For Quick Alerts
ALLOW NOTIFICATIONS  
For Daily Alerts

ಮಕ್ಕಳ ಆರೋಗ್ಯ ವರ್ಧನೆಗೆ ತ್ರಿವೇಣಿ ಸಂಗಮ ಕೋಸಂಬರಿ

By * ಉಮಾ ಸುಬ್ರಮಣ್ಯ, ಬೆಂಗಳೂರು
|
Carrot, Radish, Cucumber salad
ಮಗು ಮಲಬದ್ಧತೆಯಿಂದ ನರಳುತ್ತಿರುತ್ತದೆ ಏನೋ ಆಗಿರಬಹುದು ಎಂದು ಡಾಕ್ಟರ್ ಹತ್ತಿರ ಕರೆದೊಯ್ದು ಬಲವಂತವಾಗಿ ಗುಳಿಗೆಗಳನ್ನು ನುಂಗುವಂತೆ ಮಾಡುತ್ತೀರಾ. ಮಗು ಇತ್ತಿತ್ತಲಾಗಿ ಯಾಕೋ ಸರಿಯಾಗಿ ಊಟ ಮಾಡುತ್ತಿಲ್ಲ ಎಂದು ಕೊರಗುತ್ತ ಅದೇ ಅನ್ನ ಸಾರು ಪ್ರತಿದಿನ ಬಡಿಸುತ್ತೀರಾ. ಹಾಗಿದ್ದರೆ, ಈ ತೊಂದರೆಗಳಿಗೆಲ್ಲ ಮನೆಯಲ್ಲಿಯೇ ಮದ್ದು ಕಂಡುಕೊಳ್ಳುವುದು ಹೇಗೆ? ಮಕ್ಕಳನ್ನು ಆರೋಗ್ಯವಂತರನ್ನಾಗಿ ಇಡುವುದು ಹೇಗೆ?

ಅದಕ್ಕೆ ಇಲ್ಲಿದೆ ಉಪಾಯ. ಮಲಬದ್ಧತೆ, ಉಷ್ಣದಿಂದ ಬಳಲುತ್ತಿದ್ದರೆ, ವಿಟಮಿನ್ ಎ, ಕಬ್ಬಿಣದಂಶದ ಕೊರತೆಯಿದ್ದರೆ ಇದೊಂದೇ ಆಹಾರ ಎಲ್ಲವನ್ನೂ ತೊಡೆದು ಹಾಕುತ್ತದೆ. ಅದೇ ಮೂಲಂಗಿ, ಕ್ಯಾರೆಟ್ ಮತ್ತು ಸೌತೆಕಾಯಿ ಸಂಗಮದ ಕೋಸಂಬರಿ. ಇದು ಆರೋಗ್ಯಕರವೂ ಹೌದು ಮತ್ತು ರುಚಿಕರವೂ ಹೌದು. ಮಕ್ಕಳಲ್ಲಿ ಜೀರ್ಣಶಕ್ತಿ ವರ್ಧಿಸಲು ಈ ಕೋಸಂಬರಿಯನ್ನು ಆಗಾಗ ಮಾಡಿಕೊಡಿ. ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಇದನ್ನು ತಿನ್ನಬಹುದು. ಈ ರೆಸಿಪಿಯನ್ನು ಮಾಡಲು ತಿಳಿದಿರುವವರು, ನನಗೆ ತಿಳಿದಿದೆ ಎಂದು ಸುಮ್ಮನಿರಬಹುದು, ಗೊತ್ತಿಲ್ಲದವರು ಮಾಡಿ ಸವಿಯಬಹುದು. ಆಪ್ಶನ್ ನಿಮಗೆ ಬಿಟ್ಟಿದ್ದು.

ಬೇಕಾಗುವ ಸಾಮಗ್ರಿಗಳು

ಕ್ಯಾರೆಟ್ - 2
ಸೌತೆಕಾಯಿ - 1
ಮುಲಂಗಿ - 2
ಸಾಸಿವೆ
ಇಂಗು
ಉದ್ದಿನಬೇಳೆ
ಕೊತ್ತಂಬರಿ ಸೊಪ್ಪು
ಎಣ್ಣೆ - 2 ಚಮಚ
ಹಸಿಮೆಣಸಿನ ಕಾಯಿ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ

* ಮೊದಲಿಗೆ ತರಕಾರಿಗಳನ್ನು ಸ್ವಚ್ಛವಾದ ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು, ಸಿಪ್ಪೆಯನ್ನು ಸುಲಿದುಕೊಂಡು, ಹೆರೆಯುವ ಮಣೆಯಲ್ಲಿ ಹೆರೆದುಕೊಳ್ಳಿ.

* ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಕಾದ ನಂತರ ಸಾಸಿವೆ ಹಾಕಿ ಚಟ ಚಟ ಅನ್ನುತ್ತಿದ್ದಂತೆ ಇಂಗು, ಉದ್ದಿನಬೇಳೆ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ತಾಳಿಸಿರಿ.

* ಈ ಒಗ್ಗರಣೆಯನ್ನು ತುರಿದ ತರಕಾರಿಗೆ ಹಾಕಿ ಕಲಿಸಿ. ಇದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಹಾಕಿ ಕೈಯಾಡಿಸಿ.

* ಉಷ್ಣದಿಂದ, ಕಬ್ಬಿಣದ ಅಂಶದ ಕೊರತೆಯಿರುವ ಮತ್ತು ಮಲಬದ್ಧತೆಯಿಂದ ನರಳುವ ಯಾರೇ ಆದರೂ ತಿನ್ನಬಹುದು. ಇದನ್ನು ಹಸಿಹಸಿಯಾಗಿ ತಿನ್ನಬಹುದು. ಇದಕ್ಕೆ ಮೊಸರು ಹಾಕಿ ಕಲಿಸಿದರಂತೂ ಇನ್ನೂ ರುಚಿಕರ.

* ಮಕ್ಕಳಿಗೆ ಆರಂಭದಿಂದಲೂ ಇದನ್ನು ತಿನ್ನುವುದನ್ನು ರೂಢಿ ಮಾಡಿರಿ. ಆರೋಗ್ಯಕರ ಮತ್ತು ರುಚಿಕರ. ಚಪಾತಿ ಜೊತೆಯಂತೂ ಈ ಕೋಸಂಬರಿ ಸೂಪರ್.

;
English summary

Carrot, Radish, Cucumber salad | Healthy recipe for children | ಮೂಲಂಗಿ, ಕ್ಯಾರೆಟ್, ಸೌತೆಕಾಯಿ ಕೋಸಂಬರಿ | ಮಕ್ಕಳಿಗಾಗಿ ಆರೋಗ್ಯಕರ ತಿನಿಸು

Healthy recipe for children : Carrot, Radish, Cucumber salad. This salad is a very good appetiser and provides nutrients like iron, vitamin A. This is good for the children who suffer from constipation.
Story first published: Wednesday, June 22, 2011, 13:38 [IST]
X
Desktop Bottom Promotion