For Quick Alerts
ALLOW NOTIFICATIONS  
For Daily Alerts

ಆಹಾ, ಗರಿಗರಿಯಾದ ಚಿಕನ್ ಮುರುಕು ರೆಸಿಪಿ!

By Super
|

ಸಂಜೆಯ ತಿಂಡಿಯಾಗಿ, ಅಥವಾ ಮಧ್ಯಾಹ್ನದ, ರಾತ್ರಿಯ ಊಟದ ಜೊತೆಯಲ್ಲಿ ಕುರುಕು ತಿಂಡಿಯಾಗಿ ಹಪ್ಪಳವನ್ನು ತಿನ್ನುವುದು ಹಳೆಯದಾಯಿತು. ಕೊಂಚ ಬದಲಾವಣೆಗೆ ಗರಿಗರಿಯಾಗಿರುವ ಚಿಕನ್ ಖಾದ್ಯಗಳು ಇಂದು ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಚಿಕನ್ ಲಾಲಿಪಾಪ್, ಕ್ರಿಸ್ಪಿ ಚಿಕನ್ ಡಂಪ್ಲಿಂಗ್ಸ್, ಬ್ರೇಯ್ಡೆಡ್ ವಿಂಗ್ಸ್, ಚಿಕನ್ ನಗೆಟ್ಸ್ ಎಂದೆಲ್ಲಾ ವಿವಿಧ ಖಾದ್ಯಗಳು ಇಂದು ಸಂಡಿಗೆ ಹಪ್ಪಳಗಳನ್ನು ಪಕ್ಕಕ್ಕೆ ಸರಿಸಿವೆ.

ಮಕ್ಕಳಂತೂ ಈ ಗರಿಗರಿ ಚಿಕನ್ ಇದ್ದರೆ ಅನ್ನ ಚಪಾತಿ ಬಿಟ್ಟು ಇವುಗಳಿಗೇ ಮೊದಲು ಕೈ ಹಾಕುತ್ತಾರೆ. ಹಿರಿಯರೂ ಚಪಾತಿಗಿಂತ ಹೆಚ್ಚು ಗರಿಗರಿಯಾದ ಈ ತುಂಡುಗಳನ್ನೇ ಹೆಚ್ಚು ಖಾಲಿಮಾಡುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಈ ಸಿದ್ಧ ಆಹಾರಗಳು ದುಬಾರಿಯೂ, ಹಲವು ಸಂರಕ್ಷಕಗಳನ್ನು ಹೊಂದಿರುವುದರಿಂದ ಹೆಚ್ಚಿನ ಸೇವನೆ ಅನಾರೋಗ್ಯಕರವೂ ಆಗಿದೆ.

 

ಇದರ ರುಚಿ ಹೇಗಿರುತ್ತದೆ ಎಂದರೆ ಒಂದೆರಡು ತುಂಡುಗಳಿಗೆ ನಿಲ್ಲಿಸದೇ ತಟ್ಟೆ ಖಾಲಿಯಗಿಸುತ್ತಾ ಹೋಗುವುದು ಕೊಂಚ ಆತಂಕ ಮೂಡಿಸುತ್ತದೆ. ಈಗ ಆ ಆತಂಕವನ್ನು ಕೆಳಗೆ ನೀಡಿರುವ ವಿಧಾನ ನಿವಾರಿಸುತ್ತದೆ. ಮಾರುಕಟ್ಟೆಯಲ್ಲಿ ದೊರಕುವುದಕ್ಕಿಂತಲೂ ಆರೋಗ್ಯಕರ, ರುಚಿಕರ ಮತ್ತು ಹೆಚ್ಚಿನ ಶ್ರಮವಿಲ್ಲದೇ ತಯಾರಿಸಬಹುದಾದ ಗರಿಗರಿ ಚಿಕನ್ ಮುರುಕು ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ ಮುಂದೆ ಓದಿ..

Hot Chicken Crisps Recipe

ಪ್ರಮಾಣ:ಸುಮಾರು ಆರು ಜನರಿಗೆ ಒಂದು ಹೊತ್ತಿಗಾಗುವಷ್ಟು

ಸಿದ್ಧತಾ ಸಮಯ:ಇಪ್ಪತ್ತು ನಿಮಿಷಗಳು

ತಯಾರಿಕಾ ಸಮಯ:ಇಪ್ಪತ್ತರಿಂದ ಮೂವತ್ತು ನಿಮಿಷಗಳು ಸುಲಭವಾದ ಮತ್ತು ಗರಿಗರಿಯಾದ ಕೇರಳ ಚಿಕನ್ ಫ್ರೈ ರೆಸಿಪಿ

ಅಗತ್ಯವಿರುವ ಸಾಮಾಗ್ರಿಗಳು

*ಮೂಳೆಯಿಲ್ಲದ ಕೋಳಿಮಾಂಸ : ಒಂದು ಕೇಜಿ (ಮಧ್ಯಮ ಗಾತ್ರದ ತುಂಡುಗಳು) - ಉದ್ದಕ್ಕೆ ಇದ್ದರೆ ಉತ್ತಮ

*ಮೆಕ್ಕೆಜೋಳದ ಹಿಟ್ಟು (corn flour): ಐದು ದೊಡ್ಡ ಚಮಚ

 

*ಮೈದಾ ಹಿಟ್ಟು :ಐದು ದೊಡ್ಡ ಚಮಚ

*ಮೊಟ್ಟೆ : ಎರಡು

*ಸೋಯಾ ಸಾಸ್: ಎರಡು ದೊಡ್ಡ ಚಮಚ

*ಚಿಲ್ಲಿ ಸಾಸ್: ಎರಡು ದೊಡ್ಡ ಚಮಚ

*ಶಿರ್ಕಾ: ಎರಡು ದೊಡ್ಡ ಚಮಚ (ಬಿಳಿ ಶಿರ್ಕಾ ಇದ್ದರೆ ಉತ್ತಮ)

*ಸಾಸಿವೆ ಪುಡಿ : ಒಂದು ಚಿಕ್ಕ ಚಮಚ

*ಕಾಳು ಮೆಣಸಿನ ಪುಡಿ: ಒಂದು ಚಿಕ್ಕ ಚಮಚ

*ಬೆಳ್ಳುಳ್ಳಿ: 6 ರಿಂದ 7 ಎಸಳು, ಚಿಕ್ಕದಾಗಿ ಕತ್ತರಿಸಿದ್ದು.

*ಉಪ್ಪು: ರುಚಿಗನುಸಾರ

*ಮೋನೋಸೋಡಿಯಂ ಗ್ಲುಟಾಮೇಟ್ (ಅಜಿನೋಮೋಟೋ) - ಚಿಟಿಕೆಯಷ್ಟು

*ಎಣ್ಣೆ : ಹುರಿಯಲು ಅಗತ್ಯವಿದ್ದಷ್ಟು

ತಯಾರಿಕಾ ವಿಧಾನ

1) ಪ್ರೆಷರ್ ಕುಕ್ಕರಿನಲ್ಲಿ ಕೋಳಿಮಾಂಸ ಮುಳುಗಿ ಒಂದು ಇಂಚು ಮೇಲಿರುವಷ್ಟು ನೀರು ಹಾಕಿ. ಇದಕ್ಕೆ ಕೊಂಚ ಎಣ್ಣೆ, ಅಜಿನೋಮೋಟೋ, ಬೆಳ್ಳಿಳ್ಳಿ, ಶಿರ್ಕಾ, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ನಾಲ್ಕಾರು ಸೀಟಿ ಬರುವಷ್ಟು ಕುದಿಸಿ. ಕೋಳಿ ಮಾಂಸ ಎಳೆಯದಿದ್ದರೆ ನಾಲ್ಕು ಸಾಕಾಗುತ್ತದೆ. ಕೊಂಚ ಬಲಿತಿದ್ದರೆ ಆರರಿಂದ ಎಂಟು ಸೀಟಿ ಬೇಕು. ನಂತರ ಉಳಿದ ನೀರನ್ನು ಬಸಿದು ಕೊಂಚ ಹೊತ್ತು ಟಿಶ್ಯೂ ಪೇಪರ್ ಮೇಲೆ ಹರಡಿ ನೀರು ಹೀರಿಕೊಳ್ಳುವಂತೆ ಮಾಡಿ.

2) ಇನ್ನೊಂದು ಪಾತ್ರೆಯಲ್ಲಿ ಮೈದಾ, ಮೆಕ್ಕೆಜೋಳದ ಹಿಟ್ಟು, ಮೊಟ್ಟೆ, ಸೋಯಾ ಸಾಸ್, ಚಿಲ್ಲಿ ಸಾಸ್, ಸಾಸಿವೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

3) ಇದು ಅತಿ ತೆಳ್ಳಗೂ ಇರಬಾರದು, ಅತಿ ದಪ್ಪಗೂ ಇರಬಾರದು. ಒಂದು ವೇಳೆ ಹೆಚ್ಚು ದಪ್ಪಗಾದರೆ ಕೊಂಚ ಹಾಲು ಸೇರಿಸಿ. ತೆಳ್ಳಗಾದರೆ ಸಮಪ್ರಮಾಣದ ಮೈದಾ ಮತ್ತು ಮೆಕ್ಕೆಜೋಳದ ಹಿಟ್ಟು ಹಾಕಿ ಹದಗೊಳಿಸಿ.

4) ಇದರಲ್ಲಿ ಕೋಳಿಮಾಂಸದ ತುಂಡುಗಳನ್ನು ಮುಳುಗಿಸಿ ಒಂದೊಂದನ್ನೂ ಕುದಿಯುವ ಎಣ್ಣೆಯಲ್ಲಿ ಕರಿಯಿರಿ. ಉದ್ದಿನ ವಡೆ ಹುರಿದಂತೆ ನಡುನಡುವೆ ತಿರುವುತ್ತಾ ನಸುಗಂದು ಬಣ್ಣ ಬರುವಷ್ಟು ಕರಿದು ಬಳಿಕ ಎಣ್ಣೆಯನ್ನು ಬಸಿಯಿರಿ. ಇದನ್ನು ಟಿಷ್ಯೂ ಪೇಪರ್ ಮೇಲೆ ಹರಡಿ ಎಣ್ಣೆ ಹೀರಿಕೊಳ್ಳುವಂತೆ ಮಾಡಿ

5) ಬಿಸಿಬಿಸಿ ಇರುವಂತೆಯೇ ಟೊಮೇಟೊ ಸಾಸ್ ಮತ್ತು ತಂಪುಪಾನೀಯದೊಂದಿಗೆ ಅತಿಥಿಗಳಿಗೆ ಬಡಿಸಿ ಪ್ರಶಂಸೆಗೆ ಪಾತ್ರರಾಗಿ.

English summary

Hot Chicken Crisps Recipe

We all like to have chicken which is crispy, crunchy and yet soft. What if you could make the same chicken in your own kitchen. How exciting it would that be! Your kids will love having them and so will the elders of your family. ere is a very simple way to make your chicken shots at home. You should never miss this simple method of preparation of chicken at home, have a look
Story first published: Tuesday, July 28, 2015, 15:02 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more