For Quick Alerts
ALLOW NOTIFICATIONS  
For Daily Alerts

ಬಕ್ರೀದ್ ವಿಶೇಷ: ಘಮ್ಮೆನ್ನುವ ಪೆಪ್ಪರ್ ಮಟನ್ ರೆಸಿಪಿ

By Arshad
|

ಬಕ್ರೀದ್ ಹಬ್ಬದ ಈ ಶುಭ ಸಂದರ್ಭದಲ್ಲಿ ಮುಸ್ಲಿಂ ಕುಟುಂಬದವರು ಸಾಮಾನ್ಯವಾಗಿ ಕುರಿಮಾಂಸದ ಅಡುಗೆಯನ್ನೇ ಮಾಡುತ್ತಾರೆ. ಹಾಗಾಗಿ ನಿಮ್ಮ ಅತಿಥಿಗಳ ಮನಗೆಲ್ಲಲು ಎಂದಿಗೂ ತಯಾರಿಸುವ ಅದೇ ಹಳೆಯ ರುಚಿಗಿಂತ ಕೊಂಚ ಭಿನ್ನವಾದ ರುಚಿಯ ಕುರಿಮಾಂಸದ ಖಾದ್ಯವನ್ನೇಕೆ ಈ ವರ್ಷ ನೀವು ಮಾಡಬಾರದು? ಹಬ್ಬದ ಮಧ್ಯಾಹ್ನ ಅಥವಾ ರಾತ್ರಿಯೂಟಕ್ಕಾಗಿ ಈ ರುಚಿಕರ ಮತ್ತು ಕೊಂಚ ಖಾರವಾದ ಪೆಪ್ಪರ್ ಮಟನ್ ಖಾದ್ಯವನ್ನು ಮಾಡಿನೋಡಿ.

ಈ ಖಾದ್ಯದಲ್ಲಿ ಪ್ರಮುಖವಾಗಿ ಕಾಳುಮೆಣಸನ್ನು ಬಳಸಲಾಗುವುದರಿಂದ ಇದನ್ನು ರೊಟ್ಟಿಯೊಡನೆ ತಿನ್ನುವಾಗ ಅತ್ಯುತ್ತಮವಾದ ರುಚಿಯನ್ನು ನೀಡುತ್ತದೆ. ಅನ್ನದೊಡನೆ ಕಲಸಿಕೊಂಡು ತಿನ್ನಬಹುದಾದರೂ ಇದರ ಸಾರು ಬಹಳ ದಟ್ಟನಿರುವುದರಿಂದ ಹೆಚ್ಚಿನ ಪ್ರಮಾಣದ ಅಗತ್ಯವಿದೆ. ಕಾಳುಮೆಣಸನ್ನು ಪ್ರಮುಖವಾಗಿ ಬಳಸಿರುವ ಕಾರಣ ಊಟದ ಬಳಿಕ ಕೊಂಚ ಮೊಸರನ್ನು ಸೇವಿಸುವುದು ಅಗತ್ಯ. ಬನ್ನಿ, ತಿಂದಷ್ಟೂ ನಾಲಿಗೆ ಇನ್ನೂ ಬೇಕು ಎನ್ನಿಸುವಂತೆ ಮಾಡುವ ಪೆಪ್ಪರ್ ಮಟನ್ ಮಾಡುವ ಬಗೆಯನ್ನು ನೋಡೋಣ: ಹರಿಯಾಲಿ ಮಟನ್-ಬಕ್ರೀದ್ ಸ್ಪೆಷಲ್

Spicy Pepper Mutton Recipe: Bakrid

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಮೂವತ್ತು ನಿಮಿಷಗಳು
*ತಯಾರಿಕಾ ಸಮಯ: ನಲವತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಮಟನ್ - ಒಂದು ಕೇಜಿ (ಚಿಕ್ಕ ತುಂಡುಗಳಾಗಿಸಿದ್ದು)
*ಒಣಮೆಣಸಿನ ಪುಡಿ: ಒಂದು ದೊಡ್ಡ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಒಂದೂವರೆ ಚಮಚ)
*ಗರಂ ಮಸಾಲಾ ಪುಡಿ : ಒಂದು ದೊಡ್ಡ ಚಮಚ
*ಬೇವಿನ ಎಲೆಗಳು : ಒಂದು ಎಸಳು
*ಅರಿಶಿನ ಪುಡಿ: ಅರ್ಧ ದೊಡ್ಡಚಮಚ
*ಹಸಿಮೆಣಸು : ನಾಲ್ಕು (ಉದ್ದಕ್ಕೆ ಸೀಳಿದ್ದು)
*ಹಸಿಶುಂಠಿಯ ಪೇಸ್ಟ್: ಒಂದು ದೊಡ್ಡಚಮಚ
*ಸಾಸಿವೆ: ಒಂದು ದೊಡ್ಡಚಮಚ
*ಕಾಳುಮೆಣಸು: ಮೂರು ದೊಡ್ಡಚಮಚ
*ಕೊತ್ತಂಬರಿ ಪುಡಿ: ಒಂದು ದೊಡ್ಡಚಮಚ
*ಶುಂಠಿ-ಬೆಳ್ಳುಳ್ಳಿ ಪೇಸ್ಟ್: ಅರ್ಧ ದೊಡ್ಡಚಮಚ
*ಎಣ್ಣೆ : ಒಂದು ದೊಡ್ಡಚಮಚ
*ಉಪ್ಪು: ರುಚಿಗನುಸಾರ

ವಿಧಾನ:
1) ಮಾಂಸದ ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೀರೆಲ್ಲಾ ಹೊರಹೋಗುವಂತೆ ಬಸಿಯಿರಿ. ಇದಕ್ಕೆ ಅರ್ಧದಷ್ಟು ಅರಿಶಿನದ ಪುಡಿ ಹಚ್ಚಿ ಬದಿಗಿಡಿ.
2) ಸುಮಾರು ಹದಿನೈದು ನಿಮಿಷದ ಬಳಿಕ ಪ್ರೆಶರ್ ಕುಕ್ಕರ್ ನಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಮಾಡಿ. ಬಿಸಿಯಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಳಿದ ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಚಿಕ್ಕ ಉರಿಯಲ್ಲಿ ನಡುನಡುವೆ ತಿರುವುತ್ತಾ ಹುರಿಯಿರಿ.
3) ಕೊಂಚ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಮಾಂಸದ ತುಂಡುಗಳನ್ನು ಹಾಕಿ ಕೆಲಕಾಲ ಹುರಿದು ಬಳಿಕ ಮುಚ್ಚಳ ಮುಚ್ಚಿ ಅತಿ ಕಡಿಮೆ ಉರಿಯಲ್ಲಿ ಸುಮಾರು ಹದಿನೈದು ನಿಮಿಷ ಬೇಯಲು ಬಿಡಿ.
4) ಇನ್ನೊಂದು ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ. ಬಳಿಕ ಬೇವಿನ ಎಲೆ, ಶುಂಠಿ ಪೇಸ್ಟ್, ಹಸಿಮೆಣಸು ಹಾಕಿ ಕಂದು ಬಣ್ಣವಾಗುವವರೆಗೆ ಹುರಿಯಿರಿ.
5) ಬಳಿಕ ಗರಂ ಮಸಾಲ ಪುಡಿ, ಕಾಳುಮೆಣಸು ಹಾಕಿ ಹುರಿಯಿರಿ.
6) ನಂತರ ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿದ್ದ ಮಾಂಸದ ತುಂಡುಗಳನ್ನು ಇದಕ್ಕೆ ಹಾಕಿ ತಿರುವಿ
7) ಚಿಕ್ಕ ಉರಿಯಲ್ಲಿಯೇ ನಡುನಡುವೆ ತಿರುವುತ್ತಾ ಮಾಂಸ ಬೇಯಲು ಬಿಡಿ. ಹತ್ತು ನಿಮಿಷದ ಬಳಿಕ ಉರಿಯನ್ನು ನಂದಿಸಿ.
8) ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ ಮೇಲೆ ಸಿಂಪಡಿಸಿ ಬಿಸಿಬಿಸಿಯಿದ್ದಂತೆಯೇ ಅತಿಥಿಗಳಿಗೆ ಬಡಿಸಿ. ಈ ರುಚಿಕರ ಖಾದ್ಯ ನಿಮಗೆ ಹೇಗೆನಿಸಿತು ಎಂಬುದನ್ನು ನಮಗೆ ತಿಳಿಸಲು ಮರೆಯದಿರಿ

English summary

Spicy Pepper Mutton Recipe: Bakrid

On the occasion of Bakrid, one of the best meals you can treat yourself to in a Muslim home is mutton dish. On this lovely festival, mutton is one of the most important meats which is cooked in every Muslim house. To embrace the Bakrid festival, here is one of the best recipes for you to try out this afternoon for lunch. Take a look at this black pepper mutton gravy dish. It will leave your mouth watering and your tummy wanting for more.
X
Desktop Bottom Promotion