For Quick Alerts
ALLOW NOTIFICATIONS  
For Daily Alerts

ಮಾವಿನಕಾಯಿ ಮುಗಿಯೋ ಮುನ್ನ ಗೊಜ್ಜು ಮಾಡಿ

|
ಇದು ಮಾವುಕಾಲ. ಮಾರುಕಟ್ಟೆಯಲ್ಲಂತೂ ಕಡಿಮೆ ದರಕ್ಕೆ ಮಾವು ಸಿಗೋ ಸೀಸನಿದು. ಇಂತಹ ಸಮಯದಲ್ಲಿ ಮಾವಿನಕಾಯಿ ಗೊಜ್ಜು ಮಾಡದಿದ್ದರೆ ಹೇಗೆ. ಮಾವಿನಕಾಯಿ ಗೊಜ್ಜಿನಲ್ಲಿ ಚಪಾತಿ, ದೋಸೆ, ಇಡ್ಲಿ ನೆಂಚಿಕೊಂಡು ತಿಂದರೆ ಮಜಾನೇ ಬೇರೆ. ಮಾಡೋದು ಹೇಗೆ ಅಂತ ಕೇಳ್ತಾ ಇದ್ದಿರಾ? ಹೀಗೆ ಮಾಡಿ.

ಬೇಕಾಗುವ ವಸ್ತುಗಳು
* 2-3 ಮಾವಿನಕಾಯಿ
* ರುಚಿಗೆ ತಕ್ಕಷ್ಟು ಉಪ್ಪು
* 50 ಗ್ರಾಂ ಬೆಲ್ಲ
* ಸಾಸಿವೆ, ಇಂಗು ಮತ್ತು ಎಣ್ಣೆ
* ನಾಲ್ಕು ಒಣಮೆಣಸಿನಕಾಯಿ

ಮಾಡೋದು ಹೀಗೆ
* ಮಾವಿನಕಾಯಿಯನ್ನು ಸಣ್ಣದಾಗಿ ಪೀಸ್ ಹೆಚ್ಚಿಕೊಳ್ಳಿ. ಆಮೇಲೆ ಮಾವಿನ ಪೀಸ್ ಗಳನ್ನು ಬೇಯಿಸಿರಿ
* ಬೆಂದಿರುವ ಮಾವಿನಕಾಯಿ ಹೋಳುಗಳಿಗೆ ಹಸಿಮೆಣಸಿನಕಾಯಿ, ಬೆಲ್ಲ, ಉಪ್ಪು ಹಾಕಿರಿ.
* ಪಾತ್ರೆಗೆ ಎಣ್ಣೆ ಹಾಕಿ, ಒಣಮೆಣಸಿನ ಕಾಯಿ, ಇಂಗು ಹಾಕಿ ಸೂಪರಾಗಿ ಒಗ್ಗರಣೆ ಕೊಡಿ. ಮಾವಿನಕಾಯಿ ಗೊಜ್ಜು ರೆಡಿ.

English summary

Mango Gojju Recipe for Monsoon | Karnataka Mango Recipe | ಮಾವಿನಕಾಯಿ ಗೊಜ್ಜು

There are lot of recipes with mangoes for Monsoon. But preparing raw mango gojju recipe is so easy. Lets cook Mavinakayi gojju...
Story first published: Monday, June 20, 2011, 17:17 [IST]
X
Desktop Bottom Promotion