Just In
- 3 min ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 47 min ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 2 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- 3 hrs ago ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
Don't Miss
- Movies Shrirasthu Shubhamasthu: ಮಹೇಶನ ಎದುರು ಬಯಲಾಯಿತು ಶಾರ್ವರಿ ಎರಡನೇ ಮುಖ; ಮುಂದೇನು?
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾರಾಂತ್ಯದ ರಜಾ- ಮನೆಯಲ್ಲಿಯೇ ಮಾಡಿ 'ಮಟನ್' ಮಜಾ!
ಮಟನ್ ಗ್ರೇವಿಯನ್ನು ತಯಾರಿಸಲು ಹೆಚ್ಚಿನ ಸಾಮಾಗ್ರಿಗಳೇನೂ ಬೇಕಾಗಿಲ್ಲ, ಅಡುಗೆಮನೆಯಲ್ಲಿರುವ ಸಾಮಾಗ್ರಿಗಳೇ ಸಾಕು.ಆದರೆ ಇದನ್ನು ತಯಾರಿಸಿ ಬಡಿಸಿದ ಬಳಿಕ ಮಾತ್ರ ಎಷ್ಟು ಬೇಗನೇ ಖಾಲಿಯಾಗುತ್ತದೆ ಎಂದರೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ!
ಇಂದು ಮಾಂಸಾಹಾರಿಗಳಿಗೆ ವಿಶೇಷವಾಗಿ ಮಸಾಲೆಯುಕ್ತ ಖಾದ್ಯವೊಂದನ್ನು ಪರಿಚಯಿಸುತ್ತಿದ್ದೇವೆ. ಸುಲಭವಾಗಿ ತಯಾರಿಸಬಹುದಾದ ಈ ಮಸಾಲೆಯುಕ್ತ ಮಟನ್ ಗ್ರೇವಿ ಕ್ಷಿಪ್ರವಾಗಿ ಬಡಿಸಬಹುದು.
ಸಾಮಾನ್ಯವಾಗಿ ಮಟನ್ ಬೇಯಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಬೇಗನೇ ತಯಾರಿಸಲು ಹೋದರೆ ರುಚಿ ಬರುವುದಿಲ್ಲ. ಆದರೆ ಇದಕ್ಕೆ ಅಪವಾದವೆಂಬಂತೆ ಈ ವಿಧಾನ ಸುಲಭ, ಕಡಿಮೆ ಸಮಯದಲ್ಲಿ ತಯಾರಿಸುವಂತಹದ್ದಾಗಿದ್ದು ರುಚಿಯೂ ಅಪ್ರತಿಮವಾಗಿದೆ. ಅಲ್ಲದೇ ಇದನ್ನು ತಯಾರಿಸಲು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿರುವ ಸಾಮಾಗ್ರಿಗಳೇ ಸಾಕು.
ಒಮ್ಮೆ ಇದು ತಯಾರಾಗಿ ಇದರ ಘಮ್ಮೆನ್ನುವ ಸುವಾಸನೆ ಗಾಳಿಯಲ್ಲಿ ಹರಡಿತೋ, ಮನೆಯ ಸದಸ್ಯರೆಲ್ಲರೂ ಕರೆಯದೇ ಊಟದ ಕೋಣೆಗೆ ಬಂದು ಮೊದಲೇ ಕುಳಿತುಕೊಳ್ಳುವ ಸಂಭವ ಹೆಚ್ಚು. ಇದನ್ನು ಅನ್ನ, ಚಪಾತಿ, ರೋಟಿ, ಪರೋಟ ಮೊದಲಾದವುಗಳ ಜೊತೆಗೆ ಸೇವಿಸಬಹುದು. ಬನ್ನಿ, ಈ ಖಾದ್ಯ ತಯಾರಿಸುವ ಬಗೆಯನ್ನು ಕಲಿಯೋಣ: ಡಾಬಾ ಶೈಲಿಯಲ್ಲಿ ಮಟನ್ ಸಾರು
*ಪ್ರಮಾಣ:
ನಾಲ್ವರಿಗೆ,
ಒಂದು
ಹೊತ್ತಿಗಾಗುವಷ್ಟು
*ಸಿದ್ಧತಾ
ಸಮಯ:
ಇಪ್ಪತ್ತು
ನಿಮಿಷಗಳು
*ತಯಾರಿಕಾ
ಸಮಯ:
ನಲವತ್ತು
ನಿಮಿಷಗಳು
ಅಗತ್ಯವಿರುವ
ಸಾಮಾಗ್ರಿಗಳು
*ಕುರಿ
ಮಾಂಸ
-
1/2
ಕೇಜಿ
(ಚಿಕ್ಕ
ತುಂಡುಗಳಾಗಿಸಿದ್ದು)
*ಬೆಣ್ಣೆ
-
1/2
ಕಪ್
*ಗರಂ
ಮಸಾಲಾ
-
1
ಚಿಕ್ಕ
ಚಮಚ
*ಧನಿಯ
ಪುಡಿ
-
1
ಚಿಕ್ಕ
ಚಮಚ
*ಕೆಂಪು
ಮೆಣಸಿನ
ಪುಡಿ(ಬ್ಯಾಡಗಿ)
-
1
ಚಿಕ್ಕ
ಚಮಚ
(ಕಾಶ್ಮೀರಿ
ಚಿಲ್ಲಿ
ಆದರೆ
ಎರಡು
ಚಮಚ)
*ಹಸಿಶುಂಠಿ
ಮತ್ತು
ಬೆಳ್ಳುಳ್ಳಿ
ಪೇಸ್ಟ್
-
1
ಚಿಕ್ಕ
ಚಮಚ
*ಹಸಿಮೆಣಸು
-
5
ರಿಂದ
6
*ಈರುಳ್ಳಿ
(ಚಿಕ್ಕದಾಗಿ
ಹೆಚ್ಚಿದ್ದು)
-
1
ಕಪ್
*ಲಿಂಬೆ
ರಸ
-
1
ಚಿಕ್ಕ
ಚಮಚ
*ಎಣ್ಣೆ:
ಅಗತ್ಯಕ್ಕೆ
ತಕ್ಕಷ್ಟು
*ಉಪ್ಪು:
ರುಚಿಗನುಸಾರ
ನಾಟಿ
ಶೈಲಿಯಲ್ಲಿ
ಸ್ವಾದಿಷ್ಟ
ಮಟನ್
ಕರಿ
ವಿಧಾನ:
1)
ಒಂದು
ಪಾತ್ರೆಯಲ್ಲಿ
ಗರಂ
ಮಸಾಲಾ
ಪುಡಿ,
ಕೊತ್ತಂಬರಿಪುಡಿ
ಅಥವ
ಧನಿಯಾ
ಪುಡಿ
ಕೆಂಪು
ಮೆಣಸಿನ
ಪುಡಿ
ಮತ್ತು
ಹಸಿಶುಂಠಿ
ಮತ್ತು
ಬೆಳ್ಳುಳ್ಳಿ
ಪೇಸ್ಟ್
ಎಲ್ಲವನ್ನೂ
ಸೇರಿಸಿ
ಚೆನ್ನಾಗಿ
ಮಿಶ್ರಣ
ಮಾಡಿ.
2)
ಪ್ರೆಶರ್
ಕುಕ್ಕರ್
ಒಲೆಯ
ಮೇಲಿಟ್ಟು
ಮಧ್ಯಮ
ಉರಿಯಲ್ಲಿ
ಒಳಭಾಗ
ಒಣಗಿದ
ಬಳಿಕ
ಉರಿ
ಚಿಕ್ಕದಾಗಿಸಿ
ಇದರಲ್ಲಿ
ಬೆಣ್ಣೆ
ಹಾಕಿ.
3)
ಬೆಣ್ಣೆ
ಕರಗಿ
ಬಿಸಿಯಾದ
ಬಳಿಕ
ಈರುಳ್ಳಿ,
ಹಸಿಮೆಣಸು
ಹಾಕಿ
ಸುಮಾರು
ಕಂದು
ಬಣ್ಣ
ಬರುವಷ್ಟು
ಹುರಿಯಿರಿ.
4)
ಇದಕ್ಕೆ
ಮಾಂಸದ
ತುಂಡುಗಳನ್ನು
ಹಾಕಿ
ಚೆನ್ನಾಗಿ
ಬಾಡಿಸಿ.
5)
ಬಳಿಕ
ಮಿಶ್ರಣ
ಮಾಡಿರುವ
ಮಸಾಲೆಪುಡಿಗಳನ್ನು
ಸೇರಿಸಿ
ಚೆನ್ನಾಗಿ
ಕಲಕಿ.
6)
ಈ
ಮಿಶ್ರಣದಿಂದ
ಎಣ್ಣೆ
ಒಸರಲು
ಪ್ರಾರಂಭವಾದ
ಬಳಿಕ
ಉಪ್ಪು
ಮತ್ತು
ಕೊಂಚ
ನೀರು
ಸೇರಿಸಿ
ಮಿಶ್ರಣ
ಮಾಡಿ.
ಅನ್ನಕ್ಕೆ
ಬಳಸುವುದಾದರೆ
ಕೊಂಚ
ಹೆಚ್ಚಿನ
ನೀರು,
ರೊಟ್ಟಿ
ಚಪಾತಿಗಳಿಗೆ
ಕಡಿಮೆ
ನೀರು
ಮಿಶ್ರಣ
ಮಾಡಿ.
ಬಳಿಕ
ಲಿಂಬೆರಸ
ಸೇರಿಸಿ.
7)
ಈಗ
ಕುಕ್ಕರ್ನ
ಮುಚ್ಚಳ
ಮುಚ್ಚಿ
ಸುಮಾರು
ಐದರಿಂದ
ಆರು
ಸೀಟಿ
ಬರುವವರೆಗೆ
ಕುದಿಸಿ.
8)
ಬಳಿಕ
ಉರಿ
ಆರಿಸಿ
ಹಾಗೇ
ಕೊಂಚ
ಹೊತ್ತು
ತಣಿಯಲು
ಬಿಡಿ.
(ಒಂದು
ವೇಳೆ
ತಣಿಸುವಷ್ಟು
ಸಮಯಾವಕಾಶ
ಇಲ್ಲದಿದ್ದರೆ
ಎಂಟು
ಸೀಟಿಯವರೆಗೆ
ಕುದಿಸಿ
ಬಳಿಕ
ತಣ್ಣೀರಿನ
ಕೆಳಗೆ
ಸೀಟಿ
ಇರಿಸಿ
ತಕ್ಷಣವೇ
ತಣಿಸಿದ
ಬಳಿಕ
ಮುಚ್ಚಳ
ತೆರೆಯಬಹುದು)
9)
ತಣಿದ
ಬಳಿಕ
ಪಾತ್ರೆಯಲ್ಲಿ
ಸಾರನ್ನು
ವರ್ಗಾಯಿಸಿ
ಈಗಾಗಲೇ
ಇದರ
ಪರಿಮಳಕ್ಕೆ
ತಲೆದೂಗಿ
ಊಟದ
ಮೇಜಿನ
ಮೇಲೆ
ಕುಳಿತಿರುವ
ಮನೆಯವರಿಗೆ
ಬಡಿಸಿ.
ಈ
ಸಾರು
ನಿಮಗೆ
ಹೇಗೆನಿಸಿತು
ಎಂಬುದನ್ನು
ನಮಗೆ
ಖಂಡಿತಾ
ತಿಳಿಸಿ.
ಇದಕ್ಕಾಗಿ
ಕೆಳಗಿನ
ಕಮೆಂಟ್ಸ್
ಭಾಗವನ್ನು
ಬಳಸಿಕೊಳ್ಳಿ.