For Quick Alerts
ALLOW NOTIFICATIONS  
For Daily Alerts

ಹರಿಯಾಲಿ ಮಟನ್-ಬಕ್ರೀದ್ ಸ್ಪೆಷಲ್

|

ಬಕ್ರೀದ್ ಹಬ್ಬಕ್ಕೆ ಮಟನ್ ಬಳಸಿ ತರಾವರಿಯ ಮಟನ್ ಖಾದ್ಯಗಳನ್ನು ತಯಾರಿಸಲಾಗುವುದು. ಈ ಬಕ್ರೀದ್ ಗೆ ವಿಶೇಷ ಹಬ್ಬದ ಅಡುಗೆಯಾಗಿ ಹರಿಯಾಲಿ ಮಟನ್ ರೆಸಿಪಿ ನೀಡಿದ್ದೇವೆ. ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ಮಾಡುವ ಈ ಮಟನ್ ಸಾರು ಸುವಾಸನೆಯ ಜೊತೆಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Hariyali Mutton Curry Recipe

ಬೇಕಾಗುವ ಸಾಮಾಗ್ರಿಗಳು
ಮಟನ್ 1 ಕೆಜಿ
ಕೊತ್ತಂಬರಿ ಸೊಪ್ಪು 1 ಕಟ್ಟು
ಹಸಿ ಮೆಣಸಿನಕಾಯಿ 3
ಈರುಳ್ಳಿ 3
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಗೋಡಂಬಿ 6-7
ನಕ್ಷತ್ರ ಮೊಗ್ಗು 1
ಚಕ್ಕೆ 1
ಲವಂಗ 3
ಜೀರಿಗೆ ಪುಡಿ 1 ಚಮಚ
ಕೊತ್ತಂಬರಿ ಪುಡಿ 2 ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 3 ಚಮಚ
ಫ್ರೆಶ್ ಕ್ರೀಮ್1 ಚಮಚ
ನೀರು 2 ಕಪ್

ತಯಾರಿಸುವ ವಿಧಾನ:

* ಮಟನ್ ಅನ್ನು ಕ್ಲೀನ್ ಮಾಡಿ.

* ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ಮಿಕ್ಸಿಗೆ ಹಾಕಿ, ಹಸಿ ಮೆಣಸಿನಕಾಯಿ ಹಾಕಿ ಗ್ರೈಂಡ್ ಮಾಡಿ.

* ಈರುಳ್ಳಿ, ಗೋಡಂಬಿ, ಚಕ್ಕೆ, ನಕ್ಷತ್ರ ಮೊಗ್ಗು(anise), ಚಕ್ಕೆ, ಲವಂಗ, ಕರಿ ಮೆಣಸು ಹಾಕಿ ಪೇಸ್ಟ್ ಮಾಡಿ.

* ಪ್ಯಾನ್ ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ರುಬ್ಬಿದ ಈರುಳ್ಳಿ ಮಿಶ್ರಣದ ಪೇಸ್ಟ್ ಹಾಕಿ. 5-6 ನಿಮಿಷ ಸೌಟ್ ನಿಂದ ಆಡಿಸಿ.

* ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ 2-3 ನಿಮಿಷ ಫ್ರೈ ಮಾಡಿ.

* ಈಗ ಜೀರಿಗೆ, ಕೊತ್ತಂಬರಿ ಬೀಜ, ಜೀರಿಗೆ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ, ನಂತರ ರುಬ್ಬಿದ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ, ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಟನ್ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಅರ್ಧ ಗಂಟೆ ಬೇಯಿಸಿ( ಹೀಗೆ ಬೇಯಿಸುವಾಗ ಆಗಾಗ ಸೌಟ್ ನಿಂದ ಆಡಿಸುತ್ತಾ ಇರಿ).

* ಮಟನ್ ಸಂಪೂರ್ಣ ಬೆಂದ ನಂತರ ಫ್ರೆಶ್ ಕ್ರೀಮ್ ಹಾಕಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿದರೆ ಮಟನ್ ಕರಿ ರೆಡಿ.

ಇತರ 7 ಬಗೆಯ ಮಟನ್ ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ.

English summary

Hariyali Mutton Curry Recipe

Hariyali mutton curry is recipe is prepared using a blend of Indian herbs and spices. The creamy texture of the dish comes from the cashew nuts and fresh cream which adds a lip-smacking flavour to it.
X
Desktop Bottom Promotion