For Quick Alerts
ALLOW NOTIFICATIONS  
For Daily Alerts

ಹೃದಯದ ಆರೋಗ್ಯಕ್ಕಾಗಿ ಬೆಳ್ಳುಳ್ಳಿ ಚಟ್ನಿಪುಡಿ

By Prasad
|
Garlic
ದಟ್ಸ್ ಕನ್ನಡದಲ್ಲಿ ಉತ್ತರ ಕರ್ನಾಟಕದಲ್ಲಿ ತಯಾರಿಸಲಾಗುವ ವಿವಿಧಬಗೆಯ ಚಟ್ನಿಪುಡಿ ಮತ್ತು ಚಟ್ನಿಗಳ ಸರಣಿಯನ್ನು ಆರಂಭಿಸುತ್ತಿದ್ದೇವೆ. ಈ ಎಲ್ಲಾ ಚಟ್ನಿಪುಡಿ ಹಾಗು ಚಟ್ನಿಗಳು ಜೋಳದ ರೊಟ್ಟಿ, ಅಕ್ಕಿರೊಟ್ಟಿ, ರಾಗಿರೊಟ್ಟಿ, ಚಪಾತಿ, ಇಡ್ಲಿ, ದೋಸೆ, ಪೂರಿ, ಅನ್ನ, ಎಲ್ಲದಕ್ಕೂ ಸೈ. ಚಟ್ನಿಪುಡಿಗೆ ಮೊಸರು ಅಥವಾ ತುಪ್ಪ ಅಥವಾ ಎಣ್ಣೆ ಹಾಕಿಕೊಂಡು ತಿಂದರೆ ಇನ್ನು ರುಚಿ. ಎಲ್ಲಾ ಪುಡಿಗಳನ್ನು ಮಾಡಿಟ್ಟು ಭರಣಿಯಲ್ಲೋ ಪ್ಲಾಸಿಟ್ಕಿ ಜಾರಿನಲ್ಲಿ ಕೂಡಿಸಿಟ್ಟುಕೊಳ್ಳಬಹುದು. ಪಿಕ್ನಿಕ್ ಹಾಗು ಪ್ರವಾಸಕ್ಕೆ ಸಹ ತೆಗೆದುಕೊಂಡು ಹೋಗಬಹುದು, ಬೇಗ ಕೆಡುವುದೂ ಇಲ್ಲ.

ಮೊದಲಿಗೆ ಸಂಪೂರ್ಣ ಆರೋಗ್ಯವನ್ನು ಗ್ಯಾರಂಟಿ ನೀಡುವ ಬೆಳ್ಳುಳ್ಳಿಯಿಂದ ಚಟ್ನಿಪುಡಿ ತಯಾರಿಸುವ ವಿಧಾನ ನೋಡೋಣ. ಇದರ ವಾಸನೆ ಅನೇಕರಿಗಾಗಲಿಕ್ಕಿಲ್ಲ. ಆದರೆ ನೆನಪಿಡಿ, ಈ ಚಟ್ನಿಪುಡಿಯನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ವೈದ್ಯರಲ್ಲಿಗೆ ಮೇಲಿಂದ ಮೇಲೆ ಹೋಗುವ ತಾಪತ್ರಯವಂತೂ ಖಂಡಿತ ತಪ್ಪುತ್ತದೆ. ರೋಗನಿರೋಧಕ ಶಕ್ತಿ ವರ್ಧಿಸುವ ಬೆಳ್ಳುಳ್ಳಿ ಹೃದಯವನ್ನು ದಿವಿನಾಗಿಟ್ಟಿರುತ್ತದೆ.

* ಸುನಂದ ಅರುಣಕುಮಾರ್ ಗೋಸಿ, ಬೆಂಗಳೂರು

ಬೆಳ್ಳುಳ್ಳಿ ಚಟ್ನಿಪುಡಿ

ಬೇಕಾಗುವ ಸಾಮಗ್ರಿಗಳು :

ಬಿಡಿಸಿದ ಬೆಳ್ಳುಳ್ಳಿ ಎಸಳು - 30
ಬ್ಯಾಡಗಿ ಒಣಮೆಣಸಿನಕಾಯಿ - 20
ಹುಣಸೇಹಣ್ಣು - ಬೆಟ್ಟದ ನೆಲ್ಲಿಕಾಯಿ ಗಾತ್ರ
ಒಣಕೊಬ್ಬರಿ - 1/4 ಕಪ್
ಜೀರಿಗೆ - 2 ಸ್ಪೂನ್
ಕರಿಬೇವು - ಸ್ವಲ್ಪ
ಮೆಂತೆ - 10 ಕಾಳು
ಪುದೀನ - ಸ್ವಲ್ಪ
ರುಚಿಗೆ ತಕ್ಕ ಉಪ್ಪು.

ಮಾಡುವ ವಿಧಾನ :

ಮೊದಲಿಗೆ ಒಣಮೆಣಸಿನಕಾಯಿ, ಒಣಕೊಬ್ಬರಿ, ಕರಿಬೇವು, ಮೆಂತೆ ಹಾಗು ಪುದೀನವನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ನಂತರ ಮಿಕ್ಸಿ ಜಾರಿಗೆ ಒಣಕೊಬ್ಬರಿ, ಒಣಮೆಣಸಿನಕಾಯಿ, ಬೆಳ್ಳುಳ್ಳಿ, ಕರಿಬೇವು, ಜೀರಿಗೆ, ಮೆಂತೆ, ಹುಣಸೇಹಣ್ಣು, ಪುದೀನ, ಉಪ್ಪು ಎಲ್ಲಾ ಹಾಕಿ ತರಿ ತರಿಯಾಗಿ ಪುಡಿ ಮಾಡಿದರೆ ಬೆಳ್ಳುಳ್ಳಿ ಚಟ್ನಿಪುಡಿ ರೆಡಿ.

Story first published: Thursday, February 4, 2010, 18:25 [IST]
X
Desktop Bottom Promotion