್ರಾಂ
ಈರುಳ್ಳಿ 2
ದೊಡ್ಡ ಮೆಣಸಿನಕಾಯಿ 2
ಪನೀರ್ 250 ಗ್ರಾಂ
ಹಸಿಮೆಣಸಿನಕಾಯಿ 5
ಹಸಿ ಶುಂಠಿ ತುಣುಕು
ವಿನೆಗಾರ್ 1 ಚಮಚ
ಸೋಯಾ ಸಾಸ್ 2 ಚಮಚ
ಸಾಸಿವೆ, ಅರಿಷಿಣ
ಉಪ್ಪು

ಮಾಡುವ ವಿಧಾನ

ಮಶ್ರೂಮ್ ಅಥವಾ ಅಣಬೆಗಳನ್ನು ಎರಡು ಭಾಗಗಳನ್ನಾಗಿ ಕತ್ತರಿಸಿರಿ. ಈರುಳ್ಳಿ ಮತ್ತು ದೊಡ್ಡ ಮೆಣಸಿನಕಾಯಿಗಳನ್ನು ಉದ್ದುದ್ದ ಕತ್ತರಿಸಿಕೊಂಡು ತಟ್ಟೆಯಲ್ಲಿ ತೆಗೆದಿರಿಸಿರಿ. ಹಸಿ ಮೆಣಸಿನಕಾಯಿ ಮತ್ತು ಹಸಿ ಶುಂಠಿಯನ್ನು ಸಣ್ಣಗೆ ಹೆಚ್ಚಿಡಿ. ಪನೀರನ್ನು ಕೂಡ ಕ್ಯೂಬ್ ಆಕಾರದಲ್ಲಿ ಕತ್ತರಿಸಿರಿ.

ಒಂದು ಬಾಣಲೆಯಲ್ಲಿ ನಾಲ್ಕು ಚಮಚ ರಿಫೈನ್ಡ್ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ ಚಟಪಟ ಅನಿಸಿ, ಅರಿಷಿಣ ಹಾಕಿದ ನಂತರ ಹೆಚ್ಚಿಟ್ಟುಕೊಂಡ ಮೆಣಸಿನಕಾಯಿ, ಈರುಳ್ಳಿ, ದೊಡ್ಡ ಮೆಣಸಿನಕಾಯಿ, ಶುಂಠಿಯನ್ನು ಹಾಕಿ ಐದಾರು ನಿಮಿಷ ಬಾಡಿಸಿರಿ.

ಇದಕ್ಕೆ ಅಣಬೆಗಳನ್ನು ಬೆರೆಸಿ ಕೈಯಾಡಿಸಿ ಬಾಣಲೆಯನ್ನು ಮುಚ್ಚಿಟ್ಟು ಸಣ್ಣ ಉರಿಯಲ್ಲಿ ಬೇಯಿಸಿರಿ. ಐದು ನಿಮಿಷವಾದನಂತರ ಇದಕ್ಕೆ ಪನೀರ್, ವಿನೆಗಾರ್, ಸೋಯಾ ಸಾಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ಕೈಯಾಡಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿ.

ಈ ಅಣಬೆ ಪಲ್ಯವನ್ನು ಬಿಸಿಬಿಸಿ ಅನ್ನ, ನೂಡಲ್ಸ್ ಜೊತೆಗೆ ತಿನ್ನಬಹುದು.

Story first published: Monday, July 12, 2010, 19:08 [IST]
X
Desktop Bottom Promotion