For Quick Alerts
ALLOW NOTIFICATIONS  
For Daily Alerts

ಹೂಕೋಸಿನ ಕುರ್ಮಾ

By Shami
|
Cauliflower kurma
ಮಸಾಲೆ ಊಟ ಮಸಾಲೆ ತಿಂಡಿ ಇಷ್ಟ ಪಡುವವರಿಗೆ ಹೇಳಿ ಮಾಡಿಸಿದ ಅಡುಗೆ ಕುರ್ಮಾ. ಇದನ್ನು ತಯಾರಿಸುವುದಕ್ಕೆ ಅನೇಕಾರು ಸಾಂಬಾರ ಪದಾರ್ಥಗಳ ಅಗತ್ಯ ಇದ್ದು ಅದನ್ನೆಲ್ಲ ಹಾಕಿ, ಮಾಡಿದರೆ ರುಟಿಕಟ್ಟಾಗಿರುತ್ತದೆ.

ಬೇಕಾದ ಪದಾರ್ಥಗಳು :
ಲಕಲಕ ಫ್ರೆಶ್ ಆಗಿರುವ ಒಂದು ಹೂಕೋಸು | ಹಣ್ಣಾಗಿರುವ ಎರಡು ಟೊಮಾಟೊ | ಕಾಲು ಚಮಚ ಅರಶಿನಪುಡಿ | ಮೂರು ಸಣ್ಣ ಈರುಳ್ಳಿ | ಬೇಯಿಸಿದ ಬಟಾಣಿ ಕಾಲು ಕಪ್ | ರುಚಿಗೆ ತಕ್ಕಷ್ಟು ಉಪ್ಪು | ಎಣ್ಣೆ 4 ಅಥವಾ 5 ಚಮಚ.

ಮಸಾಲೆ ರುಬ್ಬುವುದಕ್ಕೆ : ಹುರಿದ ಕಡಲೆಬೇಳೆ | ಏಲಕ್ಕಿ | ದಾಲ್ಚಿನ್ನಿ | ಲವಂಗ | ಹಸಿರುಮೆಣಸಿನಕಾಯಿ | ಕೆಂಪು ಮೆಣಸಿನಕಾಯಿ | ಕೊತ್ತಂಬರಿ ಬೀಜ | ತೆಂಗಿನಕಾಯಿ ತುರಿ | ಗೋಡಂಬಿ | ಗಸಗಸೆ | ಬೆಳ್ಳುಳ್ಳಿ | ಕತ್ತರಿಸಿದ ಈರುಳ್ಳಿ.

ತಯಾರಿಸುವ ವಿಧಾನ :

ಈರುಳ್ಳಿಯನ್ನು ಉದ್ದ ಉದ್ದವಾಗಿ ಸೀಳಿಕೊಳ್ಳಿರಿ, ಟೊಮ್ಯಾಟೊ ಸಣ್ಣಗೆ ಹೆಚ್ಚಿರಿ. ಹೂಕೋಸನ್ನು ಸಣ್ಣ ತುಂಡುಗಳಾಗಿ ಮುರಿದುಕೊಂಡು ಸ್ವಲ್ಪ ಉಪ್ಪಿನ ನೀರಿನಲ್ಲಿ ಐದು ನಿಮಿಷ ಬೇಯಿಸಿರಿ. ಎಣ್ಣೆ ಬಿಸಿ ಮಾಡಿ, ಈರುಳ್ಳಿ ಮತ್ತು ಟೊಮ್ಯಾಟೊ ಹಾಕಿ ಹುರಿಯಿರಿ.

ರುಬ್ಬಿಕೊಂಡಿರುವ ಪದಾರ್ಥವನ್ನು ಇದಕ್ಕೆ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಸ್ವಲ್ಪ ಹೊತ್ತು ಬಾಡಿಸಬೇಕು. ಆಮೇಲೆ, ಇದಕ್ಕೆ ಬೇಯಿಸಿದ ಹೂಕೋಸು ಬಟಾಣಿ ಮತ್ತು ಉಪ್ಪು ಹಾಕಿ ಸ್ವಲ್ಪ ನೀರನ್ನೂ ಸೇರಿಸಿ, ಇನ್ನೂ ಕೆಲ ನಿಮಿಷಗಳ ಕಾಲ ಬೇಯಿಸಬೇಕು.

ಬಾಣಲೆ ಒಲೆಯಿಂದ ಕೆಳಗಿಳಿಸದ ನಂತರ ಕೊತ್ತಂಬರಿ ಸೊಪ್ಪು ಸಿಂಪಡಿಸಬೇಕು. ಗೋಧಿಯನ್ನು ಶುದ್ಧೀಕರಿಸಿ, ಗಿರಣಿಯಲ್ಲಿ ಹಿಟ್ಟು ಮಾಡಿಸಿ, ಜರಡಿ ಹಿಡಿದು, ಅದರಿಂದ ಮಾಡಿದ ಪೂರಿ ಅಥವಾ ಚಪಾತಿ ಜತೆಗೆ ತಿನ್ನಿರಿ.

X
Desktop Bottom Promotion