Just In
- 1 hr ago
ಆಫ್ರಿಕಾ ಸುಂದರಿ ಮುಡಿಗೇರಿದ 2019 ವಿಶ್ವ ಸುಂದರಿ ಪಟ್ಟ
- 2 hrs ago
ಹೇರ್ ಡೈ ಬಳಸಿದರೆ ಬರುವ 6 ಅಪಾಯಕಾರಿ ಕಾಯಿಲೆಗಳು
- 3 hrs ago
ಪಾರ್ಟಿ ಲುಕ್ಗೆ ಶಿಮ್ಮರಿ ಐ ಮೇಕಪ್ ಹೀಗಿರಲಿ
- 9 hrs ago
ಸೋಮವಾರದ ದಿನ ಭವಿಷ್ಯ (9-12-2019)
Don't Miss
- Sports
ತನ್ನ 400* ದಾಖಲೆ ಮುರಿಯಲು ಈ ಇಬ್ಬರು ಭಾರತೀಯರಿಂದ ಸಾಧ್ಯ; ಬ್ರ್ಯಾನ್ ಲಾರಾ
- News
ಗ್ರಾಹಕರ ಕೂಗಿಗೆ ಸ್ಪಂದಿಸಿದ ಏರ್ ಟೆಲ್, ವೋಡಾಫೋನ್
- Automobiles
ಬರೋಬ್ಬರಿ 10 ತಿಂಗಳ ನಂತರ ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಹೆಚ್ಚಳ
- Finance
ಮಾರುಕಟ್ಟೆಯಲ್ಲಿ ಈರುಳ್ಳಿ ಡಬಲ್ ಸೆಂಚುರಿ; ಕೌನ್ ಬನೇಗಾ ಕೋಟ್ಯಧಿಪತಿ?
- Education
ECIL Recruitment 2019: 64 ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ವಾಟ್ಸಪ್ ಚಾಟ್ ಅನ್ನು PDF ಫಾರ್ಮೇಟ್ಗೆ ಕನ್ವರ್ಟ್ ಮಾಡುವುದು ಹೇಗೆ ಗೊತ್ತಾ?
- Movies
28 ದಿನದ ಬಳಿಕ ಆಸ್ಪತ್ರೆಯಿಂದ ಮನೆಗೆ ಮರಳಿದ ಲತಾ ಮಂಗೇಶ್ಕರ್
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ರಂಜಾನ್ ಸ್ಪೆಷಲ್: ರುಚಿ ರುಚಿಯಾದ ಚಿಕನ್ ರೆಸಿಪಿ ರೆಡಿ!
ಅತಿಥಿ ಸತ್ಕಾರವನ್ನು ರುಚಿಕಟ್ಟಾದ ಆಹಾರದ ಮೂಲಕ ನೆರವೇರಿಸುವ ಪದ್ಧತಿ ಬಹಳ ಪ್ರಾಚೀನವಾದುದು. ಉತ್ತಮ ಅಡುಗೆಯನ್ನು ಯಾರೇ ಮಾಡಲಿ, ಇದನ್ನು ವಿಶ್ವವೇ ಸ್ವೀಕರಿಸುತ್ತದೆ. ಇದಕ್ಕೆ ಅಪ್ಪಟ ಉದಾಹರಣೆ ಎಂದರೆ ಬಿರಿಯಾನಿ. ಮೊಗಲರ ಕಾಲದಲ್ಲಿ ಕೇವಲ ರಾಜಮಹಾರಾಜರಿಗೆ ಮಾತ್ರ ಮೀಸಲಾಗಿದ್ದು ಈ ಬಿರಿಯಾನಿ ಇಂದು ವಿಶ್ವವ್ಯಾಪಿಯಾಗಿದ್ದು ಸಸ್ಯಾಹಾರಿಗಳಿಗೂ ಸೂಕ್ತವಾದ ತರಕಾರಿಯ ಬಿರಿಯಾನಿ ಇಂದು ಲಭ್ಯವಿದೆ. ಎಲ್ಲರೊಡನೆ ಹಂಚಿಕೊಂಡು ತಿನ್ನುವ ಸಂಭ್ರಮವನ್ನು ರುಚಿಯಾದ ಅಡುಗೆ ಇನ್ನಷ್ಟು ಹೆಚ್ಚಿಸುತ್ತದೆ.
ಮುಸ್ಲಿಮರಿಗೆ ಪವಿತ್ರವಾದ ಹಬ್ಬಗಳಲ್ಲೊಂದಾದ ರಂಜಾನ್ ಆಚರಿಸಲು ಈಗಾಗಲೇ ಮುಸ್ಲಿಂ ಬಾಂಧವರ ಮನೆಯಲ್ಲಿ ತಯಾರಿ ಶುರುವಾಗಿ ಬಿಟ್ಟಿದೆ. ಈ ಸಂಭ್ರಮದ ಕ್ಷಣಗಳನ್ನು ಸ್ವಾದಿಷ್ಟ ಭೋಜನವಿಲ್ಲದೇ ಆಚರಿಸುವುದು ಹೇಗೆ? ಇದುವರೆಗೆ ನಿಮ್ಮ ಮನೆಯಲ್ಲಿ ಸಾಂಪ್ರಾದಾಯಿಕವಾಗಿ ತಯಾರಿಸಿಕೊಂಡು ಬರುತ್ತಿದ್ದ ಒಂದೇ ರೀತಿಯ ಅಡುಗೆಯನ್ನು ಈ ವರ್ಷ ಕೊಂಚ ಬದಲಿಸಿ ಭಾರತದ ಇತರ ಪ್ರಾಂತಗಳಲ್ಲಿನ ಜನರು ಸಾಂಪ್ರಾದಾಯಿಕವಾಗಿ ಆಚರಿಸಿಕೊಂದು ಬರುತ್ತಿರುವ ಅಡುಗೆಯನ್ನು ಮಾಡುವ ಮೂಲಕ ಆಚರಿಸಿದರೆ ಹೇಗೆ?
ಅಂತೆಯೇ ನಿಮ್ಮ ಮನೆಯ ಅಡುಗೆಯನ್ನೂ ಬೇರೆ ಮನೆಯಲ್ಲಿ ತಯಾರಿಸಿದರೆ ಇದರಿಂದ ಹಂಚಿಕೊಳ್ಳಬಹುದಾದ ಸಂತೋಷಕ್ಕೆ ಎಣೆಯೇ ಇಲ್ಲ! ಬನ್ನಿ, ಇಂತಹ ಕೆಲವು ಸ್ವಾದಿಷ್ಟ ಮಾಂಸಾಹಾರಿ ಅಡುಗೆಗಳನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಕೆಳಗಿನ ಈ ಲೇಖನದ ಮೂಲಕ ಹಂಚಿಕೊಳ್ಳಲು ಹರ್ಷಿಸುತ್ತದೆ, ಮುಂದೆ ಓದಿ ...

ಆಂಧ್ರ ಶೈಲಿಯ ದಮ್ ಬಿರಿಯಾನಿ
ದಮ್ ಬಿರಿಯಾನಿ ಸಸ್ಯಾಹಾರ ಊಟದಲ್ಲಿ ಹುರಿಗಡ್ಲೆಯ ಪುಡಿಯನ್ನು ಬೆರೆಸಿ ತಿನ್ನುವ ಆಂಧ್ರದ ಜನರಿಗೆ ಮಾಂಸಾಹಾರದಲ್ಲಿ ದಂ ಬಿರಿಯಾನಿಯೇ ಇಷ್ಟ. ದಂ ಎಂದು ಏಕೆ ಕರೆಯಲಾಗುತ್ತದೆ ಎಂದರೆ ಅಕ್ಕಿಯನ್ನು ಮುಕ್ಕಾಲು ಪಾಲು ನೀರಿನಲ್ಲಿ ಬೇಯಿಸಿ ಇತರ ಮಸಾಲೆಯೊಂದಿಗೆ ಉಳಿದ ಕಾಲು ಭಾಗವನ್ನು ಕೇವಲ ಹಬೆಯಲ್ಲಿ ಕೆಲವು ಘಂಟೆಗಳ ಕಾಲ ಅತಿ ಚಿಕ್ಕ ಉರಿಯಲ್ಲಿ ಬೇಯಿಸಲಾಗುತ್ತದೆ. ಈ ಅವಧಿಯಲ್ಲಿ ಅಕ್ಕಿ ಮಸಾಲೆಯ ರುಚಿಯನ್ನು ಹೀರಿಕೊಂಡು ಪೂರ್ಣವಾಗಿ ಬೆಂದಿರುತ್ತದೆ. ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬ ಒಂದೇ ಕಾರಣಕ್ಕೆ ಇದನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ಈ ಈದ್ ಕೂಡಾ ಅಂತಹ ಒಂದು ವಿಶೇಷ ಸಂದರ್ಭವಾಗಿದೆ.
ಘಂ ಎನ್ನುತ್ತೆ ಹೈದರಾಬಾದ್ ದಮ್ ಬಿರಿಯಾನಿ

ಆಹಾ, ಚಿಕನ್ ಬಿರಿಯಾನಿ, ಬಾಯಲ್ಲಿ ನೀರೂರುತ್ತಿದೆ!
ಹೆಸರು ಕೇಳಿದರೇ ಸಾಕು ತಕ್ಷಣ ತಿನ್ನುವ ಬಯಕೆಯಾಗುತ್ತದೆ...! ಚಿಕನ್ ಬಿರಿಯಾನಿ ಎಂತಹ ಖಾದ್ಯವೆಂದರೆ, ಎಂಟರಿಂದ ಹದಿನೆಂಟು ವಯಸ್ಸಿನ ಎಲ್ಲರನ್ನು ಆಕರ್ಷಿಸುತ್ತದೆ. ಮದುವೆ ಸಮಾರಂಭವಾಗಿರಬಹುದು, ಈದ್ನ ಸಂಭ್ರಮವಿರಬಹುದು ಅಥವಾ ಇನ್ಯಾವುದೇ ಸಂದರ್ಭಗಳಲ್ಲಿ ಬಿರಿಯಾನಿ ಇದ್ದರೆ ಸಾಕು ಜನರಿಗೆ ಬೇರೇನು ಬೇಕಿಲ್ಲ..!
ಆಹಾ, ಚಿಕನ್ ಬಿರಿಯಾನಿ, ಬಾಯಲ್ಲಿ ನೀರೂರುತ್ತಿದೆ!

'ಚಿಲ್ಲಿ ಚಿಕನ್' ಅದೇನು ರುಚಿ ಅಂತೀರಾ?
ಚೀನಾದಲ್ಲಿ ಪ್ರಾರಂಭವಾಗಿ ಬಹಳೇ ವರ್ಷಗಳೇ ಆಗಿದ್ದರೂ ಇತ್ತೀಚೆಗೆ ಭಾರತಕ್ಕೆ ಬಂದ ಬಳಿಕ ಶೀಘ್ರವೇ ಹೆಚ್ಚಿನ ಜನಪ್ರಿಯತೆ ಪಡೆದ ಚೈನೀಸ್ ಖಾದ್ಯಗಳಲ್ಲಿ ಪ್ರಮುಖವಾದುದು ಚಿಲ್ಲಿ ಚಿಕನ್. ಇದನ್ನು ತಯಾರಿಸುವುದು ಸುಲಭವೂ, ಕಡಿಮೆ ಸಮಯವೂ ತಗಲುವುದು ಮಾತ್ರವಲ್ಲದೇ ರುಚಿಯಲ್ಲಿಯೂ ಸಕತ್ ಆಗಿದೆ...
ವಾವ್! 'ಚಿಲ್ಲಿ ಚಿಕನ್', ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

ಆಲೂ ಚಿಕನ್ ಬಿರಿಯಾನಿ
ಇಫ್ತಾರ್ಗೆ ಆಗಮಿಸುವ ಅತಿಥಿಗಳನ್ನು ಸತ್ಕರಿಸಲು ಹಲವು ಬಗೆಯ ಮತ್ತು ಪೌಷ್ಟಿಕವಾದ ಹೊಸರುಚಿಗಳನ್ನು ಆಯ್ಕೆ ಮಾಡುವುದೇ ಗೃಹಿಣಿಯರಿಗೆ ಒಂದು ಸವಾಲಿನ ವಿಷಯವಾಗಿದೆ. ಈ ಸವಾಲನ್ನು ಆಲೂ ಚಿಕನ್ ಬಿರಿಯಾನಿ ಸಮರ್ಥವಾಗಿ ಎದುರಿಸುತ್ತದೆ. ಇದು ಅತ್ಯಂತ ಪೌಷ್ಟಿಕವಾಗಿದ್ದು ಇಡಿಯ ದಿನ ಚಟುವಟಿಕೆಯಿಂದಿರಲು ನೆರವಾಗುತ್ತದೆ.
ರಂಜಾನ್ ಹಬ್ಬಕ್ಕೆ 'ಆಲೂ ಚಿಕನ್ ಬಿರಿಯಾನಿ' ಮಾಡಿ ನೋಡಿ!

ಗ್ರೀನ್ ಚಿಲ್ಲಿ ಚಿಕನ್ ರೆಸಿಪಿ
ರಂಜಾನ್ ಹಬ್ಬದ ಸಮಯದಲ್ಲಿ ಹೊಸರುಚಿಯ ಅಡುಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ . ಗ್ರೀನ್ ಚಿಲ್ಲಿ ಚಿಕನ್ ರೆಸಿಪಿಯು ಕೂಡ ಇಂತಹದ್ದೇ ಒಂದು ಸ್ವಾದಿಷ್ಟ ಅಡುಗೆಯಾಗಿದ್ದು ಅತಿಥಿಗಳ ಮೆಚ್ಚುಗೆಯನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ...