For Quick Alerts
ALLOW NOTIFICATIONS  
For Daily Alerts

ರುಚಿಕರವಾಗಿರುವ ಮಂಗಳೂರು ಶೈಲಿಯ ಮೀನು ಕರಿ

|

ಎಲ್ಲಾ ವಯಸ್ಸಿನವರಿಗೂ ಮೀನು ಒಂದು ಆರೋಗ್ಯವಂತ ಪದಾರ್ಥವಾಗಿದೆ. ಮೀನಿನಲ್ಲಿರುವ ನ್ಯೂಟ್ರೀಶಿಯನ್ ಅಂಶಗಳು ಪ್ರತಿಯೊಂದು ರೋಗಕ್ಕೂ ರಾಮಬಾಣ. ಹೃದಯ, ಕಣ್ಣು ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಮೀನು ಹೊಂದಿದೆ.

ಇತರ ಮಾಂಸಕ್ಕೆ ಹೋಲಿಸಿದರೆ ಮೀನಿನಲ್ಲಿ ಕೊಬ್ಬಿನ ಅಂಶಗಳು ಕಡಿಮೆ ಇದ್ದು ಮಿನರಲ್ಸ್, ಅಮೀನೊ ಹಾಗೂ ಪೊಸೋರಿಯಾಸಿಸ್ ಮೀನಿನಲ್ಲಿ ಹೇರಳವಾಗಿ ಕಂಡುಬರುತ್ತದೆ.

ಈ ಮೀನು ಕರಿ ರೆಸಿಪಿಯ ಮೂಲ ಮಂಗಳೂರು ಆಗಿದ್ದು ತೆಂಗಿನಕಾಯಿ ಇದಕ್ಕೆ ಅತ್ಯವಶ್ಯಕ. ಮಂಗಳೂರಿಗೆ ಭೇಟಿ ನೀಡಿದವರು ಈ ರುಚಿಯಾದ ಮೀನು ಪದಾರ್ಥವನ್ನು ಸವಿಯದೇ ಮರಳಲಾರರು.

Mangalore Fish Curry: South-Indian Recipe

ಇದರ ರುಚಿ ನೋಡಲು ನಿಮಗೆ ಮಂಗಳೂರಿಗೆ ತೆರಳಬೇಕೆಂದಿಲ್ಲ. ನಿಮಗೆ ಮನೆಯಲ್ಲೇ ಈ ರುಚಿಯಾದ ಮೀನು ಪದಾರ್ಥವನ್ನು ತಯಾರಿಸಬಹುದು. ಇದರಲ್ಲಿ ಬೆರೆತಿರುವ ಸುವಾಸನೆಯುಕ್ತ ಸಾಮಾಗ್ರಿಗಳು ನಿಮ್ಮ ಬಾಯಲ್ಲಿ ಮೀನಿನ ಕರಿ ರುಚಿಯನ್ನು ಹಾಗೆಯೇ ಇರಿಸುವುದು ಖಂಡಿತ!

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮೀನು ಪ್ರಿಯರಿಗಾಗಿ-ಮೀನಿನ ಫ್ರೈ

ಹಾಗಿದ್ದರೆ ಈ ರುಚಿಯಾದ ಮೀನು ಪದಾರ್ಥವನ್ನು ಮಂಗಳೂರು ಶೈಲಿಯಲ್ಲಿ ತಯಾರಿಸಲು ರೆಡಿಯಾಗಿ.

ಪ್ರಮಾಣ:4
ಸಿದ್ಧತಾ ಸಮಯ: 1 ಗಂಟೆ

ಸಾಮಾಗ್ರಿಗಳು:
*ಮೀನು 1/2 ಕೆಜಿ
*ಈರುಳ್ಳಿ - 2 (ಕತ್ತರಿಸಿದ್ದು)
*ಕೊತ್ತಂಬರಿ ಬೀಜ - 2 ಚಮಚ
*ಕೆಂಪು ಮೆಣಸಿನ ಕಾಯಿ - 9-10
*ತುರಿದ ತೆಂಗಿನ ಕಾಯಿ - 2 ಕಪ್‌ಗಳು
*ಶುಂಠಿ - 1 ತುಂಡು
*ಹುಳಿ - 1 ತುಂಡು
*ಹಸಿಮೆಣಸು - 5 (ಸೀಳಿದ್ದು)
*ತೆಂಗಿನ ಹಾಲು - 1/2 ಕಪ್
*ಎಣ್ಣೆ - 2 ಚಮಚ
*ಗರಂ ಮಸಾಲಾ - 1 ಚಮಚ
*ಸ್ವಲ್ಪ ಅರಶಿನ
*ಉಪ್ಪು ರುಚಿಗೆ ತಕ್ಕಷ್ಟು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಫಿಶ್ ಪ್ರಿಯರಿಗಾಗಿ ಈ ಫಿಶ್ ಟಿಕ್ಕಾ

ಮಾಡುವ ವಿಧಾನ:
1.ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಅದನ್ನು ಬಿಸಿ ಮಾಡಿ.

2.ಕೆಂಪು ಮೆಣಸು ಹಾಗೂ ಕೊತ್ತಂಬರಿ ಬೀಜವನ್ನು ಎಣ್ಣೆಗೆ ಹಾಕಿ ಹಾಗೂ ಅದು ಗರಿಗರಿಯಾಗುವವರೆಗೆ ಹುರಿದುಕೊಳ್ಳಿ.

3.ಇನ್ನು ಒಂದು ಕಪ್‌ನಷ್ಟು ನೀರು ಬಿಸಿ ಮಾಡಿಕೊಳ್ಳಿ ಹಾಗೂ ಸ್ವಲ್ಪ ಹುಳಿ ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ಹುಳಿ ನೀರನ್ನಾಗಿ ಮಾಡಿಕೊಳ್ಳಿ.

4.ಹುರಿದ ಮೆಣಸು, ಕೊತ್ತಂಬರಿ ಬೀಜ, ಹುಳಿ ನೀರು, ತೆಂಗಿನ ಹಾಲು, ಹಾಗೂ ಶುಂಠಿಯನ್ನು ಜೊತೆಗೆ ಕಡೆಯಿರಿ.

5.ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ. ತದನಂತರ ಈರುಳ್ಳಿಯನ್ನು ಚಿನ್ನ ಮಿಶ್ರಿತ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ.

6.ಗ್ರೈಂಡ್ ಮಾಡಿದ ಮಿಶ್ರಣ, ಅರಶಿನ, ಗರಂ ಮಸಾಲಾ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

7.ಒಮ್ಮೆ ನೀವು ಮಿಶ್ರಣವನ್ನು ಸರಿಯಾಗಿ ಬೆರೆಸಿಕೊಂಡ ನಂತರ, 2 ಕಪ್‌ಗಳಷ್ಟು ನೀರು ಹಾಕಿ ಮತ್ತು ಅದನ್ನು ಕುದಿಸಿ.

8.ಗ್ಯಾಸ್ ಹೆಚ್ಚಿಸಿ ನೀರನ್ನು ಚೆನ್ನಾಗಿ ಕುದಿಸಿ ನಂತರ ಮೀನಿನ ತುಂಡುಗಳನ್ನು ಸೇರಿಸಿ.

9.ಮೀನು ಚೆನ್ನಾಗಿ ಬೇಯುವವರೆಗೆ ಅದನ್ನು ಕುದಿಸಿ.

ನಿಮ್ಮ ಮಂಗಳೂರು ಮೀನು ಕರಿ ಸಿದ್ಧವಾಗಿದೆ. ಕರಿ ಮಿಶ್ರಣವನ್ನು ತಿರುಗಿಸಬೇಡಿ ಇದರಿಂದ ಮೃದುವಾದ ಮೀನಿನ ಮಾಂಸಗಳು ತುಂಡಾಗಬಹುದು. ಪದಾರ್ಥವನ್ನು ಅರ್ಧಗಂಟೆಯವರೆಗೆ ಹಾಗೆಯೇ ಬಿಡಿ. ನಂತರ ಅನ್ನದೊಂದಿಗೆ ಸವಿಯಿರಿ.

English summary

Mangalore Fish Curry: South-Indian Recipe

Fish is considered to be a healthy food for all ages. The nutritional benefits of fish are many. It has the ability to cure diseases related to heart, eyes and liver. Fish oil, as we know has a natural solution to revitalize ageing skin, promote more vibrant and youthful skin, prevent eczema and psoriasis.
X
Desktop Bottom Promotion