For Quick Alerts
ALLOW NOTIFICATIONS  
For Daily Alerts

ಸರಳವಾದ ಮೀನಿನ ಸಾರಿನ ರೆಸಿಪಿ

|

ಹಲವಾರು ಬಗೆಯ ಮೀನುಗಳನ್ನು ತಿನ್ನುತ್ತೇವೆ. ಪ್ರತಿಯೊಂದು ತನ್ನದೇ ಆದ ವಿಶಿಷ್ಟ ರುಚಿಯನ್ನು ಹೊಂದಿರುತ್ತದೆ. ಯಾವ ಮೀನಿಗೆ ಯಾವ ರೀತಿಯಲ್ಲಿ ಅಡುಗೆ ಮಾಡಿದರೆ ಹೆಚ್ಚು ರುಚಿಕರವಾಗಿರುತ್ತದೆ ಎಂಬ ಐಡಿಯಾ ಮೀನು ಪ್ರಿಯರಿಗೆ ಇದ್ದೇ ಇರುತ್ತದೆ. ಇಲ್ಲಿ ನಾವು ನೀಡಿರುವ ರೆಸಿಪಿ ಬಳಸಿ ಸಾಮಾನ್ಯವಾಗಿ ಎಲ್ಲಾ ಬಗೆಯ ಮೀನುಗಳಿಂದಲೂ ರುಚಿಯಾದ ಅಡುಗೆಯನ್ನು ಮಾಡಬಹುದು.

ಬನ್ನಿ, ಆ ಮೀನಿನ ರೆಸಿಪಿಯತ್ತ ಕಣ್ಣಾಡಿಸೋಣ:

Easy Fish Curry Recipe

ಬೇಕಾಗುವ ಪದಾರ್ಥಗಳು
ಮೀನು ಅರ್ಧ ಕೆಜಿ
ದೊಡ್ಡ ನಿಂಬೆ ಹಣ್ಣು ಗಾತ್ರದಷ್ಟು ಹುಣಸೆಹಣ್ಣು
ಈರುಳ್ಳಿ2
ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ
ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
ಟೊಮೆಟೊ 2
ತೆಂಗಿನ ತುರಿ 1 ಕಪ್
ಹಸಿ ಮೆಣಸಿನಕಾಯಿ 2
ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
ಸ್ವಲ್ಪ ಕರಿಬೇವಿನ ಎಲೆ
ನೀರು 1 ಕಪ್
ರುಚಿಗ ತಕ್ಕ ಉಪ್ಪು
ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

* ಮೀನನ್ನು ಶುದ್ಧ ಮಾಡಿ, ಅದಕ್ಕೆ ಹುಣಸೆ ಹಣ್ಣಿನ ರಸ ಮತ್ತು ಉಪ್ಪು ಹಾಕಿ ಅರ್ಧ ಗಂಟೆ ಇಡಿ.

* ತೆಂಗಿನ ತುರಿಯನ್ನು ಪೇಸ್ಟ್ ಮಾಡಿ ಇಡಿ.

* ನಂತರ ಮಣ್ಣಿನ ಮಡಕೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಕರಿಬೇವಿನ ಎಲೆ ಮತ್ತು ಚಿಕ್ಕದಾಗಿ ಕತ್ತರಿಸಿದ ಶುಂಠಿ ಹಾಕಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ನಂತರ ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ 2-3 ನಿಮಿಷ ಫ್ರೈ ಮಾಡಿ. ನಂತರ ಟೊಮೆಟೊ ಹಾಕಿ, ಮೆತ್ತಗಾಗುವವರೆಗೆ ಫ್ರೈ ಮಾಡಬೇಕು.

* ನಂತರ ರುಬ್ಬಿದ ಪೇಸ್ಟ್ ಹಾಕಿ, ಖಾರದ ಪುಡಿ, ಅರಿಶಿಣ ಪುಡಿ ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿ, ಮಿಶ್ರಣ ಕುದಿ ಬರುವಾಗ ಮೀನನ್ನು ಹಾಕಿ ಬೇಯಿಸಿ, ಉರಿಯಿಂದ ಇಳಿಸುವಾಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮೀನಿನ ಸಾರು ರೆಡಿ.

Read more about: fish curry ಮೀನು ಸಾರು
English summary

Easy Fish Curry Recipe

Fish is one of the most healthiest foods you can have daily. This seafood is rich in a lot of proteins, nutrients and of course has healthy amount of omega-3 fatty acids.Fish is an important and healthy food so you can now cook it in various ways to please your tummy.
X
Desktop Bottom Promotion