For Quick Alerts
ALLOW NOTIFICATIONS  
For Daily Alerts

ಆಹಾ, ಚಿಕನ್ ಬಿರಿಯಾನಿ, ಬಾಯಲ್ಲಿ ನೀರೂರುತ್ತಿದೆ!

ಚಿಕನ್ ಬಿರಿಯಾನಿ ಎಂತಹ ಖಾದ್ಯವೆಂದರೆ, ಎಂಟರಿಂದ ಹದಿನೆಂಟು ವಯಸ್ಸಿನ ಎಲ್ಲರನ್ನು ಆಕರ್ಷಿಸುತ್ತದೆ. ಮದುವೆ ಸಮಾರಂಭವಾಗಿರಬಹುದು, ಈದ್‌ನ ಸಂಭ್ರಮವಿರಬಹುದು ಬಿರಿಯಾನಿ ಇದ್ದರೆ ಸಾಕು ಜನರಿಗೆ ಬೇರೇನು ಬೇಕಿಲ್ಲ.

By Vani nayak
|

ಹೆಸರು ಕೇಳಿದರೇ ಸಾಕು ತಕ್ಷಣ ತಿನ್ನುವ ಬಯಕೆಯಾಗುತ್ತದೆ...! ಚಿಕನ್ ಬಿರಿಯಾನಿ ಎಂತಹ ಖಾದ್ಯವೆಂದರೆ, ಎಂಟರಿಂದ ಹದಿನೆಂಟು ವಯಸ್ಸಿನ ಎಲ್ಲರನ್ನು ಆಕರ್ಷಿಸುತ್ತದೆ. ಮದುವೆ ಸಮಾರಂಭವಾಗಿರಬಹುದು, ಈದ್‌ನ ಸಂಭ್ರಮವಿರಬಹುದು ಅಥವಾ ಇನ್ಯಾವುದೇ ಸಂದರ್ಭಗಳಲ್ಲಿ ಬಿರಿಯಾನಿ ಇದ್ದರೆ ಸಾಕು ಜನರಿಗೆ ಬೇರೇನು ಬೇಕಿಲ್ಲ.

ನಿರ್ದಿಷ್ಟವಾಗಿ, ಬಿರಿಯಾನಿ ಅವಾದ್ ಶೈಲಿಯ ಖಾದ್ಯ. ಹೈದರಾಬಾದಿ ಶೈಲಿ ಇದಕ್ಕಿಂತ ವಿಭಿನ್ನ. ನೀವು ಕೋಲ್ಕತ್ತಾ ಬಿರಿಯಾನಿ ಸವಿದರೆ, ಆಲೂ ಗಡ್ಡೆ, ಚಿಕನ್ ಹಾಗೂ ಮಾಂಸದ ಕಾಂಬಿನೇಷನ್ ಮಸಾಲ ಅನ್ನದ ಜೊತೆ ವಿಭಿನ್ನ ರುಚಿಯನ್ನು ಕೊಡುತ್ತದೆ. ಬಿರಿಯಾನಿ ಪ್ರಿಯರಿಗಾಗಿ ಬೊಂಬಾಟ್ ಪನ್ನೀರ್ ಬಿರಿಯಾನಿ ರೆಸಿಪಿ

ವಿವಿಧ ರಾಜ್ಯಗಳಲ್ಲಿ ಬಿರಿಯಾನಿಯನ್ನು ವಿವಿಧ ರೀತಿಯಲ್ಲಿ ತಯಾರಿಸುವುದನ್ನು ನಾವು ಕಾಣುತ್ತೇವೆ. ಆದರೆ, ಮನೆಗೆ ಬಂದ ಅತಿಥಿಗಳನ್ನು ತೃಪ್ತಿ ಪಡಿಸಲು ಅಥೆನ್ಟಿಕ್ ಚಿಕನ್ ಬಿರಿಯಾನಿ ಮನೆಯಲ್ಲೇ ತಯಾರಿಸಬೇಕೆಂದರೆ, ಕೆಳಗೆ ನೀಡಲಾಗಿರುವ ಕ್ರಮವನ್ನು ಅನುಸರಿಸಿ. ಬಿರಿಯಾನಿ ಪ್ರಿಯರಿಗಾಗಿ-ಹೈದರಾಬಾದ್ ಬಿರಿಯಾನಿ

Chicken Biryani

*ಪ್ರಮಾಣ - 6 ಜನಕ್ಕೆ ಆಗುವಷ್ಟು
*ಸಿದ್ಧತಾ ಸಮಯ- 2 ಗಂಟೆ
*ತಯಾರಿಸುವ ಅವಧಿ - 1 ಗಂಟೆ

ಸಾಮಗ್ರಿಗಳು:
1.ಚಿಕನ್ - 500 ಗ್ರಾಂ(ಬೋನ್ಲೆಸ್)
2. ಅರಿಶಿನ ಪುಡಿ - 1 ಟೀ ಚಮಚ
3. ಮೊಸರು - 1 ಕಪ್
4. ಗರಂ ಮಸಾಲ - 1 ಟೀ ಚಮಚ
5. ಅಚ್ಚ ಖಾರದ ಪುಡಿ - 2 ಟೇಬಲ್ ಚಮಚ
6. ಉಪ್ಪು - ರುಚಿಗೆ ತಕ್ಕಷ್ಟು
7. ಶುಂಠಿ ಪೇಸ್ಟ್ - 1 ಟೇಬಲ್ ಚಮಚ
8. ಬೆಳ್ಳುಳ್ಳಿ ಪೇಸ್ಟ್ - ಒಂದೂವರೆ ಟೇಬಲ್ ಚಮಚ
9. ತುಪ್ಪ - 3 ಟೇಬಲ್ ಚಮಚ
10. ಕರಿದ ಈರುಳ್ಳಿ - 1 ಕಪ್
11. ಬಾಸ್ಮತಿ ಅಕ್ಕಿ - 2 ಕಪ್ಸ್ (ನೀರಿನಲ್ಲಿ ನೆನಸಿರಬೇಕು)
12. ಮಾಸಾಲೆ ಬೇಕಾಗುವಷ್ಟು
13. ಡ್ರೈ ಫ್ರೂಟ್ಸ್ - 1 ಕಪ್ (ಹೆಚ್ಚಿದ್ದು)
14. ಕೇಸರಿ ನೀರು - 2 ಟೇಬಲ್ ಚಮಚ
15. ರೋಸ್ ವಾಟರ್ - 1 ಟೇಬಲ್ ಚಮಚ
16. ಕೆವ್ರ ವಾಟರ್ - 1 ಟೇಬಲ್ ಚಮಚ ಘಂ ಎನ್ನುತ್ತೆ ಹೈದರಾಬಾದ್ ದಮ್ ಬಿರಿಯಾನಿ

ಮಾಡುವ ನಿಧಾನ:
1. ಚಿಕನ್ ತುಂಡುಗಳನ್ನು ಒಂದು ಬೌಲ್ ನಲ್ಲಿ ಹಾಕಿ ಅದಕ್ಕೆ, ಮೊಸರು, ಅಚ್ಚ ಖಾರದ ಪುಡಿ, ಅರಿಶಿನ ಪುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಗರಂ ಮಸಾಲ ಪುಡಿಯನ್ನು ಹಾಕಬೇಕು.
2. ಚಿಕನ್ ನನ್ನು ಎಲ್ಲಾ ಮಸಾಲಗಳ ಜೊತೆ ಮ್ಯಾರಿನೇಟ್ ಮಾಡಿ, 2 ಗಂಟೆಗಳ ಕಾಲ ಬಿಡಬೇಕು.
3. ಒಂದು ದಪ್ಪ ತಳದ ಪಾತ್ರೆಯನ್ನು ತೆಗೆದುಕೊಂಡು, ಅದಕ್ಕೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಮ್ಯಾರಿನೇಟ್ ಮಾಡಿದ ಚಕನ್ ತುಂಡುಗಳನ್ನು ಹಾಕಿ ಕೈ ಆಡಿಸಿ.
4. ಅದಕ್ಕೆ ಕರಿದ ಈರುಳ್ಳಿ, ಹಾಗು ಡ್ರೈ ಫ್ರೂಟ್ಸ್ ಹಾಕಿ ಚಿಕನ್ ತುಂಡುಗಳು ಅರ್ಧ ಬೇಯುವವರೆಗೂ ಬೇಯಿಸಿ ಪಕ್ಕಕ್ಕೆ ಇಡಿ.
5. ಒಂದು ಸಾಸ್ ಪ್ಯಾನ್ ಅನ್ನು ತೆಗೆದುಕೊಂಡು ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ಎಲ್ಲಾ ಮಸಾಲೆಗಳನ್ನು ಅದಕ್ಕೆ ಹಾಕಿ.
6. ಮೊದಲೇ ನೆನೆಸಿಟ್ಟ ಬಾಸ್ಮತಿ ಅಕ್ಕಿಯನ್ನು ಹಾಕಿ ಶೇಕಡ 80 ರಷ್ಟು ಬೇಯಿಸಿ.
7. ಈಗ ಚಿಕನ್ ಅನ್ನು ತೆಗೆದುಕೊಂಡು ದೊಡ್ಡ ಪಾತ್ರೆಯ ಬುಡದಲ್ಲಿಟ್ಟು ಅದನ್ನು ಅನ್ನದಿಂದ ಮುಚ್ಚಿರಿ.


8. ನಂತರ ಅದಕ್ಕೆ ಡ್ರೈ ಫ್ರೂಟ್ಸ್, ಕೇಸರಿ ನೀರು, ರೋಸ್ ವಾಟರ್, ಕೆವ್ರ ವಾಟರ್, ಕರಿದ ಈರುಳ್ಳಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಎಲ್ಲವನ್ನು ಹಾಕಿ ಒಂದು ಅಲುಮಿನಿಯಮ್ ಫಾಯಿಲ್ ನಿಂದ ಪಾತ್ರೆಯನ್ನು ಮುಚ್ಚಿರಿ.
9. ಈ ರೆಸಿಪಿಯ ನೈಜತೆ ಮತ್ತಷ್ಟು ಹೆಚ್ಚಿಸಲು ಪಾತ್ರೆಯನ್ನು ಅದರ ಮುಚ್ಚಳದಿಂದಲೇ ಮುಚ್ಚಿರಿ.
10. ಕಡಿಮೆ ಉರಿಯಲ್ಲಿ ಬಿರಿಯಾನಿಯನ್ನು 20 ನಿಮಿಷಗಳ ಕಾಲ ಬೇಯಿಸಿ.
11. ಒಳ್ಳೇ ಸುವಾಸನೆ ಬಂದರೆ ನಿಮ್ಮ ಚಿಕನ್ ಬಿರಿಯಾನಿ ತಯಾರಾಗಿದೆ ಎಂದರ್ಥ. ನಿಮ್ಮ ಪರಿವಾರದ ಔತಣಕೂಟಗಳಲ್ಲಿ ಈ ಚಿಕನ್ ಬಿರಿಯಾನಿಯನ್ನು ಮಾಡಿ ಕೊಟ್ಟು ನೆಂಟರಿಷ್ಟರನ್ನು ತೃಪ್ತಿ ಪಡಿಸಿ ಹಾಗು ನಿಮ್ಮ ಸ್ಹೇಹಿತರಗಿಗೂ ಈ ರೆಸಿಪಿ ಬಗ್ಗೆ ತಿಳಿಸಿ.
English summary

How To Prepare Tasty Chicken Biryani: Video

Different states have different styles of making chicken biryani. But, if you want to make authentic chicken biryani easily at home to make your guests happy, follow the below given procedure.
X
Desktop Bottom Promotion