For Quick Alerts
ALLOW NOTIFICATIONS  
For Daily Alerts

ಹಸಿಕಡಲೆಕಾಳು ಉಸಳಿ ರೆಸಿಪಿ

By Shami
|
Green chick peas
ಕಚೇರಿಯಲ್ಲಿ ಬೆಳಗ್ಗೆಯಿಂದ ಕೆಲಸಮಾಡಿ ಸುಸ್ತಾಗಿ ಉಶ್ಯಪ್ಪ ಅಂತ ಮನೆಗೆ ಹೊರಟಿದ್ದೀರಿ. ಹೊಟ್ಟೆ ತಾಳ ಹಾಕುತ್ತಿದೆ. ಎಲ್ಲಿಯಾದರೂ ನಿಂತು ಏನಾದರೂ ಹೊಟ್ಟೆಗೆ ಹಾಕಿಕೊಂಡು ಹೋಗೋಣವೆಂದರೆ ಪಾರ್ಕಿಂಗ್ ಪ್ರಾಬ್ಲಂ. ಜನಜಂಗುಳಿಯಿಂದ ತಪ್ಪಿಸಿಕೊಂಡು ಮನೆಕಡೆ ಬೇಗಬೇಗ ಹೋಗುತ್ತಿದ್ದರೆ ದಾರಿಯುದ್ದಕ್ಕೂ ಹೋಟೆಲುಗಳ ಸಾಲು ಸಾಲು. ಕೈ ಬೀಸಿ ಕರಿಯುವ ತಿಂಡಿಗಳ ಹೆಸರು ಹೊತ್ತ ಫಲಕಗಳು.

ಕರ್ನಾಟಕದ ಮೂಲೆಮೂಲೆಗಳಲ್ಲಿ ಗಾಡಿ ತಿಂಡಿಯಿಂದ ಘಂ ಎನ್ನುವ ಪರಿಮಳ ಬರ್ತಾಯಿರತ್ತೆ. ಗೋಬಿ, ಪಾವ್, ಮಸಾಲಾ ಪೂರಿ, ಮೆಣಸಿನಕಾಯಿ ಬೋಂಡ ಭಜ್ಜಿಗಳು. ಒಂದು ಕಡೆ ತಿನ್ನಲು ಆಸೆ, ಆ ಕ್ಷಣದಲ್ಲೆ ತಿಂದು ಹೊಟ್ಟೆ ಕೆಟ್ಟರೆ ಎಂಬ ಹೆದರಿಕೆ. ಆರೋಗ್ಯನೂ ಕಾಪಾಡಿಕೊಳ್ಳಬೇಕು ಜತೆಗೆ ಹಸಿವನ್ನೂ ದೂರವಿಡಬೇಕು ಎಂಬ ಕಲ್ಪನೆ ಇದ್ದವರು ಸೀದಾ ಮನೆಗೆ ಹೋಗಿ ಡಯಟ್ ಚಾಟ್ ಗಳ (ಕಾಳಿನ ಉಸಳಿಗಳು) ಮೊರೆಹೋಗುವುದು ವಿಹಿತ. ಇವತ್ತು ಒಂದು ಚಾಟ್ ಮಾಡುವುದನ್ನು ಕಲಿಯೋಣ. ಮನೆಗೆ ಹೋಗುವ ದಾರಿಯಲ್ಲಿ ಹತ್ತು ಕಡಲೆಗಿಡ ಹಿಡಿದುಕೊಂಡು ಹೋಗಿ.

ಬೇಕಾಗುವ ಪದಾರ್ಥಗಳ ಪಟ್ಟಿ ಹೀಗಿದೆ

ಹಸಿ ಕಡಲೆಕಾಳು 250 ಗ್ರಾಂ
ಎಣ್ಣೆ 3 ಚಮಚ
ಈರುಳ್ಳಿ 2
ಬೇಯಿಸಿದ ಆಲೂಗೆಡ್ಡೆ 2
ಟೊಮೆಟೋ 1
ಸೌತೇಕಾಯಿ 1
ಕೊತ್ತಂಬರಿ ಸೊಪ್ಪು ಸ್ವಲ್ಪ
ಟೊಮೆಟೋ ಕೆಚ್ ಅಪ್ 2 ಚಮಚ
ಚಿಲ್ಲಿ ಸಾಸ್ 2 ಚಮಚ
ಕಡಲೆಕಾಯಿ ಬೀಜ 25 ಗ್ರಾಂ

ಮಾಡುವ ವಿಧಾನ

ಕಡಲೆಕಾಳನ್ನು ತೊಳೆದು, ಬೇಯಿಸಿ, ಬಸಿದು ಇಟ್ಟುಕೊಳ್ಳಬೇಕು. ಕಡಲೆಕಾಯಿ ಬೀಜಗಳನ್ನು ಪ್ರತ್ಯೇಕವಾಗಿ ಹುರಿದು ಇಟ್ಟುಕೊಳ್ಳಬೇಕು. ತವದಲ್ಲಿ ಎಣ್ಣೆ ಹಾಕಿ ಬಿಸಿಮಾಡಿ ಅದಕ್ಕೆ ಹೆಚ್ಚಿದ ಈರುಳ್ಳಿ, ಆಲೂಗೆಡ್ಡೆ, ಟೋಮೆಟೋ ಹಾಕಿ ಲೈಟಾಗಿ ಹುರಿಯಿರಿ. ಇದಕ್ಕೆ ಬೇಯಿಸಿದ ಹಸಿ ಕಡಲೆಕಾಳು ಹಾಕಿ ಬಣ್ಣ ಬದಲಾಗುವವರೆಗೆ ಹುರಿಯಬೇಕು.

ಕೊನೆಯಲ್ಲಿ ಇದಕ್ಕೆ ಕೆಚ್ ಅಪ್, ಉಪ್ಪು, ಚಿಲ್ಲಿ ಸಾಸ್ ಬೆರೆಸಿ ಚೆನ್ನಾಗಿ ಕಲಸಬೇಕು. ಅಲ್ಲಿಗೆ ಉಸುಳಿ ರೆಡಿ. ಇನ್ನೊಂದು ಪಾತ್ರೆಯಲ್ಲಿ ಹುರಿದ ಕಡಲೆಕಾಯಿ ಬೀಜ, ಕೊತ್ತಂಬರಿ ಸೊಪ್ಪು, ಸ್ವಲ್ಪ ಕಾಳುಮೆಣಸಿನಪುಡಿ ಹಾಕಿ, ಚೂರು ಉಪ್ಪು ಹಾಕಿ ಕಲಸಬೇಕು.

Story first published: Tuesday, April 27, 2010, 13:47 [IST]
X
Desktop Bottom Promotion