For Quick Alerts
ALLOW NOTIFICATIONS  
For Daily Alerts

ಅನ್ನದ ಜೊತೆ ತಿನ್ನಲು ಬೆಸ್ಟ್ ಈ ಮಟನ್ ಸಾರು

|

ಮಟನ್ ಸಾರನ್ನು ನಾನಾ ರುಚಿಯಲ್ಲಿ ಮಾಡಬಹುದು. ಅದರಲ್ಲೊಂದು ತೆಂಗಿನ ಕಾಯಿಯನ್ನು ರುಬ್ಬಿ ಮಾಡುವ ಮಟನ್ ಸಾರು. ಅನ್ನದ ಜೊತೆ ತಿನ್ನಲು ಈ ರೀತಿ ಸಾರು ಮಾಡುವುದು ಒಳ್ಳೆಯದು. ಕೆಲವರಿಗೆ ತೆಂಗಿನಕಾಯಿ ಹಾಕಿ ನಾನ್ ವೆಜ್ ಸಾರು ಮಾಡಿದರೆ ಇಷ್ಟವಾಗುವುದಿಲ್ಲ. ಆದರೆ ತೆಂಗಿನ ಕಾಯಿ ಸೇರಿಸಿ ಮಾಡಿದ ಸಾರು ತನ್ನದೇಯಾದ ರುಚಿಯಿಂದ ಸ್ವಾದಿಷ್ಟಕರವಾಗಿರುತ್ತದೆ.

ತೆಂಗಿನ ಕಾಯಿ ಸೇರಿಸಿದ ಸಾರು ಇಷ್ಟ ಪಡುವುದಾದರೆ ಇಲ್ಲಿದೆ ನೋಡಿ ನೋಡಿ ಮಟನ್ ಸಾರಿನ ರೆಸಿಪಿ.

Coconut Mutton Curry Recipe

ಬೇಕಾಗುವ ಸಾಮಾಗ್ರಿಗಳು
ಮಟನ್ ಅರ್ಧ ಕೆಜಿ
ತೆಂಗಿನ ತುರಿ (ತೆಂಗಿನ ಕಾಯಿಯ ಅರ್ಧ ಭಾಗ)
ಈರುಳ್ಳಿ 2
ಟೊಮೆಟೊ 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಹಸಿ ಮೆಣಸಿನಕಾಯಿ 3
ಮೆಂತೆ 1 ಚಮಚ
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಏಲಕ್ಕಿ 2
ಲವಂಗ 3
ಕರಿ ಬೇವಿನ ಎಲೆ
ಖಾರದ ಪುಡಿ 1 ಚಮಚ
ಕೊತ್ತಂಬರಿ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ
ನೀರು 2 ಕಪ್
ಕೊತ್ತಂಬರಿ ಸೊಪ್ಪು (ಅಲಂಕರಿಸಲು)

ತಯಾರಿಸುವ ವಿಧಾನ

* ಮಟನ್ ತುಂಡುಗಳನ್ನು ತೊಳೆದು ಸ್ವಚ್ಛ ಮಾಡಿ, ನಂತರ ಅದನ್ನು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ, ಬೇಯಲು ತಕ್ಕ ನೀರು ಹಾಕಿ 5-6 ವಿಶಲ್ ಬರುವವರೆ ಬೇಯಿಸಿ. ನಂತರ ಅದ್ನು ತೆಗೆದು ಒಂದು ಬದಿಯಲ್ಲಿಡಿ.

* ಈಗ ತೆಂಗಿನ ತುರಿ, ಹಸಿ ಮೆಣಸಿನಕಾಯಿ, ಜೀರಿಗೆ ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿ.

* ಈಗ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಮೆಂತೆ ಹಾಕಿ ನಂತರ ಕರಿ ಬೇವಿನ ಎಲೆ ಹಾಕಿ. ನಂತರ ಚಕ್ಕೆ, ಲವಂಗ, ಏಲಕ್ಕಿ ಹಾಕಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ನಂತರ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ.

* ಈಗ ರುಬ್ಬಿದ ಪೇಸ್ಟ್ ಹಾಕಿ 5 ನಿಮಿಷ ಹುರಿದು ನಂತರ ಮಟನ್ ಹಾಕಿ ಖಾರದ ಪುಡಿ, ಅರಿಶಿಣ ಪುಡಿ ಹಾಕಿ. ರುಚಿಗೆ ತಕ್ಕ ಉಪ್ಪು ಸೇರಿಸಿ, ಮಟನ್ ಬೇಯಿಸಿದ ನೀರಿನಿಂದ 2 ಕಪ್ ನೀರು ಸೇರಿಸಿ ಸಾರನ್ನು 5-7 ನಿಮಿಷ ಕುದಿಸಿ.

* ನಂತರ ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಟನ್ ಸಾರು ರೆಡಿ.

English summary

Coconut Mutton Curry Recipe | Variety Of Mutton Curry Recipe

Mutton curries are prepared in various methods in India. Some recipes are cooked with a lot of spices while others are comparatively bland. Spice blends are different for different regions and you can spot the origin of a dish by identifying the ingredients in it.
X
Desktop Bottom Promotion