For Quick Alerts
ALLOW NOTIFICATIONS  
For Daily Alerts

ಅಪ್ಪಂದಿರ ದಿನದ ಸಂಭ್ರಮಾಚರಣೆಗೆ ವಿಶಿಷ್ಟ ಸ್ವಾದಿಷ್ಟ ಕೋಳಿ ಖಾದ್ಯ!

|

ತಂದೆಯರ ದಿನದಂದು ನಿಮ್ಮ ಅಪ್ಪನ ಮನಗೆಲ್ಲಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ ಅವರಿಗೆ ಇಷ್ಟವಾಗುವ ರೆಸಿಪಿಯನ್ನು ನೀವು ಮಾಡಿಕೊಟ್ಟು ಅವರಿಂದ ಶಹಬ್ಬಾಷ್ ಗಿರಿಯನ್ನು ನೀವು ಪಡೆಯಲೇಬೇಕು. ಹಾಗಿದ್ದರೆ ಅಪ್ಪನಿಗೆ ಪ್ರಿಯವಾಗುವಂತೆ ರೆಸಿಪಿ ತಯಾರಿಸುವುದು ಹೇಗೆಂದು ಚಿಂತಿತರಾಗಿರುವಿರಾ? ಚಿಂತಿಸದಿರಿ ನಿಮ್ಮ ಸಹಾಯಕ್ಕೆ ನಾವಿದ್ದೇವೆ.

ಇಂದು, ನಿಮ್ಮ ತಂದೆಗಾಗಿ ನೀವು ವಿಶೇಷವಾಗಿ ತಯಾರು ಮಾಡಬಹುದಾದ ಸರಳ ಚಿಕನ್ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಇದು ನಿಮ್ಮನ್ನು ಹೆಚ್ಚು ಕಷ್ಟಪಡಿಸುವುದಿಲ್ಲ ಮತ್ತು ತಯಾರಿಸಲು ತುಂಬಾ ಸರಳವಾಗಿದೆ.

Simple Southern Chicken Recipe For Father's Day

ಕಡಿಮೆ ಸಾಂಬಾರು ಪದಾರ್ಥಗಳನ್ನು ಬಳಸಿ ತಯಾರಿಸಲಾಗುವ ಈ ದಕ್ಷಿಣದ ಚಿಕನ್ ರೆಸಿಪಿ ನಿಮ್ಮ ನಾಲಗೆಗೆ ಸುಖ ಭೋಜನವನ್ನು ಉಣಬಡಿಸುವುದು ಖಂಡಿತ. ಇದರ ಸುವಾಸನೆಯಂತೂ ನಿಮ್ಮ ಮನಕ್ಕೆ ತಂಪೆರೆಯಲಿದ್ದು ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಹಾಗಿದ್ದರೆ ಈ ಸರಳವಾದ ದಕ್ಷಿಣದ ಚಿಕನ್ ರೆಸಿಪಿಯನ್ನು ಟ್ರೈ ಮಾಡಿ ಮತ್ತು ನಿಮ್ಮ ತಂದೆಯ ಮನ ಗೆಲ್ಲಿ.

ಫಾದರ್ಸ್ ಡೇ ಸ್ಪೆಶಲ್ ಡಿಶ್ ಮಾ ಕೀ ದಾಲ್ ರೆಸಿಪಿ

ಪ್ರಮಾಣ: 3
ಸಿದ್ಧತಾ ಸಮಯ: 30 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಸಾಮಾಗ್ರಿಗಳು
*ಚಿಕನ್ - 1ಕೆಜಿ (ಸಣ್ಣದಾಗಿ ತುಂಡರಿಸಿರುವಂಥದ್ದು)
*ಈರುಳ್ಳಿ - 4 (ಕತ್ತರಿಸಿದ್ದು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್
*ಹಸಿಮೆಣಸು - 3
*ಉಪ್ಪು - ರುಚಿಗೆ ತಕ್ಕಷ್ಟು
*ಅರಶಿನ ಹುಡಿ - 2 ಸ್ಪೂನ್
*ಮೆಣಸಿನ ಹುಡಿ - 1 ಸ್ಪೂನ್
*ಗರಂ ಮಸಾಲಾ ಪೌಡರ್ - 1 ಸ್ಪೂನ್
*ಸಾಸಿವೆ - 1 ಸ್ಪೂನ್
*ಒಣ ಮೆಣಸು - 2
*ಕರಿಬೇವಿನೆಲೆ - 8
*ಎಣ್ಣೆ - 3 ಸ್ಪೂನ್

ಮಾಡುವ ವಿಧಾನ
1. ನೀರಿನಲ್ಲಿ ಚೆನ್ನಾಗಿ ಚಿಕನ್ ತುಂಡುಗಳನ್ನು ತೊಳೆದುಕೊಳ್ಳಿ ಚಾಕುವಿನಿಂದ ಸಣ್ಣದಾಗಿ ತುಂಡುಗಳನ್ನಾಗಿ ಮಾಡಿಕೊಳ್ಳಿ.
2. ಇನ್ನು ಸ್ವಲ್ಪ ಸಮಯ ಉಪ್ಪಿನಲ್ಲಿ ಚಿಕನ್ ತುಂಡುಗಳನ್ನು ಮುಳುಗಿಸಿಡಿ, ಇದಕ್ಕೆ ಒಂದು ಸ್ಪೂನ್ ಅರಶಿನ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಇದನ್ನು 30 ನಿಮಿಷಗಳ ಕಾಲ ಹಾಗೆಯೇ ಇರಿಸಿ.
3. ಅದರ ನಂತರ, ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಇದಕ್ಕೆ ಸಾಸಿವೆ, ಕರಿಬೇವಿನೆಲೆ ಮತ್ತು ಒಣಮೆಣಸುಗಳನ್ನು ಸೇರಿಸಿ. ಸ್ವಲ್ಪ ಸೆಕೆಂಡುಗಳ ಸೌಟಿನಲ್ಲಿ ಮಿಶ್ರ ಮಾಡಿಕೊಳ್ಳಿ.
4. ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ 4-5 ನಿಮಿಷಗಳ ಕಾಲ ಫ್ರೈ ಮಾಡಿ.
5. ಈಗ ಚಿಕನ್ ತುಂಡುಗಳನ್ನು ಸೇರಿಸಿ ಮತ್ತು 5-6 ನಿಮಿಷಗಳ ಕಾಲ ಬೇಯಿಸಿ.
6. ಅರಶಿನ ಹುಡಿ, ಉಪ್ಪು, ಮೆಣಸಿನ ಹುಡಿ, ಗರಂ ಮಸಾಲಾ ಹುಡಿಯನ್ನು ಸೇರಿಸಿ ಮತ್ತು 4-5 ನಿಮಿಷಗಳ ಕಾಲ ಬೇಯಿಸಿ.
7. ಉರಿಯನ್ನು ಕಡಿಮೆ ಮಾಡಿಕೊಳ್ಳಿ ಮತ್ತು ಪ್ಯಾನ್‌ಗೆ ಒಂದು ಕಪ್ ನೀರು ಹಾಕಿ. ಪ್ಯಾನ್ ಅನ್ನು ಮುಚ್ಚಿ ಮತ್ತು 10 ನಿಮಿಷಗಳ ಕಾಲ ಬೇಯಿಸಿ.
8. ಮುಚ್ಚಳ ತೆರೆಯಿರಿ ಮತ್ತು ಸ್ವಲ್ಪ ನೀರು ಚಿಮುಕಿಸಿ. ಚಿಕನ್ ಅನ್ನು ಸೌಟಿನಿಂದ ಕಲಸುತ್ತಿರಿ.
9. ಚಿಕನ್ ಚೆನ್ನಾಗಿ ಬೇಯುವವರೆಗೆ 15 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಇದನ್ನು ಬೇಯಿಸಿ.
10.ಪೂರ್ತಿ ಬೆಂದ ನಂತರ ಉರಿಯನ್ನು ನಿಲ್ಲಿಸಿ ಮತ್ತು ಬಡಿಸಿ.
ರುಚಿಕರವಾದ ಹಾಗೂ ಸರಳವಾಗಿ ಮಾಡಬಹುದು ಚಿಕನ್ ರೆಸಿಪಿ ಸವಿಯಲು ಸಿದ್ಧವಾಗಿದೆ. ಬಿಸಿ ಅನ್ನದೊಂದಿಗೆ ತಂದೆಯಂದಿರ ದಿನದ ಈ ವಿಶೇಷ ಖಾದ್ಯವನ್ನು ಸವಿಯಿರಿ.

English summary

Simple Southern Chicken Recipe For Father's Day

Today, we have a simple yet a delightful chicken recipe that you can try on Father's Day. This recipe is not much of a fuss and you do not need to be an expert to cook this delicious chicken recipe.
X
Desktop Bottom Promotion