ಕ್ರಿಸ್ಮಸ್‌ ಹಬ್ಬದ ವಿಶೇಷ: ಮಲೇಶಿಯನ್ ಚಿಕನ್ ರೆಸಿಪಿ!

By: Hemanth
Subscribe to Boldsky

ಡಿಸೆಂಬರ್ ಬಂತೆಂದರೆ ಸಾಕು. ಕ್ರಿಸ್ಮಸ್ ಹಬ್ಬದ ಆಚರಣೆ ಆರಂಭವಾಗುತ್ತದೆ. ಯುರೋಪ್‌ನ ಕೆಲವೊಂದು ರಾಷ್ಟ್ರಗಳಲ್ಲಿ ತಿಂಗಳು ಪೂರ್ತಿ ಜನರು ಕ್ರಿಸ್ಮಸ್ ಗುಂಗಿನಲ್ಲಿಯೇ ಇರುತ್ತಾರೆ. ಕ್ರಿಸ್ಮಸ್ ಕಳೆದ ಕೂಡಲೇ ಹೊಸ ವರ್ಷವೂ ಬರುವುದರಿಂದ ಎರಡು ಆಚರಣೆಗಳು ತುಂಬಾ ಸಂಭ್ರಮದಿಂದ ಆಚರಿಸಲಾಗುತ್ತದೆ.

ಅದರಲ್ಲೂ ಕ್ರಿಸ್ಮಸ್ ಮತ್ತು ಹೊಸವರ್ಷದಲ್ಲಿ ಪಾರ್ಟಿಯ ಅಬ್ಬರವೂ ಹೆಚ್ಚಾಗಿರುತ್ತದೆ. ಪ್ರತಿಯೊಬ್ಬರು ಮನೆಗಳಲ್ಲಿ ಬಂಧುಗಳನ್ನು ಹಾಗೂ ಸ್ನೇಹಿತರನ್ನು ಕರೆದು ಕ್ರಿಸ್ಮಸ್‌ನ ಆಚರಣೆಯಲ್ಲಿ ತೊಡಗುತ್ತಾರೆ.

ಕ್ರಿಸ್ಮಸ್‌ಗೆ ವಿವಿಧ ರೀತಿಯ ತಿಂಡಿ ತಿನಿಸುಗಳು ಹಾಗೂ ಆಹಾರವನ್ನು ತಯಾರಿಸಲಾಗುತ್ತದೆ. ಭಾರತೀಯ ಶೈಲಿಯ ಅಡುಗೆಯನ್ನು ನೀವು ಪ್ರತೀ ಕ್ರಿಸ್ಮಸ್‌ಗೂ ಮಾಡುತ್ತಿರಬಹುದು. ಆದರೆ ಈ ಸಲ ಬೋಲ್ಡ್ ಸ್ಕೈಯು ಮಲೇಶಿಯನ್ ಚಿಕನ್ ಬಗ್ಗೆ ನಿಮಗೆ ಹೇಳಿಕೊಡಲಿದೆ. ಇದನ್ನು ತಯಾರಿಸುವುದು ಹೇಗೆಂದು ತಿಳಿದುಕೊಂಡು ಈ ಸಲದ ಕ್ರಿಸ್ಮಸ್ ಗೆ ವಿಶೇಷ ಅಡುಗೆ ಮಾಡಿ ಬಡಿಸಿ. ಖಂಡಿತವಾಗಿಯೂ ಬಂದ ಅತಿಥಿಗಳು ನಿಮ್ಮ ಗುಣಗಾನ ಮಾಡುತ್ತಾರೆ. ಹೆಚ್ಚಿಗೆ ತಿಳಿಯಲು ಮುಂದೆ ಓದಿಕೊಳ್ಳಿ....     ಘಮಘಮಿಸುವ ಚಿಕನ್ ಕರಿ: ಬರೀ 20 ನಿಮಿಷ ಸಾಕು!    

chicken
 

*ನಾಲ್ಕು ಜನರಿಗೆ ಆಗುವಷ್ಟು

*ಸಮಯ 20 ನಿಮಿಷ

*ಅಡುಗೆ ಸಮಯ 12 ನಿಮಿಷ

ವಿಧಾನ

•ಕೋಳಿಯ ಕಾಲಿನ ಭಾಗವನ್ನು ಅರ್ಧ ಮಾಡಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. 

Malaysian Chicken Recipe

•ಅದಕ್ಕೆ ಉಪ್ಪು, ಕರಿಮೆಣಸು, ಬೆಳ್ಳುಳ್ಳಿ ಹುಡಿ, ಎಣ್ಣೆ, ಆಯ್ಸ್ಟರ್ ಸಾಸ್, ಮಸಾಲೆ ಪುಡಿ ಹಾಕಿಕೊಂಡು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಅರ್ಧ ಗಂಟೆ ಕಾಲ ಹಾಗೆ ಬಿಡಿ.

•ಆಳವಾದ ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು ಕುದಿಸಿ. ಮಸಾಲೆ ಹಾಕಿರುವಂತಹ ಕೋಳಿಯ ತುಂಡುಗಳನ್ನು ಅದರಲ್ಲಿ ಬಿಟ್ಟು ಸುಮಾರು 2-3 ನಿಮಿಷಕಾಲ ಚೆನ್ನಾಗಿ ಫ್ರೈ ಮಾಡಿ...  

Malaysian Chicken Recipe

• ಇನ್ನು ಗ್ಯಾಸ್ ಸ್ಟೌವ್ ಉರಿ ಸಣ್ಣಗೆ ಮಾಡಿಕೊಂಡು ಕೋಳಿ ತುಂಡಿನ ಒಳಭಾಗ ಬೇಯಲು ಬಿಡಿ.

• ಕೋಳಿಯ ತುಂಡುಗಳನ್ನು ಹೊರತೆಗೆದು ಸ್ವಚ್ಛವಾಗಿರುವ ಅಡುಗೆ ಕಾಗದದಲ್ಲಿ ಹಾಕಿಡಿ. ಇದು ಎಣ್ಣೆಯನ್ನು ಹೀರಿಕೊಳ್ಳುವುದು.

• ಈಗ ಮಲೇಶಿಯನ್ ಚಿಕನ್ ತಯಾರಾಗಿದೆ. ಇದಕ್ಕೆ ಈರುಳ್ಳಿ ಎಳೆಯನ್ನು ಕತ್ತರಿಸಿ ಹಾಕಿ ಶೃಂಗರಿಸಿ.  

Malaysian Chicken Recipe

ಇದು ತುಂಬಾ ಸುಲಭವಾಗಿರುವಂತದ್ದಾಗಿದೆ. ಹೆಚ್ಚು ಸಮಯವೂ ಬೇಕಾಗಿಲ್ಲ. ಮಲೇಶಿಯನ್ ಚಿಕನ್ ಮಾಡಿಕೊಂಡು ಅತಿಥಿಗಳಿಗೆ ಬಡಿಸಲು ತಯಾರಾಗಿದ್ದೀರಿ ತಾನೇ? ನೀವು ತಯಾರಿಸಿದ ಬಳಿಕ ಪ್ರತಿಕ್ರಿಯೆಯನ್ನು ನಮಗೂ ತಿಳಿಸಲು ಮರೆಯಬೇಡಿ.....

Malaysian Chicken Recipe
 
English summary

Malaysian Chicken Recipe For Christmas

Incorporate that international style of cooking and try Malaysian chicken this year on Christmas. Your house party will be rocking with such a dish and it will be the talk of the town for long time. Now, it's time to concentrate on the ingredients and recipe of this lip-smacking dish. Read on to know more.
Please Wait while comments are loading...
Subscribe Newsletter