For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಹೈದ್ರಾಬಾದೀ ಕಬಾಬ್ ರೆಸಿಪಿ!

|

ಹೈದ್ರಾಬಾದ್‌ನ ರೋಯಲ್ ತಿನಿಸು ವಿವಿಧ ಬಗೆಯ ಕಬಾಬ್ ಮತ್ತು ಮಾಂಸ ಖಾದ್ಯಗಳಿಗೆ ಹೆಸರುವಾಸಿ. ಭಾರತದಲ್ಲಿ ಮೊಗಲರ ಆಳ್ವಿಕೆಯಿಂದ ಕಬಾಬ್ ಪ್ರವರ್ಧಮಾನಕ್ಕೆ ಬಂದಿತು. ಟರ್ಕಿ, ಅಫಘಾನಿಸ್ತಾನ ಮತ್ತು ಪರ್ಷಿಯಾದಿಂದ ನಟ್ಸ್, ಡ್ರೈ ಫ್ರುಟ್ಸ್ ಹಾಗೂ ರೋಸ್‌ನ ಸುಗಂಧವನ್ನು ಹೊತ್ತು ತಂದಿದ್ದಾರೆ. ರೋಯಲ್ ಕಿಚನ್‌ನ ಬಾಣಸಿಗರು ಈ ಸಾಮಾಗ್ರಿಗಳನ್ನು ಬಳಸಿಕೊಂಡು ಟೇಸ್ಟೀ ಡಿಶ್ ಅನ್ನು ತಯಾರಿಸುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾಯಿಯಲ್ಲಿ ನೀರೂರಿಸುವ 10 ಪಂಜಾಬಿ ಖಾದ್ಯಗಳು!

ಹೈದ್ರಾಬಾದಿ ಸಿಸ್ವನ್ ಈ ಭಾರತೀಯ ಮತ್ತು ವಿದೇಶಿ ಸಾಮಾಗ್ರಿಗಳ ಸಮ್ಮಿಲನವಾಗಿದೆ. ಆಂಧ್ರ ಕಬಾಬ್ ಮತ್ತು ಇತರ ಮಾಂಸ ಆಹಾರಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತವಾಗಿದೆ. ಶಿಕಾಂಪುರಿ ಕಬಾಬ್ ಕೂಡ ನಿಜಾಮ್‌ನ ರೋಯಲ್ ಅಡುಗೆ ಕೋಣೆಗಳಲ್ಲಿ ತಯಾರಾಗುವಂಥದ್ದು. ಇಂದು ನಿಮಗಾಗಿ ಹೈದ್ರಾಬಾದ್‌ನ ರೋಯಲ್ ಕಿಚನ್‌ಗಳಿಂದ ತಯಾರಾದ ಶಿಕಾಂಪುರಿ ಕಬಾಬ್ ರೆಸಿಪಿಯನ್ನು ಉಣಬಡಿಸುತ್ತಿದ್ದೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಾವ್! ಮಂಗಳೂರು ಶೈಲಿಯ ರುಚಿಯಾದ ಸಿಗಡಿ ಫ್ರೈ

Hyderabadi Shikampuri Kebab Recipe

ಬನ್ನಿ ಈ ರುಚಿಕರವಾದ ಕಬಾಬ್ ರೆಸಿಪಿಯನ್ನು ತಯಾರಿಸಿ ಮನೆಮಂದಿಯ ಮೆಚ್ಚುಗೆಗಳಿಸಿ.

ಪ್ರಮಾಣ: 4
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಸಾಮಾಗ್ರಿಗಳು:
ಮಟನ್ ಕೀಮಾ - 1/2 ಕೆಜಿ
ಚನ್ನಾ ದಾಲ್ - 1/2 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್
ಮೆಣಸಿನ ಹುಡಿ - 1 ಸ್ಪೂನ್
ಹಸಿಮೆಣಸು - 2
ಉಪ್ಪು - ರುಚಿಗೆ ತಕ್ಕಷ್ಟು
ಕಪ್ಪು ಏಲಕ್ಕಿ - 4
ಬೇ ಲೀವ್ಸ್ - 2
ದಾಲ್ಚಿನ್ನಿ ಕಡ್ಡಿಗಳು - 4
ಲವಂಗ - 6
ಯೋಗರ್ಟ್ - 1/2 ಕಪ್
ಗರಂ ಮಸಾಲಾ ಪೌಡರ್ - 1 1/2 ಸ್ಪೂನ್
ತಾಜಾ ಕೊತ್ತಂಬರಿ ಸೊಪ್ಪು - 1/2 ಕಪ್ (ಕತ್ತರಿಸಿದ್ದು)
ತಾಜಾ ಮಿಂಟ್ ಎಲೆಗಳು - 2 ಸ್ಪೂನ್ (ಕತ್ತರಿಸಿದ್ದು)
ಲಿಂಬೆ ಜ್ಯೂಸ್ - 2 ಸ್ಪೂನ್
ಹಂಗ್ ಕರ್ಡ್ ಅಥವಾ ಕ್ರೀಂ - 1/2 ಕೆಜಿ
ಮೊಟ್ಟೆ - 2 (ಸಣ್ಣದಾಗಿ ಒಡೆದದ್ದು)
ಎಣ್ಣೆ - 3 ಸ್ಪೂನ್
ನೀರು - 3 ಕಪ್‌ಗಳು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಧುಮೇಹಿಗಳ ಬಾಯಿ ರುಚಿ ಹೆಚ್ಚಿಸುವ ಸಾರು

ಮಾಡುವ ವಿಧಾನ:
1.ನೀರಿನಲ್ಲಿ ಚೆನ್ನಾಗಿ ಮಟನ್ ಕೀಮಾವನ್ನು ತೊಳೆದುಕೊಳ್ಳಿ. ನಂತರ ಅದನ್ನು ಪಕ್ಕಕ್ಕಿಡಿ.

2.ತಳವಿರುವ ಪಾತ್ರೆಯಲ್ಲಿ ನೀರು ಬಿಸಿ ಮಾಡಲು ಇಡಿ. ಚನ್ನಾ ದಾಲ್, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಕಪ್ಪು ಏಲಕ್ಕಿ, ಬೇ ಲೀವ್ಸ್, ದಾಲ್ಚಿನ್ನಿ ಕೋಲು, ಲವಂಗ ಮತ್ತು ಮಟನ್ ಮಿನ್ಸ್ ಅನ್ನು ಕುದಿಯುವ ನೀರಿಗೆ ಹಾಕಿ.

3.ಮಾಂಸ ಮೃದುವಾಗುವವರೆಗೆ ಸಣ್ಣ ಉರಿಯಲ್ಲಿ 20 ನಿಮಿಷಗಳ ಕಾಲ ಬೇಯಿಸಿ.

4.ಒಮ್ಮೆ ಮಾಂಸ ಸರಿಯಾಗಿ ಬೆಂದ ನಂತರ, ಗ್ಯಾಸ್ ಆಫ್ ಮಾಡಿ ಮತ್ತು ಮಾಂಸದಿಂದ ನೀರು ಬಸಿಯಿರಿ.

5.ಮಾಂಸ ಸಂಪೂರ್ಣ ತಣ್ಣಗಾದ ನಂತರ, ಮಸಾಲಾ ಸಾಮಾಗ್ರಿಯೊಂದಿಗೆ ಮಾಂಸವನ್ನು ನುಣ್ಣಗೆ ಮಿಕ್ಸಿಯಲ್ಲಿ ಅರೆದುಕೊಳ್ಳಿ. ಅರೆಯುವಾಗ ನಿರು ಬೆರೆಸದಿರಿ.

6.ಇದೀಗ ಯೋಗರ್ಟ್, ಗರಂ ಮಸಾಲಾ ಪೌಡರ್, ಮೆಣಸಿನ ಹುಡಿ, ಉಪ್ಪು, ಮಿಂಟ್ ಲೀವ್ಸ್‌, ಕೊತ್ತಂಬರಿ ಎಲೆ ಮತ್ತು ಲಿಂಬೆ ರಸವನ್ನು ಅರೆದ ಕೀಮಾಗೆ ಸೇರಿಸಿ. ನಿಮ್ಮ ಕೈಗಳಿಂದ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

7.8-10 ಸಮಾನ ಭಾಗಗಳನ್ನಾಗಿ ಈ ಮಿಶ್ರಣವನ್ನು ವಿಭಾಗಿಸಿ.

8.ಒಂದು ಭಾಗವನ್ನು ತೆಗೆದುಕೊಂಡು ನಿಮ್ಮ ಕೈಗಳಿಂದ ರೋಲ್ ಮಾಡಿಕೊಳ್ಳಿ. ನಿಮ್ಮ ಬೆರಳುಗಳೊಂದಿಗೆ ಸಣ್ಣ ಕಪ್‌ನಂತೆ ಮಧ್ಯಭಾಗದಲ್ಲಿ ಇಂಡೇಂಟೇಶನ್‌ನಂತೆ ಮಾಡುತ್ತಾ ಮಿಶ್ರಣವನ್ನು ಚಪ್ಪಟೆ ಮಾಡಿಕೊಳ್ಳಿ.

9.ಹಂಗ್ ಕರ್ಡ್ ಅಥವಾ ತಾಜಾ ಕ್ರೀಂನೊಂದಿಗೆ ಈ ಕಪ್ ಅನ್ನು ಇಂಡೇಂಟೇಶನ್‌ನಂತೆ ತುಂಬಿಸಿ.

10.ಎಲ್ಲಾ ಬದಿಗಳಿಂದಲೂ ಮಿಶ್ರಣವನ್ನು ಸುತ್ತುತ್ತಾ ಕರ್ಡ್ ಫಿಲ್ಲಿಂಗ್ ಅನ್ನು ಸೀಲ್ ಮಾಡಿ.

11.ಇದೇ ರೀತಿ ಎಲ್ಲಾ ಕಬಾಬ್‌ಗಳನ್ನು ಮಾಡಿ.

12.ಪ್ಯಾನ್‌ನಲ್ಲಿ ಎಣ್ಣೆ ಬಿಸಿಮಾಡಿಕೊಳ್ಳಿ.

13.ಮೊಟ್ಟೆ ಮಿಶ್ರಣದಲ್ಲಿ ಕಬಾಬ್ ಅನ್ನು ಮುಳುಗಿಸಿ ಮತ್ತು ಎಣ್ಣೆಯಲ್ಲಿ ಅದನ್ನು ಕರಿಯಿರಿ.

14.ಎರಡೂ ಬದಿಯನ್ನು ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿ.

15.ಕಬಾಬ್ ಗೋಲ್ಡನ್ ಬಣ್ಣಕ್ಕೆ ತಿರುಗುತ್ತಿದ್ದಂತೆ ಮತ್ತು ಎಲ್ಲಾ ಬದಿಗಳು ಚೆನ್ನಾಗಿ ಬೇಯುತ್ತಿದ್ದ ಹಾಗೆ, ಸರ್ವಿಂಗ್ ಪ್ಲೇಟ್‌ಗೆ ಅದನ್ನು ವರ್ಗಾಯಿಸಿ.

16.ಇನ್ನಷ್ಟು ಕಬಾಬ್‌ಗಳನ್ನು ಕರಿಯಲು ಇದೇ ವಿಧಾನವನ್ನು ಅನುಸರಿಸಿ.

ರುಚಿಕರವಾದ ಬಾಯಲ್ಲಿ ನೀರೂರಿಸುವ ಹೈದ್ರಾಬಾದಿ ಶಿಕಾಂಪುರಿ ಕಬಾಬ್ ಬಡಿಸಲು ಸಿದ್ಧವಾಗಿದೆ. ನಿಮ್ಮ ಮೆಚ್ಚಿನ ಸೈಡ್ ಡಿಶ್‌ನೊಂದಿಗೆ ಕಬಾಬ್ ಸವಿಯಿರಿ.

English summary

Hyderabadi Shikampuri Kebab Recipe

The royal cuisine of Hyderabad is famous for its variety of kebabs and other meat dishes. Kebabs are usually associated with the advent of the Mughals in India.
Story first published: Thursday, March 20, 2014, 12:02 [IST]
X
Desktop Bottom Promotion