For Quick Alerts
ALLOW NOTIFICATIONS  
For Daily Alerts

ಮಸಾಲೆ ದೋಸೆಗಾಗಿ ಆಲೂಗಡ್ಡೆ ಪಲ್ಯ

By Prasad
|
Batata or Aloo palya for Masala Dosa
ಆಲೂಗಡ್ಡೆ ಪಲ್ಯ ಮಾಡುವುದರಲ್ಲೂ ನಾನಾ ವಿಧಾನಗಳಿಗೆ. ಆದರೆ, ಸುರುಳಿ ಸುತ್ತಿಕೊಂಡ ಮಸಾಲೆ ದೋಸೆ ಯೊಳಗೆ ಬಚ್ಚಿಟ್ಟುಕೊಂಡ ಆಲೂಗಡ್ಡೆಯ ರುಚಿಯೇ ಬೇರೆ. ಆಲೂಗಡ್ಡೆ ಪಲ್ಯದ ರುಚಿ ಮತ್ತು ಘಮಲು ಮಸಾಲೆ ದೋಸೆಯ ಗುಣಮಟ್ಟವನ್ನು ನಿರ್ಧರಿಸಬಲ್ಲದು. ಆಲೂಗಡ್ಡೆ ಅಥವಾ ಬಟಾಟೆ ಪಲ್ಯ ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ.

* ನಾಗು ಶಂಕರ್

ಬೇಕಾಗುವ ಪದಾರ್ಥಗಳು

ಸಿಪ್ಪೆ ತೆಗೆದು ಬೇಯಿಸಿದ 3 ಬಿಳಿ ಆಲೂಗಡ್ಡೆ, ಉದ್ದುದ್ದ ಕೊಯ್ದ ಎರಡು ಈರುಳ್ಳಿ, ಉದ್ದುದ್ದ ಹೆಚ್ಚಿದ 5 ಹಸಿ ಮೆಣಸಿನಕಾಯಿ, 1 ಟೀ ಚಮಚದಷ್ಟು ಶುಂಠಿ, , 1 ಟೀ ಚಮಚ ಕೊತ್ತಂಬರಿ ಬೀಜದ ಪುಡಿ, 1 ಟೀ ಚಮಚ ಸಾಸಿವೆ, 1 ಟೀ ಚಮಚ ಬಿಳಿ ಉದ್ದಿನ ಬೇಳೆ, 1 ಟೀ ಚಮಚ ಚೆನ್ನ ದಾಲ್‌, 8 ಬಿಡಿಸಿದ ಗೋಡಂಬಿ, 2 ಟೇಬಲ್‌ ಚಮಚ ಎಣ್ಣೆ, ಅರ್ಧ ಟೀ ಚಮಚ ಅರಿಶಿನ, 1 ಟೇಬಲ್‌ ಚಮಚ ಲಿಂಬೆ ರಸ, 2 ಟೀ ಚಮಚ ಉಪ್ಪು.

ಪಲ್ಯ ಮಾಡುವ ವಿಧಾನ

ಆಲೂಗಡ್ಡೆಯನ್ನು 20 ನಿಮಿಷ ಚೆನ್ನಾಗಿ ಬೇಯಿಸಿ. ಎಣ್ಣೆಯನ್ನು ನಾನ್‌ಸ್ಟಿಕ್‌ ಬಾಣಲೆಯಲ್ಲಿಟ್ಟು ಮಧ್ಯಮ ಉರಿಯಲ್ಲಿ ಕಾಯಿಸಿ. ಗೋಡಂಬಿಯನ್ನು ಹಾಕಿ, ಕಂದು ಬಣ್ಣಕ್ಕೆ ಬರುವಂತೆ ಬಾಡಿಸಿ. ಸಾಸಿವೆ ಮತ್ತು ಬೇಳೆಗಳನ್ನು ಹಾಕಿ. ಸಾಸಿವೆ ಚಿಟಿಗುಟ್ಟಲಿ. ಐದೆಂಟು ಸೆಕೆಂಡುಗಳ ನಂತರ ಒಲೆಯ ಉರಿಯನ್ನು ಕಡಿಮೆ ಮಾಡಿ. ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಈರುಳ್ಳಿಯನ್ನು ಬಾಣಲೆಗೆ ಹಾಕಿ. ಸ್ವಲ್ಪ ಹೊತ್ತು ಹುರಿದಂತೆ ಮಾಡಿ. ಅರಿಶಿನ, ಧನಿಯಾ ಪುಡಿ ಹಾಗೂ ಉಪ್ಪನ್ನು ಹಾಕಿ.

ಇದಕ್ಕೆ ಬೇಯಿಸಿದ ಆಲೂಗಡ್ಡೆಯನ್ನು ಸಿಪ್ಪೆ ಸುಲಿದು ಚೆನ್ನಾಗಿ ಕಿವುಚಿ ಅಥವಾ ಪುಡಿ ಮಾಡಿ ಸೇರಿಸಿ. ಚಿನ್ನಗಂದು ಬಣ್ಣ ಬರುವವರೆಗೆ ಕೈಯಾಡಿಸಿ. ಇದಕ್ಕೆ 12ರಿಂದ 15 ನಿಮಿಷ ಬೇಕಾಗಬಹುದು. ಆಮೇಲೆ ಲಿಂಬೆರಸ ಹಾಕಿ. ಮೂರ್ನಾಲ್ಕು ಚಮಚ ನೀರು ಹಾಕಿ. ನೀರು ಆವಿಯಾಗುವವರೆಗೆ ಹುರಿಯುವುದನ್ನು ಮುಂದುವರೆಸಿ.

ಆಲೂಗಡ್ಡೆ ಪಲ್ಯಕ್ಕೆ ಬೇಕಿದ್ದರೆ ಹುರಿಯುವಾಗಲೇ ತುರಿದ ಹಸಿಕೊಬ್ಬರಿ ಹಾಕಬಹುದು. ರುಚಿಯೂ ದುಪ್ಪಟ್ಟಾಗುತ್ತದೆ. ಹೀಗೆ ತಯಾರಾದ ಪಲ್ಯವನ್ನು ಕಾವಲಿ ಮೇಲಿಟ್ಟ ಸಾದಾ ದೋಸೆಯ ಮಧ್ಯಭಾಗದಲ್ಲಿ ಹಾಕಿ. ದೋಸೆಯನ್ನು ಮಡಿಸಿ. ಮಸಾಲೆ ದೋಸೆ ರೆಡಿ.

ವಿ.ಸೂ. : ಈ ರೆಸಿಪಿ ಎಂದೂ ಆಲೂಗಡ್ಡೆ ಪಲ್ಯ ಮಾಡಿರದ ಅಥವಾ ಸರಿಯಾಗಿ ಮಾಡಲು ಬಾರದ ಬಾಣಸಿಗರಿಗೆ ಮಾತ್ರ.

English summary

Aloo palya | Alu palya | Batata palya | Masala Dosa | Palya for Dose | Side dish - ಮಸಾಲೆ ದೋಸೆಗಾಗಿ ಆಲೂಗಡ್ಡೆ ಪಲ್ಯ

Side dish : Aloo playa or batata palya for masala dosa by nagu shankar. ಮಸಾಲೆ ದೋಸೆಗಾಗಿ ಆಲೂಗಡ್ಡೆ ಪಲ್ಯ.
X
Desktop Bottom Promotion