For Quick Alerts
ALLOW NOTIFICATIONS  
For Daily Alerts

ಪನ್ನೀರ್-ಚಿಕನ್ ಗ್ರೇವಿ, ಸ್ವಲ್ಪ ಖಾರ, ಸಕತ್ ರುಚಿ

By Arshad
|

ಕೋಳಿಮಾಂಸದಿಂದ ಮಾಡಬಹುದಾದ ಖಾದ್ಯಗಳನ್ನು ಸಸ್ಯಾಹಾರಿಗಳಿಗೆ ಒಪ್ಪುವಂತೆ ಮಾಡಬೇಕಾದರೆ ಯಾವ ಸಾಮಾಗ್ರಿ ಸೂಕ್ತ? ಈ ಪ್ರಶ್ನೆಗೆ ಉತ್ತರ, ಪನ್ನೀರ್. ಸರಿಸುಮಾರು ಮಾಂಸಾಹಾರದ ಅಡುಗೆಗಳಲ್ಲಿ ಮಾಂಸಾಹಾರದ ಬದಲಿಗೆ ಪನ್ನೀರ್ ಹಾಕಿ ಸರಿಸುಮಾರು ಮಾಂಸಾಹಾರದ್ದೇ ರುಚಿಯನ್ನು ಪಡೆಯಬಹುದು. ಒಂದು ವೇಳೆ ಇವೆರಡನ್ನೂ ಒಂದೇ ಖಾದ್ಯದಲ್ಲಿ ಸೇರಿಸಿದರೆ? ಅದ್ಭುತ ಕಲ್ಪನೆ! ಮೃದುವಾದ ಪನ್ನೀರ್ ಮತ್ತು ಬಾಯಲ್ಲಿ ಕರಗುವ ಕೋಳಿಮಾಂಸದ ಜೊತೆ ನಿಮ್ಮ ಜಿಹ್ವಾಚಾಪಲ್ಯವನ್ನು ಬಹಳಷ್ಟು ಹೆಚ್ಚಿಸುತ್ತದೆ. ಅದರಲ್ಲೂ ಇದಕ್ಕೆ ಬಳಸುವ ಮಸಾಲೆಗಳನ್ನು ಕೊಂಚ ಹೆಚ್ಚು ಕಡಿಮೆ ಮಾಡಿ ಹಲವು ವೈವಿಧ್ಯಗಳನ್ನು ಪಡೆಯಬಹುದು.

ಪನ್ನೀರ್ ಹಾಲಿನಿಂದ ಮಾಡಿರುವ ಕಾರಣ ಹಾಲಿನ ಗುಣಗಳನ್ನೆಲ್ಲಾ ಪಡೆದಿರುತ್ತದೆ. ಮುಖ್ಯವಾಗಿ ಹಾಲಿನ ಕ್ಯಾಲ್ಸಿಯಂ ಪನ್ನೀರಿನಲ್ಲಿಯೂ ಇದ್ದು ಹಾಲಿಗಿಂತ ಹೆಚ್ಚು ಸಾಂದ್ರೀಕೃತವಾದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತದೆ. ಇತ್ತ ಕೋಳಿಮಾಂಸದಲ್ಲಿರುವ ಉತ್ತಮ ಪ್ರಮಾಣದ ಪ್ರೋಟೀನು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಒಟ್ಟಾರೆ ಇದು ದೇಹಕ್ಕೆ ಅತ್ಯಂತ ಪುಷ್ಟಿಕರ ಆಹಾರವಾಗಿದೆ. ಬನ್ನಿ, ಇಂದು ಈ ಜೋಡಿಯಿಂದ ಖಾರವಾದ ಸಾರನ್ನು ಹೇಗೆ ಮಾಡುವುದೆಂದು ಕಲಿಯೋಣ: 8 ಬಗೆಯ ಸ್ವಾದಿಷ್ಟಕರ ಪನ್ನೀರ್ ರೆಸಿಪಿ

Easy And Spicy Paneer Chicken Gravy Recipe
 

ಅಗತ್ಯವಿರುವ ಸಾಮಾಗ್ರಿಗಳು

*ಕೋಳಿಮಾಂಸ : ಅರ್ಧ ಕೇಜಿ (ತಾಜಾ ಕೋಳಿ ಉತ್ತಮ)

*ಪನ್ನೀರ್ : ನೂರು ಗ್ರಾಂ

*ಟೊಮೇಟೊ ಪ್ಯೂರಿ: ಅರ್ಧ ಕಪ್

*ಈರುಳ್ಳಿ ಪ್ಯೂರಿ: ಅರ್ಧ ಕಪ್

*ಸಣ್ಣದಾಗಿ ಕತ್ತರಿಸಿದ ಈರುಳ್ಳಿ - ಅರ್ಧ ಕಪ್

*ಗರಂ ಮಸಾಲ - 2 ಚಿಕ್ಕ ಚಮಚ

*ಕೆಂಪು ಮೆಣಸಿನ ಪುಡಿ - 1 ಚಿಕ್ಕ ಚಮಚ

*ಧನಿಯ ಪುಡಿ - 1/2 ಚಿಕ್ಕ ಚಮಚ

*ಹಸಿಮೆಣಸು - 7 ರಿಂದ 8

*ಸಾಸಿವೆ- 1/4th ಚಿಕ್ಕ ಚಮಚ

*ಎಣ್ಣೆ: ಅಗತ್ಯಕ್ಕೆ ತಕ್ಕಂತೆ

*ಲಿಂಬೆ ರಸ - 2 ಚಿಕ್ಕ ಚಮಚ

*ಉಪ್ಪು: ರುಚಿಗನುಸಾರ ಘಮಘಮಿಸುವ ಚಿಕನ್ ಕರಿ: ಬರೀ 20 ನಿಮಿಷ ಸಾಕು!

ವಿಧಾನ:

1) ಒಂದು ದಪ್ಪತಳದ ಬಾಣಲೆ ಅಥವಾ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಮಾಡಿ. ಇದರಲ್ಲಿ ಪನ್ನೀರ್ ತುಂಡುಗಳನ್ನು ಹಾಕಿ ಎಲ್ಲಾ ಬದಿಗಳು ಕಂದು ಬಣ್ಣ ಬರುವಷ್ಟು ಹುರಿಯಿರಿ. ಬಳಿಕ ಪನ್ನೀರ್ ತುಂಡುಗಳನ್ನು ಇನ್ನೊಂದು ಪಾತ್ರೆಯಲ್ಲಿ ಬದಿಗಿಡಿ

2) ಬಳಿಕ ಇದೇ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಬಳಿಕ ಈರುಳ್ಳಿ ಮತ್ತು ಹಸಿಮೆಣಸು ಹಾಕಿ ಈರುಳ್ಳಿ ಕೊಂಚ ಕೆಂಪು ಬಣ್ಣ ಬರುವವರೆಗೆ ಹುರಿಯಿರಿ.

3) ಈಗ ಟೊಮೇಟೋ ಪ್ಯೂರಿ, ಈರುಳ್ಳಿ ಪ್ಯೂರಿ, ಗರಂ ಮಸಾಲೆ ಪುಡಿ, ಮೆಣಸಿನ ಪುಡಿ, ಧನಿಯ ಪುಡಿ ಹಾಕಿ ಹುರಿಯಿರಿ.

4) ಇದರಿಂದ ಕೊಂಚ ಎಣ್ಣೆ ಬಿಡುತ್ತಿದ್ದಂತೆಯೇ ಪನ್ನೀರ್ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ

5) ಬಳಿಕ ಕೋಳಿಮಾಂಸದ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ ಉಪ್ಪು ಸೇರಿಸಿ ಇದರ ಮೇಲೆ ಲಿಂಬೆರಸ ಸೇರಿಸಿ ಚಿಕ್ಕ ಉರಿಯಲ್ಲಿ ಕೋಳಿ ಮಾಂಸ ಬೇಯುವವರೆಗೆ ನಡುನಡುವೆ ತಿರುವುತ್ತಾ ಹುರಿಯಿರಿ.

 

6) ಈ ಸಾರು ರೊಟ್ಟಿ ಮತ್ತು ಅನ್ನದೊಂದಿಗೆ ಸೇವಿಸಲು ತುಂಬಾ ರುಚಿಯಾಗಿರುತ್ತದೆ.

ಸಲಹೆ:

1) ಅನ್ನದೊಡನೆ ಸೇವಿಸುವುದಾದರೆ ಕೊಂಚ ನೀರನ್ನು ಅಂತಿಮ ಹಂತದಲ್ಲಿ ಸೇರಿಸಬಹುದು.

2) ಹೆಚ್ಚಿನ ರುಚಿಗೆ ಕೊಂಚ ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು.

English summary

Easy And Spicy Paneer Chicken Gravy Recipe

When panner and chicken are combined together, you can surely get to have something different. Yes, those of you who would have tried this wonderful combination will definitely agree to it. So, today we shall prepare an easy and spicy paneer chicken curry recipe.
Story first published: Friday, January 22, 2016, 18:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more